Advertisement

ಸಾರ್ವಜನಿಕ ಶೌಚಾಲಯ ಬಳಕೆಯಿಂದಲೂ ಹರಡುತ್ತೆ ಕೋವಿಡ್

03:40 PM Aug 23, 2020 | Suhan S |

ವುಹಾನ್‌: ಕೋವಿಡ್ ವೈರಾಣುವಿನ ಮೂಲದ ಕುರಿತು ಇಂದಿಗೂ ಸಾಕಷ್ಟು ಚರ್ಚೆಗಳು ನಡೆಯುತ್ತಲ್ಲೇ ಇದೆ. ಇದರೊಂದಿಗೆ ಸೋಂಕು ಹೇಗೆಲ್ಲಾ ಹರಡುತ್ತದೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತಿದ್ದು, ದಿನ ಕಳೆದಂತೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ವಿಷಯಗಳು ಹೊರ ಬರುತ್ತಲೇ ಇದೆ.

Advertisement

ಇದೀಗ ಚೀನದ ಗ್ಲಾಸ್ಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೋಂಕು ಹರಡುವಿಕೆ ಕುರಿತು ಮತ್ತೂಂದು ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಸಾರ್ವಜನಿಕ ಶೌಚಾಲಯ ಬಳಸುವುದರಿಂದಲೂ ಕೋವಿಡ್ ಸೋಂಕು ತಗುಲುತ್ತದೆ ಎಂದು ತಿಳಿಸಿದ್ದಾರೆ..

ಸಾರ್ವಜನಿಕ ಶೌಚಾಲಯಲ್ಲಿ ಮೂತ್ರ ವಿಸರ್ಜನೆ ಮಾಡಿದರೂ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಇದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಉತ್ತಮ ಎಂದು ಹೇಳಲಾಗಿದೆ. ಸಂಶೋಧಕರ ಪ್ರಕಾರ, ಲಿಕ್ವಿಡ್‌ ನಿಂದ ಒಳಗೊಂಡಿರುವ ಮೂತ್ರದಿಂದ ಬಿಡುಗಡೆಯಾಗುವ ಕಣಗಳು ಕೊರೊನಾಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ. ಸಂಶೋಧಕ ಡಾ. ಕ್ಸಿಯಾಂಗ್ಡಾಂಗ್‌ ಲಿಯು ಅವರು, ಸಾರ್ವಜನಿಕ ಶೌಚಾಲಯಗಳು ಕೋವಿಡ್ ಸೂಪರ್‌ ಸ್ಪ್ರೆಡರ್‌ ತಾಣಗಳಾಗಿ ಪರಿಣಮಿಸಬಹುದು. ಮೂತ್ರ ವಿಸರ್ಜನೆ ಮಾಡುವುದು ಅನಿಲ ಮತ್ತು ದ್ರವ ಸಂಪರ್ಕಸಾಧನಗಳ ನಡುವಿನ ಪರಸ್ಪರ ಕ್ರಿಯೆಯನ್ನು ಒಳಗೊಂಡಿರುತ್ತದೆ. ಕೆಲವೇ ಸೆಕೆಂಡ್‌ ಗಳಲ್ಲಿ ಸೋಂಕು ತಗುಲುವ ಸಾಧ್ಯತೆ ಇದೆ.

 ಜರ್ಮನ್‌ 4 ತಿಂಗಳ ಬಳಿಕ ಸೋಂಕು ಹೆಚ್ಚಳ : ಬರ್ಲಿನ್‌ : ಏಪ್ರಿಲ್‌ ಬಳಿಕ ಜರ್ಮನಿಯಲ್ಲಿ ಅತೀ ಹೆಚ್ಚು ಹೊಸ ಕೋವಿಡ್‌ ಸೋಂಕು ಪ್ರಕರಣಗಳು ದಾಖಲಾಗಿದ್ದು, ಗುರುವಾರ ಒಂದೇ 1,707 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರುವರೆ ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ ಎಂದು ವರದಿ ತಿಳಿಸಿದೆ. ಕೋವಿಡ್ ಪಿಡುಗು ನಿರ್ವಹಣ ಕೇಂದ್ರ ರಾಬರ್ಟ್‌ ಕೋಚ್‌ ಇನ್‌ಸ್ಟಿಟ್ಯೂಟ್‌ (ಆರ್‌ಕೆಐ) ಇತ್ತೀಚಿಗೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೂದೇಶದಲ್ಲಿ 2.28 ಲಕ್ಷಕ್ಕೂ ಹೆಚ್ಚುಸೋಂಕು ಪ್ರಕರಣಗಳು ದಾಖಲಾಗಿದ್ದು, ಗುರುವಾರ ಸೋಂಕಿಗೆ 10 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಒಟ್ಟು ಸಾವಿನ ಪ್ರಮಾಣ 9,253 ಕ್ಕೆ ಏರಿದೆ.

 4 ತಿಂಗಳಿನಿಂದ ಹೊಸ ಸಾವು ಇಲ್ಲ : ಚೀನ : ಬೀಜಿಂಗ್‌: ಕಳೆದ ನಾಲ್ಕು ತಿಂಗಳಲ್ಲಿ ದೇಶದ ಆಸ್ಪತ್ರೆಗಳಲ್ಲಿ ಒಬ್ಬ ಸೋಂಕಿತರೂ ಸಹ ಸಾವನ್ನಪ್ಪಿಲ್ಲ ಎಂದು ಚೀನ ಹೇಳಿಕೊಂಡಿದೆ. ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿ ಗುವೊ ಯಾನ್ಹೋಂಗ್‌ ಬುಧವಾರ ಈ ಮಾಹಿತಿ ನೀಡಿದ್ದಾರೆ. ಇದಕ್ಕೆ ರೋಗಿಗಳನ್ನು ಚೀನ ನೋಡಿಕೊಂಡ ಕ್ರಮ ಕಾರಣ ಎಂದು ಹೇಳಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಚೀನ ಅನುಸರಿಸಿದ ಮಾರ್ಗ ಮತ್ತು ಸೋಂಕನ್ನು ನಿಯಂತ್ರಣಕ್ಕೆ

Advertisement

ತರುವಲ್ಲಿ ತನ್ನ ಈ ಹಿಂದಿನ ಅನುಭವಗಳು ಕೆಲಸ ಮಾಡಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಯಾನ್ಹೋಂಗ್‌ ಹೇಳಿದ್ದಾರೆ. ಸತತ ನಾಲ್ಕನೇ ದಿನವೂ ಹೊಸಚೀನದ ಪ್ರಜೆಗಳಲ್ಲಿ ಸೋಂಕಿನ  ಪ್ರಕರಣ ವರದಿಯಾಗಿಲ್ಲ. ಆದರೆ ವಿದೇಶದಿಂದ ಬಂದ 7 ಜನರಲ್ಲಿ ಕೋವಿಡ್‌ ಕಾಣಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next