Advertisement
ಕೊರೊನಾ, ಲಾಕ್‌ಡೌನ್ ಹೆತ್ತವರಿಗೆ ಮಕ್ಕಳನ್ನು ಸಂಭಾಳಿಸುವ ಸವಾಲು ಸೃಷ್ಟಿಸಿದರೆ ಮಕ್ಕಳಿಗೆ ಗೃಹ ಬಂಧನದಂಥ ಕಿರಿಕಿರಿ. ತಜ್ಞರು ಹೇಳುವ ಪ್ರಕಾರ ಮಕ್ಕಳು ದಿನಕ್ಕೆ ಕನಿಷ್ಠ 3-4 ತಾಸು ಆಟವಾಡಿಕೊಂಡು ಇರಬೇಕು. ಆದರೆ ಲಾಕ್ ಡೌನ್ ನಿಂದಾಗಿ ಇದು ಆಗುತ್ತಿಲ್ಲ. 14 ವರ್ಷದೊಳಗಿನ ಮಕ್ಕಳಿಗೆ ಲಾಕ್ ಡೌನ್ ಅತೀವ ಒತ್ತಡವನ್ನು ಉಂಟು ಮಾಡುತ್ತಿದೆ.
ಮಕ್ಕಳು ಹೊರಗೆ ಆಟವಾಡುವುದು ಸಾಮಾನ್ಯ. ಜತೆಗೆ ಕೌಟುಂಬಿಕ ಪ್ರವಾಸ, ಸಿನೆಮಾ ಇತ್ಯಾದಿಗಳಿಂದ ಸಂತಸ ಪಡೆಯುತ್ತಿದ್ದರು. ಆದರೆ ಲಾಕ್‌ಡೌನ್ ಇವೆಲ್ಲದಕ್ಕೂ ಕತ್ತರಿ ಹಾಕಿದೆ. ಹಳ್ಳಿ ಮಕ್ಕಳಿಗೆ ಓಣಿಗಳಲ್ಲಾದರೂ ಆಡುವ ಅವಕಾಶವಿದೆ. ನಗರದ ಮಕ್ಕಳು ಮನೆಯೊಳಗೇ ಇದ್ದಾರೆ. ಮೂರನೇ ಅಲೆ ಆತಂಕ
ಕೊರೊನಾ 3ನೇ ಅಲೆ ಮಕ್ಕಳನ್ನು ಗುರಿ ಮಾಡುತ್ತದೆ ಎನ್ನುವ ಸುದ್ದಿ ಹೊರಬಿದ್ದ ಮೇಲಂತೂ ಹೆತ್ತವರು ಇನ್ನಷ್ಟು ಆತಂಕಗೊಂಡು ಮಕ್ಕಳನ್ನು ಕಟ್ಟಿ ಹಾಕುತ್ತಿದ್ದಾರೆ.
Related Articles
ಮಕ್ಕಳು ಸದಾ ಚಿತ್ರಕಲೆ, ಶಿಲ್ಪಗಳ ರಚನೆ, ಮಣ್ಣಿನ ಆಟಿಕೆಗಳ ನಿರ್ಮಾಣ, ಕಥೆ ಹೇಳುವುದು, ಒಳಾಂಗಣ ಕ್ರೀಡೆಗಳು, ಹಾಡುಗಾರಿಕೆ, ಸಂಗೀತದಂಥ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು. ಹಳ್ಳಿ ಮಕ್ಕಳು ಕೃಷಿಯಲ್ಲಿ ತೊಡಗುವಂತೆ ಮಾಡಬೇಕು. ಒಳಾಂಗಣ ಆಟಗಳಲ್ಲಿ ತೊಡಗಬೇಕು. ಈ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದೊಂದೇ ದಾರಿ ಎನ್ನುತ್ತಾರೆ ಮಕ್ಕಳ ತಜ್ಞರು.
Advertisement
ಮಕ್ಕಳು ಆರೋಗ್ಯವಾಗಿರಲು ದೈಹಿಕ, ಮಾನಸಿಕ ಚಟುವಟಿಕೆ ಅಗತ್ಯ. ಲಾಕ್‌ಡೌನ್‌ನಂತಹ ದಿನಗಳಲ್ಲಿ ಹೆಚ್ಚಿನ ಮಕ್ಕಳ ತೂಕ ಅಧಿಕವಾಗಿರುವುದು ಕಂಡುಬರುತ್ತಿದೆ. ಹಾಗಾಗಿ ಸರಿಯಾದ, ಮಿತವಾದ ಆಹಾರ ಸೇವನೆ ಅತೀ ಅಗತ್ಯ. ಬೆಳಗ್ಗೆ ತಡವಾಗಿ ಏಳುವುದರಿಂದಲೂ ಆರೋಗ್ಯಕ್ಕೆ ತೊಂದರೆ. ಸಣ್ಣ ಕತೆ, ಪ್ರಬಂಧ ಮೊದಲಾದವುಗಳನ್ನು ಬರೆಯುವ ಹವ್ಯಾಸ ಬೆಳೆಸಬೇಕು. ಯೋಗ, ಸಂಗೀತ, ನೃತ್ಯ, ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು.– ಡಾ| ಅನಂತ ಪೈ ಪಿ., ಮಕ್ಕಳ ತಜ್ಞರು, ಮಂಗಳೂರು