Advertisement

ಕೋವಿಡ್ ಸೋಂಕಿತರ ಮನೆ ಸೀಲ್‌ಡೌನ್‌

11:32 AM Jul 24, 2020 | Suhan S |

ಮಲೇಬೆನ್ನೂರು: ಪಟ್ಟಣದ 10ನೇ ವಾರ್ಡ್‌ನ ಇಂದಿರಾನಗರ, 2ನೇ ವಾರ್ಡ್ ನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಲಕ್ಷ್ಮೀದೇವಿ ತಿಳಿಸಿದರು.

Advertisement

10ನೇ ವಾರ್ಡ್‌ನ ಇಂದಿರಾ ನಗರದಲ್ಲಿ ಈ ಹಿಂದೆ 43 ವರ್ಷದ ಮಹಿಳೆಗೆ ಪಾಸಿಟೀವ್‌ ಸೋಂಕು ದೃಢಪಟ್ಟಿತ್ತು. ಆ ಮಹಿಳೆ ನಿಧನ ಹೊಂದಿದ್ದು, 21ನೇ ತಾರೀಖು ಆಕೆಯ ಗಂಡನಿಗೂ ಪಾಸಿಟಿವ್‌ ವರದಿ ಬಂದಿತ್ತು. ಮನೆಯ 15 ಜನರು ಹೋಂ ಕ್ವಾರಂಟೈನ್‌ ಆಗಿದ್ದು, 20ನೇ ತಾರೀಖೀನಂದು ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ 5 ಜನರಲ್ಲಿ ಪಾಸಿಟಿವ್‌ ಬಂದಿದ್ದು, ಇನ್ನುಳಿದ 10 ಜನರ ವರದಿ ಬರಬೇಕಿದೆ. ಅವರಿಗೆ 14 ದಿನಗಳವರೆಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ ಎಂದರು.

ಅನಾರೋಗ್ಯದಿಂದ ಬಳಲುತ್ತಿದ್ದ 2ನೇ ವಾರ್ಡ್‌ನ 66 ವರ್ಷದ ವೃದ್ಧೆ ಜು. 21ರಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಅವರಲ್ಲಿ ಕೋವಿಡ್‌-19 ಲಕ್ಷಣಗಳು ಕಂಡು ಬಂದಿದ್ದರಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಸೋಂಕಿತ ಮಹಿಳೆ ಗುರುವಾರ ನಿಧನರಾಗಿದ್ದಾರೆ. ರೋಗಿಯ ಜೊತೆಯಲ್ಲಿದ್ದ 3 ಜನರ ಗಂಟಲು ದ್ರವ ಮಾದರಿ ಕಳುಹಿಸಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಉಪತಹಶೀಲ್ದಾರ್‌ ಆರ್‌. ರವಿ, ಪರಿಸರ ಅಭಿಯಂತರ ಉಮೇಶ್‌, ಆರೋಗ್ಯ ನಿರೀಕ್ಷಕ ಗುರುಪ್ರಸಾದ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next