Advertisement

ಮಕ್ಕಳಿಗೆ ಕೊರೊನಾ ನಂತರದ ಅಂಗಾಂಗ ವೈಫ‌ಲ್ಯ ಕಾಟ

05:02 PM Jul 05, 2021 | Team Udayavani |

ಬೆಂಗಳೂರು: ಮೂರನೇ ಅಲೆಯವರೆಗೂಕೊರೊನಾ ಕಾಟ ಮಕ್ಕಳಿಗಿಲ್ಲ ಎಂದು ನಿಶ್ಚಿಂತವಾಗಿರುವಂತಿಲ್ಲ. ಕೊರೊನಾ ಅಧಿಕೃತವಾಗಿದೃಢಪಟ್ಟಿಲ್ಲ ಎಂದಾದರೂ ಅದರ ಅಡ್ಡಪರಿಣಾಮಗಳಲ್ಲಿ (ಪೋಸ್ಟ್‌ ಕೋವಿಡ್‌) ಒಂದಾದಮಲ್ಟಿಸಿಸ್ಟಂ ಇನ್ಫೊ Éàಮೇಟರಿಸಿಂಡ್ರೋಮ್‌ ಎಂಬ ಅಂಗಾಂಗಗಳ ಉರಿಊತ ಮತ್ತು ಅಂಗಾಂಗಳ ವೈಫ‌ಲ್ಯ ಪ್ರಕರಣಗಳುಮಕ್ಕಳಲ್ಲಿಕಂಡು ಬರುತ್ತಿವೆ.

Advertisement

ಪ್ರಮುಖವಾಗಿ ಕೊರೊನಾಸೋಂಕಿಗೊಳಗಾದ ಮಕ್ಕಳು, ಸೋಂಕಿತರ ಸಂಪರ್ಕಕ್ಕೆ ಬಂದಿರುವ ಮಕ್ಕಳುಹಾಗೂ ಹೋಂ ಐಸೋಲೇಷನ್‌ ಇದ್ದ ಸೋಂಕಿತರಮನೆಯಲ್ಲಿರುವ 18 ವರ್ಷದ ಮಕ್ಕಳು ಈ ಕಾಯಿಲೆಕಾಣಿಸಿಕೊಳ್ಳುತ್ತಿದೆ. ಮೊದಲ ಅಲೆಯಲ್ಲಿಯೂ ಈಸಮಸ್ಯೆ ಇದ್ದು, ಒಂದು ಲಕ್ಷಕ್ಕೆ ಒಬ್ಬ ಮಕ್ಕಳಲ್ಲಿ ಕಂಡುಬಂದಿತ್ತು. ಆದರೆ, ಎರಡನೇ ಅಲೆ ತೀವ್ರವಾಗಿದ್ದ ಹಿನ್ನೆಲೆ ರಾಜ್ಯದಲ್ಲಿ 1,500 ಮಕ್ಕಳಿಗೆ ಬರಬಹುದು ಎಂದು ಭಾರತೀಯ ಶಿಶು ವೈದ್ಯರ ಸಂಘ ಅಂದಾಜಿಸಿದೆ.

ಹೆಚ್ಚಿನ ಪ್ರಕರಣಗಳಲ್ಲಿ ತಂದೆ ತಾಯಿ ಅಥವಾಮನೆಯಲ್ಲಿರುವ ಸದಸ್ಯರಿಗೆ ಕೊರೊನಾ ಸೋಂಕುದೃಢಪಟ್ಟಿರುತ್ತದೆ. ಅದೇ ಮನೆಯಲ್ಲಿರುವಮಗುವಿಗೂ ಕೂಡಾ ಸೋಂಕು ತಗುಲಿರುತ್ತದೆ. ಆದರೆ, ಲಕ್ಷಣ ರಹಿತವಾಗಿರುತ್ತಾರೆ. ಅಂತಹ ಮಕ್ಕಳದೇಹ ಸೇರಿರುವ ಕೊರೊನಾ ಜ್ವರ, ಕೆಮ್ಮು, ಉಸಿರಾಟಸಮಸ್ಯೆಗಳನ್ನು ಉಂಟುಮಾಡದೇ ಸದ್ದಿಲ್ಲದೆ ಎರಡುವಾರಕ್ಕೆ ನಾಶವಾಗುತ್ತದೆ. ಆದರೆ, ಅದು ದೇಹಕ್ಕೆಸೇರಿದ ಸಂದರ್ಭದಲ್ಲಿ ಅಂಗಾಂಗಳಿಗೆ ಮಾಡಿ, ಎರಡುವಾರದಿಂದ ಆರು ವಾರದ ಬಳಿಕ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತಿದೆ ಎಂದು ಇಂದಿರಾಗಾಂಧಿಮಕ್ಕಳ ಆಸ್ಪತ್ರೆ ಪ್ರಾಧ್ಯಾಪಕ,ತೀವ್ರನಿಗಾಘಟಕಮುಖ್ಯಸ್ಥ ಡಾ.ಜೆ.ವಿ. ಬಸವರಾಜ ತಿಳಿಸಿದ್ದಾರೆ.

