Advertisement
ಜಿಲ್ಲೆಯಲ್ಲಿ ಇದುವರೆಗೆಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 9958 ಕ್ಕೆ ತಲುಪಿದ್ದು, 180 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಆರಂಭವಾದಾಗಿನಿಂದಲೂ ಫ್ರಂಟ್‌ಲೈನ್ ವಾರಿಯರ್ಸ್‌ಎನಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೋಂಕು ಹರಡುವುದನ್ನು ತಡೆಯಲು, ಸೋಂಕಿತರಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದಾರೆ. ಆದರೆ, ಅಂತಹ ವಾರಿಯರ್ಸ್‌ಗೂ ಕೋವಿಡ್ ಮಹಾಮಾರಿ ಬಿಟ್ಟಿಲ್ಲ. ಇದುವರೆಗೆ 220 ವಾರಿಯರ್ಸ್‌ಗಳಿಗೆ ಕೋವಿಡ್ ಸೋಂಕು ತಗುಲಿದೆ. ಪ್ರಮುಖ ಹುದ್ದೆಯೊಂದಿಗೆ ಜವಾಬ್ದಾರಿ ನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿಯೇ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರಿಂದ ಆಡಳಿತದ ಮೇಲೂ ಪರಿಣಾಮ ಬೀಳುವಂತಾಗಿದೆ.
Related Articles
Advertisement
10 ಸಾವಿರದತ್ತ ಪ್ರಕರಣ: ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ ಪ್ರಥಮ ಕೋವಿಡ್ ಸೋಂಕಿನ ಪ್ರಕರಣ ಸವಣೂರಿನಲ್ಲಿ ವರದಿಯಾಗಿತ್ತು. ಆ ಬಳಿಕ ನಿರಂತರವಾಗಿಏರುಗತಿಯಲ್ಲಿ ಸಾಗಿ ನಿತ್ಯವೂ ನೂರಿನ್ನೂರು ಕೇಸ್‌ಗಳು ಬರುತ್ತಿವೆ. ಕಳೆದ ನಾಲ್ಕು ದಿನಗಳಿಂದ ನೂರರ ಒಳಗೆ ಪಾಸಿಟಿವ್ ಪ್ರಕರಣ ಬರುತ್ತಿರುವುದು ಸ್ವಲ್ಪ ಆಶಾದಾಯಕ ಬೆಳವಣಿಗೆಯಾಗಿದೆ. ಶುಕ್ರವಾರದವರೆಗೆ ಜಿಲ್ಲೆಯಲ್ಲಿ 9958 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 10 ಸಾವಿರದ ಗಡಿಯತ್ತ ಬಂದಿದೆ. ಇದುವರೆಗೆ 180 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚು ಜನರ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದ್ದರೂ ಕಳೆದ ಕೆಲವು ದಿನಗಳಿಂದ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದ್ದರೂ ಅಗತ್ಯ ಸಿದ್ಧತಾ ಕ್ರಮ ಹೆಚ್ಚಿಸಲಾಗುತ್ತಿದೆ. ಕೋವಿಡ್ ನಿಂದ ಮೃತಪಟ್ಟ ವಾರಿಯರ್ಸ್ ಗಳಲ್ಲಿ ಒಬ್ಬರಿಗೆ ಪರಿಹಾರ ಸಿಕ್ಕಿದ್ದು, ಉಳಿದ ಪ್ರಕರಣಗಳಲ್ಲೂ ಶೀಘ್ರದಲ್ಲಿ ಕುಟುಂಬದವರಿಗೆ ಪರಿಹಾರ ದೊರೆಯಲಿದೆ. – ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ
-ವೀರೇಶ ಮಡ್ಲೂರ