Advertisement

ಪೊಲೀಸ್‌ ಪೇದೆಗೆ ಕೋವಿಡ್ ಸೋಂಕು ದೃಢ

08:45 AM Jun 21, 2020 | Suhan S |

ಬೀರೂರು: ತರೀಕೆರೆ ಡಿವೈಎಸ್‌ಪಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಮುಖ್ಯಪೇದೆಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರು ವಾಸಿಸುತ್ತಿದ್ದ ಬೀರೂರು ನೆಹರು ನಗರ 4ನೇ ತಿರುವು ರಸ್ತೆಯನ್ನು ಶನಿವಾರ ಸೀಲ್‌ ಡೌನ್‌ ಮಾಡಲಾಗಿದೆ. ಇಲಾಖೆ ವತಿಯಿಂದ ನಡೆಸಲಾದ ರ್‍ಯಾಂಡಮ್‌ ಟೆಸ್ಟ್‌ನಲ್ಲಿ ಪಾಸಿಟಿವ್‌ ಕಂಡುಬಂದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಸೋಂಕಿತರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿಗಳು, ಪೊಲೀಸ್‌, ಪುರಸಭೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸೋಂಕಿತ ವಾಸವಿದ್ದ ಮನೆಯ ಬಳಿ ತೆರಳಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ, ಪತ್ನಿ ಮತ್ತು ಮಗುವನ್ನು ಮನೆಯಿಂದ ಆಚೆ ಬಾರದಂತೆ ಕ್ವಾರಂಟೈನ್‌ ಮಾಡಿದರು. ಹಾಲಪ್ಪ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ತರೀಕೆರೆಯ ಡಿವೈಎಸ್‌ಪಿ ಕಚೇರಿಯಲ್ಲಿ ಕರ್ತವ್ಯನಿರತ ಪೇದೆಯ ಪತ್ನಿಯೂ ಕೂಡ ಪೊಲೀಸ್‌ ಪೇದೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next