Advertisement

ಭಿಕ್ಷುಕರಿಂದ ಕೋವಿಡ್ ಸೋಂಕು ಹರಡುತ್ತದೆ ಎನ್ನಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌

03:32 PM Jul 27, 2020 | Suhan S |

ಮುಂಬಯಿ, ಜು. 26: ನಗರದಲ್ಲಿ ಸಾಮಾಜಿಕ ಅಂತರ ಮತ್ತು ಇತರ ಮಾರ್ಗಸೂಚಿಗಳನ್ನು ಪಾಲಿಸದ ಭಿಕ್ಷುಕರಿಂದ ಸೋಂಕು ಹರಡುತ್ತಿದೆ ಎಂದು ಹೇಳಿ ಅವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ಹೇಳಿದೆ. ಸಾಮಾಜಿಕ ಅಂತರ ಮತ್ತು ಇದರ ಪ್ರಮುಖ ಮಾರ್ಗಸೂಚಿಗಳನ್ನು ಗಣ್ಯರು ಕೂಡ ಅನುಸರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

Advertisement

ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಮಾಧವ್‌ ಜಮ್ದಾರ್‌ ಅವರ ನ್ಯಾಯಪೀಠವು ಪುಣೆಯ ನಿವಾಸಿ ಧ್ಯಾನೇಶ್ವರ ದರ್ವಾಟ್ಕರ್‌ ಅವರು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆಯ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ. ಭಿಕ್ಷೆ ಬೇಡುವಾಗ ಭಿಕ್ಷುಕರು ಸಾಮಾಜಿಕ ಅಂತರ ಮತ್ತು ಮುಖಗವಸುಗಳನ್ನು ಧರಿಸುತ್ತಿಲ್ಲ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದು. ಅವರಿಂದ ಕೋವಿಡ್ ಹರಡುವ ಅಪಾಯ ಹೆಚ್ಚಿದೆ ಎಂದು ದರ್ವಾಟ್ಕರ್‌ ಪರ ವಕೀಲ ಶೇಖರ್‌ ಜಗ್ತಾಪ್‌ ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರು ಇದರ ಬಗ್ಗೆ ಸೂಕ್ಷ್ಮಮವಾಗಿ ಯೋಚಿಸಬೇಕು ಎಂದ ತಿಳಿಸಿದ ನ್ಯಾಯಪೀಠ, ಇಡೀ ದೇಶವು ಕಷ್ಟದ ಸಮಯದಲ್ಲಿ ಸಾಗುತ್ತಿರುವಾಗ, ಭಿಕ್ಷುಕರನ್ನು ಮಾತ್ರ ಗುರಿಯಾಗಿಸುವುದು ಸರಿಯಲ್ಲ ಎಂದಿದೆ. ಮುಖ್ಯ ನ್ಯಾಯಮೂರ್ತಿ ದತ್ತ ಅವರು ಯಾಕೆ ಭಿಕ್ಷುಕರನ್ನು ಮಾತ್ರ ದೂಷಿಸಬೇಕು, ಸುಸಂಸ್ಕೃತಮತ್ತು ಶ್ರೀಮಂತ ವರ್ಗದ ಜನರು ಸಹ ಸಾಮಾಜಿಕ ಅಂತರದ ಕಾನೂನನ್ನು ಅನುಸರಿಸುತ್ತಿಲ್ಲ. ಇದರ ಬಗ್ಗೆ ಯಾಕೆ ನೀವು ಯೋಚಿಸುತ್ತಿಲ್ಲ ಎಂದು ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next