Advertisement

ಕೋವಿಡ್‌ಗೆ ಮತ್ತೈದು ಸಾವು

04:50 PM Aug 25, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ಐದು ಜನರು ಕೋವಿಡ್ ಸೋಂಕಿನಿಂದ ಬಳಲಿ ಸಾವನ್ನಪ್ಪಿದ್ದಾರೆ. ಇನ್ನು ಇದೇ ದಿನದಂದು 232 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆಯು 5247ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಸೋಮವಾರ ದೃಢಪಟ್ಟ ಸೋಂಕಿತರ ಪೈಕಿ ಗಂಗಾವತಿ ತಾಲೂಕಿನಲ್ಲಿ 106, ಕೊಪ್ಪಳ ತಾಲೂಕಿನಲ್ಲಿ 72, ಕುಷ್ಟಗಿ ತಾಲೂಕಿನಲ್ಲಿ 21, ಯಲಬುರ್ಗಾ ತಾಲೂಕಿನಲ್ಲಿ 33 ಸೇರಿ 232 ಜನರಿಗೆ ಸೋಂಕು ತಗುಲಿದೆ. ಇನ್ನೂ ಒಟ್ಟಾರೆ ಸೋಂಕಿತರ ಲೆಕ್ಕಾಚಾರ ಗಮನಿಸಿದರೆ, ಗಂಗಾವತಿ ತಾಲೂಕಿನಲ್ಲಿ ಒಟ್ಟಾರೆ 2651, ಕೊಪ್ಪಳ ತಾಲೂಕಿನಲ್ಲಿ 1584, ಕುಷ್ಟಗಿ ತಾಲೂಕಿನಲ್ಲಿ 583, ಯಲಬುರ್ಗಾ ತಾಲೂಕಿನಲ್ಲಿ 429 ಸೇರಿದಂತೆ ಒಟ್ಟಾರೆ 5247 ಜನರಿಗೆ ಸೋಂಕು ತಗುಲಿದೆ.

ಇವರಲ್ಲಿ ಒಟ್ಟಾರೆ ಈವರೆಗೂ 119ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಸೋಮವಾರ 114 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 251 ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಒಟ್ಟಾರೆ ಇಲ್ಲಿವರೆಗೂ 3730 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಂದೇ ಕುಟುಂಬದ ಐವರಿಗೆ ಕೋವಿಡ್ ಸೊಂಕು : ದೋಟಿಹಾಳ: ಗ್ರಾಮದಲ್ಲಿ ಸೋಮವಾರ ಒಂದೇ ಕುಟುಂಬದಲ್ಲಿ ಐವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಗ್ರಾಮಕ್ಕೆ ಇತ್ತಿಚಿಗೆ ಹುಲಗೇರಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕನಾದ ಗ್ರಾಮದ 34ವರ್ಷದ ವ್ಯಕ್ತಿಗೆ ಸೋಂಕಿರುವುದು ದೃಢಪಟ್ಟಿದೆ. ಇತನ ಪ್ರಥಮ ಸಂಪರ್ಕದಲ್ಲಿದ್ದ ಕುಟುಂಬ 11ಜನರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರ್ಯಾಪಿಡ್‌ ಟೆಸ್ಟ್‌ಗೆ ಒಳಪಡಿಸಿದಾಗ 5 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 26 ಜನರಿಗೆ ರ್ಯಾಪಿಡ್‌ ಟೆಸ್ಟ್‌ ಮಾಡಿದಾಗ ಇದರಲ್ಲಿ ಒಂದೇ ಕುಟುಂಬದ 5 ಜನರಿಗೆ ಮತ್ತು ಕುಷ್ಟಗಿ ನಗರದ ಒಬ್ಬರಿಗೆ ಕೋವಿಡ್ ಇರುವುದು ದೃಢಪಟ್ಟಿದೆ ಎಂದು ವೈದ್ಯಾಧಿಕಾರಿ ಡಾ| ಸಂತೋಷಕುಮಾರ ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next