Advertisement

ಮನೆಗೆ ತೆರಳಿ ಮಾಹಿತಿ ಸಂಗ್ರಹ

12:46 PM Apr 25, 2020 | mahesh |

ಮಂಡ್ಯ: ನಗರದ ಎಲ್ಲಾ 35 ವಾರ್ಡ್‌ಗಳಲ್ಲೂ ನಗರಸಭೆ ಆಯುಕ್ತ ಎಸ್‌. ಲೋಕೇಶ್‌ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕೋವಿಡ್ ಸೋಂಕು ಪತ್ತೆ ಹಚ್ಚುವ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಶುಕ್ರವಾ ರದಿಂದ ಚಾಲನೆ ನೀಡಲಾಗಿದೆ.

Advertisement

ಜ್ವರ, ಕೆಮ್ಮು, ನೆಗಡಿ, ಕಫ‌ ಲಕ್ಷಣಗಳಿಂದ ಯಾರು ಬಳಲುತ್ತಿರುವವರನ್ನು ಗುರುತಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಲಕ್ಷಣಗಳಿಂದ ಬಳಲುತ್ತಿದ್ದರೂ ಕ್ವಾರಂಟೈನ್‌ಗೆ ಒಳಪಡಿಸುವರೆಂಬ ಭಯದಿಂದ ಚಿಕಿತ್ಸೆಗೆ ಒಳಗಾಗಲು ಹಿಂದೇಟು ಹಾಕುತ್ತಿದ್ದಾರೆ. ಅನಾರೋಗ್ಯ ಇರುವವರು ವೈದ್ಯಕೀಯ ತಪಾಸಣೆಗೆ ಒಳಗಾಗಲು ವಿರೋಧ ವ್ಯಕ್ತಪಡಿಸಿದಲ್ಲಿ ಬಲವಂತ ಮಾಡದೆ ನಗರಸಭೆ ಪೌರಾಯುಕ್ತರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈ ಸಮೀಕ್ಷೆಯಿಂದ
ಯಾರೂ ಗಾಬರಿಗೆ ಒಳಗಾಗುವುದು ಬೇಡ. ಬೇರೆ ಜಿಲ್ಲೆ ಅಥವಾ ರಾಜ್ಯದಿಂದ ಇಲ್ಲಿಗೆ ಬಂದವರು ತಪಾಸಣೆಗೆ ಒಳಗಾಗಿಲ್ಲ. ಸೋಂಕಿನ ಲಕ್ಷಣಗಳು ಇಲ್ಲದಿರುವವರಲ್ಲೂ ಕೋವಿಡ್ ಸೋಂಕು ಕಂಡುಬರುತ್ತಿರುವುದು ಎಲ್ಲರಿಗೂ ತಲೆನೋವು ತಂದಿದೆ. ಅವರನ್ನು ಗುರುತಿಸುವುದು ಸವಾಲಿನ ಕೆಲಸವೂ ಆಗಿದೆ. ಹೀಗಾಗಿ ಎಲ್ಲ ಜನರನ್ನು ಭೇಟಿಯಾಗಿ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ನಗರಸಭೆ ಪೌರಾಯುಕ್ತ ಲೋಕೇಶ್‌ ಮಾತನಾಡಿ, ಸೋಂಕಿನ ಲಕ್ಷಣಗಳು ಇಲ್ಲದಿ ದ್ದರೂ ಕೋವಿಡ್ ಸದ್ದಿಲ್ಲದೆ ದೇಹದೊಳಗೆ ಇರುತ್ತದೆ. ಜ್ವರ, ಶೀತ, ಕೆಮ್ಮು ಇರುವವರೂ
ತಪಾಸಣೆಗೆ ಒಳಗಾಗದೆ ದೂರ ಉಳಿದಿ ದ್ದಾರೆ. ಹೀಗಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next