Advertisement

ಮದುವೆಗೆ ಬಂದವನಿಗೆ ಸೋಂಕು: ಕ್ವಾರಂಟೈನ್ಗೆ ಸೂಚನೆ Covid Infection

11:09 AM Jul 17, 2020 | Suhan S |

ಮೊಳಕಾಲ್ಮೂರು: ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಡೆದ ಮದುವೆಗೆ ಹೊಸಪೇಟೆಯಿಂದ ಬಂದಿದ್ದ ವ್ಯಕ್ತಿಗೆ ಕೋವಿಡ್ ಪಾಸಿಟಿವ್‌ ಎಂದು ವರದಿ ಹಿನ್ನೆಲೆಯಲ್ಲಿ ಮದುವೆ ಮಾಡಿದ ಮನೆಯವರು ಹೋಂ ಕ್ವಾರಂಟೈನ್‌ನಲ್ಲಿರಬೇಕೆಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶ್ರೀನಿವಾಸ್‌ ಸೂಚನೆ ನೀಡಿದರು.

Advertisement

ಮಾರುತಿ ಬಡಾವಣೆಯ ಮನೆಯೊಂದರಲ್ಲಿ ಕಳೆದ ಜು. 10 ರಂದು ಮದುವೆ ನಡೆದಿತ್ತು. ಈ ಮದುವೆಗೆ ಹೊಸಪೇಟೆಯ 45 ವರ್ಷದ ವ್ಯಕ್ತಿಯೊಬ್ಬ ಆಗಮಿಸಿ ಎರಡು ದಿನ ಉಳಿದುಕೊಂಡು ಹೋಗಿದ್ದ. ಈ ಬಡಾವಣೆಗೆ ಹೊಸದಾಗಿ ಬಂದ ವ್ಯಕ್ತಿಯೆಂದು ಆಶಾ ಕಾರ್ಯಕರ್ತೆಯರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಥರ್ಮಲ್‌ ಸ್ಕ್ರೀನಿಂಗ್‌ ಮಾಡಿಸಿ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿದ್ದರು. ವರದಿಯಲ್ಲಿ ಈ ವ್ಯಕ್ತಿಗೆ ಪಾಸಿಟಿವ್‌ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಹೊಸಪೇಟೆಯಿಂದ ಬಂದ ವ್ಯಕ್ತಿ ಜಿಂದಾಲ್‌ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಗಮನಕ್ಕೆ ತಂದು ಜಿಂದಾಲ್‌ ಕೋವಿಡ್‌-19 ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ. ಮದುವೆ ಮನೆಯಲ್ಲಿರುವ ಒಂದು ಮಗು ಸೇರಿ ಒಟ್ಟು 11 ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಂ ಕ್ವಾರಂಟೈನ್‌ ನಲ್ಲಿರಲು ಸೂಚಿಸಲಾಗಿದೆ. ಈ 11 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶ್ರೀನಿವಾಸ್‌ ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ವೈ. ತಿಪ್ಪೇಶ್‌, ಆರೋಗ್ಯ ಸಹಾಯಕ ಶ್ರೀನಿವಾಸ್‌ ಮೊದಲಾದವರು ಇದ್ದರು. ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಮಲ್ಲಿಕಾರ್ಜುನ, ಶಿರಸ್ತೇದಾರ ಏಳುಕೋಟಿ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next