Advertisement

ನಗರಸಭೆ ಸಿಬ್ಬಂದಿಗೂ ಕೋವಿಡ್ ಸೋಂಕು

07:17 AM Jul 25, 2020 | Suhan S |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್‌-19 ಪ್ರಕರಣ ದೃಢಪಟ್ಟಿದ್ದು, ನಗರಸಭೆ ಹಾಗೂ ತಾಲೂಕು ಕಚೇರಿ ಸಿಬ್ಬಂದಿಗೂ ಸೋಂಕು ತಗುಲಿದೆ.

Advertisement

ನಗರಸಭೆ ಸಿಬ್ಬಂದಿ ಹಾಗೂ ತಾಲೂಕು ಕಚೇರಿಯ ಸರ್ವೆ ಸಿಬ್ಬಂದಿಯೋರ್ವರಿಗೆ ಸೋಂಕು ದೃಢಪಟ್ಟ ಕಾರಣ ನಗರಸಭೆ ಕಾರ್ಯಾಲಯವನ್ನು 48ಗಂಟೆ ಹಾಗೂ ಸರ್ವೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಕಚೇರಿಯ ಒಂದು ಕೊಠಡಿಯನ್ನು ಮಾತ್ರ ಸೀಲ್‌ಡೌನ್‌ ಮಾಡಲಾಗಿದೆ ಎಂದು ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌ ತಿಳಿಸಿದ್ದಾರೆ.

ತಾಲೂಕಿನ ಕೋವಿಡ್‌ -19 ಬುಲೆಟಿನ್‌ನ ಮಾಹಿತಿಯಂತೆ ಶುಕ್ರವಾರ 6 ಮಂದಿ ಪುರುಷರು, ಒಬ್ಬ ಮಹಿಳೆ ಸೇರಿ 7ಜನರಿಗೆ ಸೋಂಕು ದೃಢಪಟ್ಟಿದೆ. ಬಿ. ನಾರಾಯಣಪ್ಪ ಲೇಔಟ್‌ 1, ಕಮಲೂರು 1, ಗಂಗಾಧರಪುರ 1, ಟ್ಯಾಂಕ್‌ ರಸ್ತೆ 1, ರೈಲ್ವೆ ಸ್ಟೇಷನ್‌ 1, ಹೇಮಾವತಿ ಪೇಟೆ 1, ವಡ್ಡನಹಳ್ಳಿಯ ಒಬÌರಿಗೆ ಸೋಂಕು ದೃಢ ಪಟ್ಟಿದೆ. ಪ್ರಸ್ತುತ ತಾಲೂಕಿನಲ್ಲಿ 274 ಕೋವಿಡ್‌ ಪ್ರಕರಣ ಸಕ್ರಿಯವಾಗಿದ್ದು, 9 ಮಂದಿ ಮೃತಪಟ್ಟಿದ್ದರೆ, 82 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next