Advertisement

ಸರ್ಕಾರದ ನಿರ್ಲಕ್ಷ್ಯದಿಂದ ಕೋವಿಡ್‌ ಹೆಚ್ಚಳ: ದತ್ತ

11:52 AM Jun 05, 2021 | Team Udayavani |

ಅಜ್ಜಂಪುರ: ಸರ್ಕಾರದ ಮುಂಜಾಗ್ರತೆ ಕೊರತೆ ಮತ್ತು ನಿರ್ಲಕ್ಷ್ಯದಿಂದ ಕೋವಿಡ್‌ ಹೆಚ್ಚಳವಾಯಿತು. ಅಪಾರ ಜನ ಕೋವಿಡ್‌ನಿಂದ ನರಳುವಂತಾಯಿತು. ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಆರೋಪಿಸಿದರು.

Advertisement

ಅಂತರಘಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಮೆಡಿಕಲ್‌ ಕಿಟ್‌ ನೀಡಿ ಮಾತನಾಡಿದರು. ತಾಲೂಕಿನ 49 ಗ್ರಾಮ ಪಂಚಾಯಿತಿಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ 6,000 ಮೌಲ್ಯದ ಜ್ವರ ಪರೀಕ್ಷಿಸುವ ಸಾಧನ, ಆಕ್ಸಿಮೀಟರ್‌, ಥರ್ಮಾಮೀಟರ್‌, ಸ್ಯಾನಿಟೈಸರ್‌, ಮಾಸ್ಕ್ ಒಳಗೊಂಡ ಮೆಡಿಕಲ್‌ ಕಿಟ್‌ ನೀಡುತ್ತಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅಧಿಕಾರ ಇಲ್ಲದಿದ್ದರೂ ಕೋವಿಡ್‌ ಸಂಕಷ್ಟ ಸಮಯದಲ್ಲಿ ಕ್ಷೇತ್ರದ ಜನರೊಂದಿಗಿದ್ದೇನೆ. 1 ಲಕ್ಷ ಮೌಲ್ಯದ ದ್ರವ ಆಮ್ಲಜನಕ ಖರೀದಿ ಸಿ ಕಡೂರು ತಾಲೂಕು ಆರೋಗ್ಯ ಕೇಂದ್ರಕ್ಕೆ ನೀಡಿದ್ದೇವೆ. ಇದನ್ನು ಅಗತ್ಯವಿರುವ ಕೋವಿಡ್‌ ಬಾಧಿತರ ಚಿಕಿತ್ಸೆಗೆ ಬಳಸುವಂತೆ ಸೂಚಿಸಿದ್ದಾಗಿ ತಿಳಿಸಿದರು.

ಡಾ.ಪವಿತ್ರ, ಗ್ರಾಪಂ ಉಪಾಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಕುಮಾರಪ್ಪ, ಜೆಡಿಎಸ್‌ ಮುಖಂಡ ನಾಗೇಂದ್ರಪ್ಪ, ಸಂಕ್ಲಾಪುರ ಕುಮಾರಪ್ಪ, ಹುಲಿಹಳ್ಳಿ ಮಲ್ಲಪ್ಪ, ಬಿಸಲೇರಿ ಸಂಗಮೇಶ್‌, ತಿಮ್ಮಾಪುರದ ಮಲ್ಲಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next