Advertisement

ಬೀದರನಲ್ಲಿ ಕೋವಿಡ್‌ ಲ್ಯಾಬ್‌ ಆರಂಭ

06:55 AM Jun 02, 2020 | Suhan S |

ಬೀದರ: ಬಹು ಜನರ ನಿರೀಕ್ಷೆಯಂತೆ ಕೋವಿಡ್‌-19 ಮೊಲಿಕ್ಯೂಲರ್‌ ವೈರಾಲೋಜಿ ನೂತನ ಪ್ರಯೋಗಾಲಯ ಕಾರ್ಯಾರಂಭಕ್ಕೆ ನಗರದಲ್ಲಿ ಸೋಮವಾರ ಚಾಲನೆ ಸಿಕ್ಕಿತು.

Advertisement

ನಗರದ ಬಿಮ್ಸ್‌ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಪ್ರಯೋಗಾಲಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದರನಲ್ಲಿ ಕೋವಿಡ್‌-19 ವೈರಾಣು ಲ್ಯಾಬ್‌ ಆರಂಭವಾಗಿರುವುದು ಜನರ ಆರೋಗ್ಯ ಸೇವೆ ಹಿತದೃಷ್ಟಿಯಿಂದ ಉತ್ತಮ ಪ್ರಯತ್ನವಾಗಿದೆ. ಈ ಲ್ಯಾಬ್‌ನಿಂದ ಜಿಲ್ಲೆಯ ಜನತೆಗೆ ಮುಂಬರುವ ದಿನಗಳಲ್ಲಿ ಕೋವಿಡ್‌-19 ಸೋಂಕಿತ ರೋಗಿಗಳ ತಪಾಸಣೆಗೆ ಹಾಗೂ ಶೀಘ್ರ ಚಿಕಿತ್ಸೆಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ಬೀದರನಲ್ಲಿ ಈವರೆಗೆ ಯಾವುದೇ ತರಹದ ವೈರಾಲಜಿ ಪ್ರಯೋಗಾಲಯ ಪರೀಕ್ಷೆಗಳು ಲಭ್ಯವಿದ್ದಿಲ್ಲ. ಪ್ರಸ್ತುತ ಗಂಟಲು ದ್ರವ ಮಾದರಿ ಇತ್ಯಾದಿ ಪರೀಕ್ಷೆಗಾಗಿ ಬೇರೆ ಜಿಲ್ಲೆಗೆ ರವಾನಿಸಿ ಮಾಹಿತಿ ಪಡೆಯಬೇಕಾಗುತ್ತಿತ್ತು. ಇದರಿಂದ ಸಮಯ ಬೇಕಾಗುತ್ತಿತ್ತು. ಜಿಲ್ಲೆಗೆ ಈ ಪ್ರಯೋಗಾಲಯ ಅತ್ಯಗತ್ಯವಿದೆ ಎಂದು ಭಾವಿಸಿ ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ದಿನಕ್ಕೆ 600 ಮಾದರಿ ಪರೀಕ್ಷೆ: ಬ್ರಿಮ್ಸ್‌ ಸಂಸ್ಥೆಯ ಮಿನಿ ಜೀವಶಾಸ್ತ್ರ ವಿಭಾಗದ ಅಧಿಧೀನದಲ್ಲಿ ಮೊಲಿಕ್ಯೂಲರ್‌ ವೈರಾಲಜಿ ಪ್ರಯೋಗಾಲಯ ರಾಜ್ಯ ಪ್ರಕೃತಿ ವಿಕೋಪ ನಿಗ್ರಹಣ ನಿಧಿ ಯಿಂದ ನಿರ್ಮಾಣವಾಗಿದೆ. ಇದು ಐಸಿಎಂಆರ್‌ನಿಂದ ಮಾನ್ಯತೆ ಹೊಂದಿದೆ. ಇಲ್ಲಿ ಒಬ್ಬ ಮುಖ್ಯ ಸಂಶೋಧಕರು, ಇಬ್ಬರು ವಿಜ್ಞಾನಿಗಳು ಹಾಗೂ ಪರಿಣಿತ ಪ್ರಯೋಗಾಲಯ ತಂತ್ರಜ್ಞರು ಕಾರ್ಯ ನಿರ್ವಹಿಸಲಿದ್ದಾರೆ. ಐಸಿಎಂಆರ್‌ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುವರು.

ಪ್ರಯೋಗಾಲಯ ಮೂರು ಪಾಳೆಯದಲ್ಲಿ ಹಾಗೂ ಪೂರ್ಣ ಪ್ರಮಾಣ ಕಾರ್ಯನಿರ್ವಹಿಸಿದಲ್ಲಿ ದಿನಕ್ಕೆ 600 ಮಾದರಿ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಬ್ರಿಮ್ಸ್‌ ನಿರ್ದೇಶಕ ಡಾ|ಶಿವಕುಮಾರ ಮಾಹಿತಿ ನೀಡಿದರು.

Advertisement

ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಖಾಶೆಂಪುರಹೀಂ ಖಾನ್‌, ಬಿ.ನಾರಾಯಣರಾವ್, ಎಂಎಲ್‌ಸಿ ಅರವಿಂದಕುಮಾರ ಅರಳಿ, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್‌ಪಿ ನಾಗೇಶ ಡಿ.ಎಲ್‌., ಎಸಿ ಅಕ್ಷಯಶ್ರೀಧರ, ಡಿಎಚ್‌ಒ ಡಾ| ವಿ.ಜಿ. ರೆಡ್ಡಿ, ವೈದ್ಯಾ ಧಿಕಾರಿಗಳಾದ ಡಾ| ರಥಿಕಾಂತ ಸ್ವಾಮಿ, ಡಾ| ವಿಜಯಕುಮಾರ ಅಂತಪ್ಪನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next