Advertisement

ಸಿಗದ ಆ್ಯಂಬುಲೆನ್ಸ್ : ಕಾರ್ ಟಾಪ್ ಮೇಲೆ ತಂದೆಯ ಶವ

05:21 PM Apr 26, 2021 | Team Udayavani |

ಆಗ್ರಾ : ದೇಶದಲ್ಲಿ ವ್ಯಾಪಿಸಿರುವ ಕೋವಿಡ್ ಸೋಂಕು ತನ್ನ ಬೀಕರತೆಯನ್ನು ಪ್ರದರ್ಶಿಸುತ್ತಿದೆ. ಒಂದು ಕಡೆ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಅಭಾವ ಎದುರಾಗಿದ್ದರೆ, ಮತ್ತೊಂದು ಕಡೆ ಸೋಂಕಿಗೆ ಬಲಿಯಾದವರ ಶವ ಸಾಗಿಸಲು ಆ್ಯಂಬುಲೆನ್ಸ್ ವಾಹನಗಳು ಇಲ್ಲದಂತಾಗಿದೆ.

Advertisement

ಆಗ್ರಾದ ಮೋಕ್ಷಧಾಮ ಎಂಬಲ್ಲಿ ಆ್ಯಂಬುಲೆನ್ಸ್ ಸಿಗದಿದ್ದರಿಂದ ಕಾರಿನ ಟಾಪ್ ಮೇಲೆ ತಂದೆಯ ಶವ ಇಟ್ಟು ಸ್ಮಶಾನಕ್ಕೆ ತೆರಳಿದ ಘಟನೆ ನಡೆದಿದೆ.

ಆಗ್ರಾದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಸೌಕರ್ಯಗಳಿಗೆ ಭಾರೀ ಅಭಾವ ಉಂಟಾಗ್ತಿದೆ. ಈ ನಡುವೆ ತಂದೆಯ ಶವ ಸಾಗಿಸಲು ಪುತ್ರ ಪಟ್ಟ ಪಾಡನ್ನ ಕಂಡ ಅನೇಕರ ಕಣ್ಣಲ್ಲಿ ನೀರು ಜಿನುಗಿದೆ.

ಆಗ್ರಾ ಪಟ್ಟಣದಲ್ಲಿ ಪ್ರತಿದಿನ 600ಕ್ಕೂ ಹೆಚ್ಚು ಕೇಸ್​ಗಳು ವರದಿಯಾಗುತ್ತಿದೆ. ಕಳೆದ 9 ದಿನಗಳಲ್ಲಿ ಆಗ್ರಾದಲ್ಲಿ 35 ಮಂದಿ ಕೋವಿಡ್ ಬಲಿಯಾಗಿದ್ದಾರೆ. ಆಂಬುಲೆನ್ಸ್​ ಕೊರತೆಯಿಂದಾಗಿ ಕೋವಿಡ್ ಸೋಂಕಿತರ ಶವವನ್ನ ಸಾಗಿಸಲು ಕುಟುಂಬಸ್ಥರು ಆರು ತಾಸುಗಳಿಗಿಂತಲೂ ಹೆಚ್ಚು ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next