Advertisement

ಕೋವಿಡ್ ಬಗ್ಗೆ ಮುಂಜಾಗ್ರತೆ ಅವಶ್ಯ: ನಟರಾಜ್‌

08:20 AM Aug 11, 2020 | Suhan S |

ರಾಮನಗರ: ಸರ್ಕಾರ ಹಾಗೂ ಆರೋಗ್ಯ ಇಲಾಖೆ ತಿಳಿಸಿರುವ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸುವ ಮೂಲಕ ಸೋಂಕಿ ನಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್ ಮನವಿ ಮಾಡಿಕೊಂಡರು.

Advertisement

ತಾಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್‌ ಇಲಾಖೆ ಹಾಗೂ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್‌ಗಳ ಸಂಯುಕ್ತಾಶ್ರಯದಲ್ಲಿ ಕೊರೊನಾ ಕುರಿತಾದ ಜಾಗೃತಿ ಮೂಡಿಸುವ ಬೀದಿ ನಾಟಕ, ಆಯುಷ್‌ ಇಲಾಖೆ ಔಷಧೀಯ ಗಿಡಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗುವ ಔಷಧೀಯ ಗಿಡಮೂಲಿಕೆ ಬಳಸಿ ಆರೋಗ್ಯವರ್ಧನೆ ಮಾಡಿಕೊಳ್ಳಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್‌.ಮರೀಗೌಡ, ಕೋವಿಡ್  ಸೋಂಕಿತರನ್ನು ಗೌರವದಿಂದ ಕಾಣಬೇಕು ಎಂದರು. ಕ್ಷೇತ್ರ ಸಮನ್ವಯ ಅಧಿಕಾರಿ ಸಂಪತ್‌ ಕುಮಾರ್‌ ಮಾತನಾಡಿ, ಮುಂಜಾಗ್ರತಾ ಕ್ರಮ ತಪ್ಪದೇ ಪಾಲಿಸುವ ಮೂಲಕ ಕೊರೊನಾ ವ್ಯಾಪಿ ಸ ದಂತೆ ತಡೆಯಬಹುದು ಎಂದರು. ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್‌ ಸಂಸ್ಥಾಪಕ ಕಾರ್ಯದರ್ಶಿ ವಿಜಯ್ ರಾಂಪುರ ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಷ್‌ ವಿಭಾಗದ ಡಾ. ಸದಾಶಿವಾನಂದಗೌಡ ಪಾಟೀಲ್ , ಡಾ.ರಂಗಪ್ಪ, ಔಷಧೀಯ ಗಿಡಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ, ಯುವ ಕವಿಗಳಾದ ಲಕ್ಷ್ಮೀ ಕಿಶೋರ್‌ ಅರಸ್‌ ಕೂಡೂÉರು, ದರ್ಶನ್‌ಗೌಡ ಮತ್ತೀಕೆರೆ, ಬನ್ನಿಕುಪ್ಪೆ (ಬಿ), ಗ್ರಾಪಂ ಮಾಜಿ ಅಧ್ಯಕ್ಷ ಎಚ್‌. ಗೋಪಾಲ್‌ರಾಜು, ಗ್ರಾಪಂ ಮಾಜಿ ಸದಸ್ಯ ಕೃಷ್ಣಪ್ಪ, ಸೊಸೈಟಿ ಶಿವರುದ್ರಯ್ಯ, ಮುಖಂಡರಾದ ಬೈರೇಗೌಡ, ಚಿಕ್ಕವೀರಯ್ಯ, ಮುಖ್ಯ ಶಿಕ್ಷಕಿ ರಾಜೇಶ್ವರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next