Advertisement

ಕೋವಿಡ್ 19: ಭಾರತದಲ್ಲಿ 40 ಸಾವಿರಕ್ಕೆ ತಲುಪಿದ ಪ್ರಕರಣ, ಸಾವಿನ ಸಂಖ್ಯೆ 1,300ಕ್ಕೆ ಏರಿಕೆ

08:25 AM May 04, 2020 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ 19 ವೈರಸ್ ಪೀಡಿತರ ಪ್ರಕರಣ ಶನಿವಾರ ಒಂದೇ ದಿನ 2,600ಕ್ಕೆ ಏರಿದ್ದು, ಇದು ಅತೀ ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

Advertisement

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 39,980ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 1,301ಕ್ಕೆ ತಲುಪಿದೆ. ಈವರೆಗೆ ದೇಶಾದ್ಯಂತ 10,633 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ವರದಿ ವಿವರಿಸಿದೆ.

ರಾಜಸ್ಥಾನದಲ್ಲಿ 31 ಹೊಸ ಕೋವಿಡ್ 19 ಪ್ರಕರಣ ವರದಿಯಾಗಿದ್ದು, ಉತ್ತರಪ್ರದೇಶದಲ್ಲಿ 21 ಪ್ರಕರಣ ಭಾನುವಾರ ಪತ್ತೆಯಾಗಿದೆ. ಶನಿವಾರ ದೆಹಲಿಯಲ್ಲಿ 384 ಪ್ರಕರಣ 24 ಗಂಟೆಯಲ್ಲಿ ವರದಿಯಾಗಿದೆ. ಉತ್ತರಪ್ರದೇಶದಲ್ಲಿ ನಿನ್ನೆ 159 ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 2,487ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಪಿಟಿಐ ವರದಿ ಪ್ರಕಾರ, ಮಹಾರಾಷ್ಟ್ರದಲ್ಲಿ ಶಣಿವಾರ ಪರೀಕ್ಷಿಸಿದ್ದ 790 ಮಂದಿಯ ವರದಿ ಪಾಸಿಟಿವ್ ಎಂದು ಬಂದಿದ್ದು, 39 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 12,296ಕ್ಕೆ ಏರಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next