ಪ್ರಮುಖ ಅಂಗಾಂಗಳಿಗೆ ಹಾನಿ: ಅಂಗಾಂಗಗಳ ಉರಿಊತ ಅಥವಾ ವೈಫ‌ಲ್ಯತೆ ಎಂದರೆ ಹೃದಯ,ಮೂತ್ರಪಿಂಡ, ಯಕೃತ್‌ನಂತಹ ಅಂಗಾಂಗಗಳಿಗೆಹಾನಿಯಾಗಿ ಬಾಹು ಬರುವುದು ಅಥವಾ ಅವುಗಳ ಕೆಲಸ ಕಡಿಮೆ ಮಾಡುವುದಾಗಿದೆ. ಹೃದಯ ಸಮಸ್ಯೆಹೆಚ್ಚಿನ ಮಕ್ಕಳಲ್ಲಿ ಕಂಡುಬರುತ್ತಿದೆ. ಈಗಾಗಲೇರಾಜ್ಯದಲ್ಲಿಯೂ ಮಲ್ಟಿಸಿಸ್ಟಂ ಇನ್ಫೊ Éàಮೇಟರಿಸಿಂಡ್ರೋಮ್‌ 100ಕ್ಕೂ ಹೆಚ್ಚು ಪ್ರಕರಣಗಳುವರದಿಯಾಗಿದೆ. ಸರ್ಕಾರವು ಈ ಕಾಯಿಲೆಯನ್ನುಗಂಭೀರವಾಗಿ ಪರಿಗಣಿಸಿದ್ದು, ಮಕ್ಕಳ ಆಸ್ಪತ್ರೆಆಗಮಿಸುವ ಮಕ್ಕಳಲ್ಲಿಕೊರೊನಾ ಸೋಂಕು ಅಥವಾಸೋಂಕಿತರ ಸಂಪರ್ಕದ ಮಾಹಿತಿ ಪಡೆದು ಚಿಕಿತ್ಸೆನೀಡಲಾಗುತ್ತಿದೆ ಎಂದು ತಿಳಿಸಿದರು.

ಗುರುತಿಸುವುದು ಹೇಗೆ?: ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಅಥವಾ ಸೋಂಕು ಬಂದಿದ್ದ ಮಕ್ಕಳಲ್ಲಿ ಜ್ವರ, ಕಣ್ಣು ಕೆಂಪಾಗುವುದು, ಚರ್ಮದಲ್ಲಿ ತುರಿಕೆ, ವಾಂತಿ, ಭೇದಿ, ಉಸಿರಾಟ ಸಮಸ್ಯೆಕಾಣಿಸಿಕೊಳ್ಳುತ್ತದೆ

Advertisement

2 ರಿಂದ 6 ವಾರ ಎಚ್ಚರ: ಕೊರೊನಾ ಸೋಂಕಿಗೊಳಗಾಗಿದ್ದ, ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಮಕ್ಕಳಲ್ಲಿಎರಡು ವಾರದಿಂದ ಆರು ವಾರದೊಳಗೆ ಈಅಡ್ಡಪರಿಣಾಮಗಳು ಕಂಡು ಬರಬಹುದು.ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ಮಾಡಿದರೆ ಸಮಸ್ಯೆಕಟ್ಟಿಟ್ಟ ಬುತ್ತಿ. ಶೀಘ್ರದಲ್ಲಿಯೇ ಗುರುತಿಸಿ ಮಕ್ಕಳನ್ನುವೈದ್ಯರ ಬಳಿಕ ತಪಾಸಣೆಗೊಳಪಡಿಸಿ ಚಿಕಿತ್ಸೆ ಪಡೆದರೆಶೇ.100ರಷ್ಟು ಗುಣಮುಖವಾಗುತ್ತಾರೆ ಎಂದುಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮಕ್ಕಳ ವೈದ್ಯರಿಗೆ ಬಗ್ಗೆ ತರಬೇತಿ: ಮಕ್ಕಳಲ್ಲಿಕಂಡು ಬರುತ್ತಿರುವ ಈ ಸಮಸ್ಯೆಗೆ ಸಂಬಂಧಿಸಿದಂತೆರಾಜ್ಯದಲ್ಲಿರುವ ಮಕ್ಕಳ ವೈದ್ಯರಿಗೆ ಇಂದಿರಾಗಾಂಧಿಮಕ್ಕಳ ಆಸ್ಪತ್ರೆಯಿಂದ ಆನ್‌ಲೈನ್‌ ತರಬೇತಿನೀಡಲಾಗುತ್ತಿದೆ. ಈಗಾಗಲೇ ಸರ್ಕಾರಿ ಮತ್ತುಖಾಸಗಿ ಆಸ್ಪತ್ರೆಗಳ 3,000ಕ್ಕೂ ಅಧಿಕ ವೈದ್ಯರುತರಬೇತಿ ಪಡೆದಿದ್ದಾರೆ. ಸಮಸ್ಯೆಯನ್ನು ಗುರುತಿಸುವಬಗೆ, ಆನಂತರ ಕೈಗೊಳ್ಳಬೇಕಾದ ಪರೀಕ್ಷೆಗಳು, ಚಿಕಿತ್ಸಾಕ್ರಮ ತಿಳಿಸಿಕೊಡಲಾಗುತ್ತಿದೆ.

ಜಯಪ್ರಕಾಶ್ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next