ಬೆಂಗಳೂರು: ಹಿಂದೂ ದೇವಾಲಯಗಳ ಅರ್ಚಕರು, ಮಸೀದಿಗಳ ಇಮಾಮ್ ಮತ್ತುಮೌಸಾನ್, ಚರ್ಚ್‌ಗಳ ಪಾದ್ರಿ, ಸಿಖ್ ಧರ್ಮಗುರು ಗಳಿಗೆ ಚಾಮರಾಜಪೇಟೆಯಲ್ಲಿ ಆಹಾರಧಾನ್ಯ ಕಿಟ್ ಹಾಗೂ ಐದು ಸಾವಿರ ರೂ. ಆರ್ಥಿಕನೆರವು ನೀಡಲಾಯಿತು.
ಚಾಮರಾಜಪೇಟೆಯಲ್ಲಿ ಬುಧವಾರ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ 130ದೇವಾಲಯಗಳ ಅರ್ಚಕರು, 95 ಮಸೀದಿಗಳಇಮಾಮ್ ಮತ್ತು ಮೌಸಾನ್, 45 ಚರ್ಚ್‌ಗಳಫಾದರ್, 4 ಸಿಖ್ ಧರ್ಮಗಳು ಸೇರಿ 380ಜನರಿಗೆ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕಜಮೀರ್ ಅಹಮದ್ ಅವರು ತಮ್ಮ ವೈಯಕ್ತಿಕವೆಚ್ಚದಲ್ಲಿ ಎರಡು ತಿಂಗಳಿಗೆ ಆಗುವಷ್ಟು ಆಹಾರಧಾನ್ಯಕಿಟ್ ಜತೆಗೆ ಐದು ಸಾವಿರ ರೂ. ನೆರವುನೀಡಿ ಗೌರವಿಸಿದರು.
ಇದೇ ವೇಳೆ ಸ್ಟೀಮ್ ಯಂತ್ರ, ಸ್ಯಾನಿಟೈಜರ್,ಮಾಸ್ಕ್ ಗಳನ್ನೂ ಸಹ ನೀಡಲಾಯಿತು. ಕೊರೊನಾ ಹೋಗಲಾಡಿಸಿ ಜನರ ಕಷ್ಟ ಕಡಿಮೆಯಾಗಲಿಎಂದು ಸರ್ವಧರ್ಮ ಪ್ರಾರ್ಥನೆ ಸಹಆಯೋಜಿಸಲಾಗಿತ್ತು.
ಸಿದ್ದು ಗೈರು: ಚಾಮರಾಜಪೇಟೆಯ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಅವರು ಈ ಕಾರ್ಯಕ್ರಮದಲ್ಲಿ ಹಾಜರಾಗಬೇಕಿತ್ತಾದರೂ ಅನಾರೋಗ್ಯ ಕಾರಣ ಗೈರುಹಾಜರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದಜಮೀರ್ ಅಹಮದ್, ನಾನು ಮೊದಲಿನಿಂದಲೂಸಿದ್ದರಾಮಯ್ಯ ಅವರಿಗೆ ಮಾತ್ರ ಆಹ್ವಾನನೀಡುತ್ತಿದೆ.
ಅನಾರೋಗ್ಯ ಕಾರಣ ನಾನೇಬರುವುದು ಬೇಡ ಎಂದು ಮನವಿ ಮಾಡಿದೆಎಂದು ಹೇಳಿದರು.ಅರ್ಚಕರು, ಇಮಾಮ್, ಪಾದ್ರಿಗಳುಸಂಕಷ್ಟದಲ್ಲಿದ್ದು ಜನರ ಪ್ರಾರ್ಥನೆ ದೇವರಿಗೆಸಲ್ಲಿಸುವ ಕೆಲಸ ಮಾಡುವ ಅವರ ನೆರವಿಗೆಧಾವಿಸಿದ್ದೇನೆ. ಇದೊಂದು ವಿನೂತನಕಾರ್ಯಕ್ರಮ ಎಂದು ತಿಳಿಸಿದರು.