Advertisement

ಕೋವಿಡ್ ವೀರರು: ಉಪವಾಸವಿದ್ದರೂ ಕಾಯಕ ಬಿಡದ ಕಾರ್ಮಿಕ

01:37 AM Apr 30, 2021 | Team Udayavani |

ಮುಂಬಯಿಯಲ್ಲಿ ಕೋವಿಡ್  ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಶ್ಮಶಾನ ಗಳಲ್ಲಿನ ಸಿಬಂದಿ ದಿನದ 24 ಗಂಟೆಯೂ ಎಡೆಬಿಡದೆ ದುಡಿಯುಂಥ ಪರಿಸ್ಥಿತಿ ಬಂದಿದೆ.

Advertisement

ಕಳೆದ 25 ವರ್ಷಗಳಿಂದ ಅಂತ್ಯಸಂಸ್ಕಾರಕ್ಕೆ ಗುಂಡಿ ತೋಡುವ ಸಯ್ಯದ್‌ ಮುನೀರ್‌, ಈಗ ನಡೆಯುತ್ತಿರುವ ಪವಿತ್ರ ರಮ್ಜಾನ್‌ನ ಉಪವಾಸದ ದಿನಗಳಲ್ಲಿಯೂ ಕಾಯಕವನ್ನು ನಿಲ್ಲಿಸಿಲ್ಲ. ಅವರು ಹಾಗೂ ಅವರ ಸಂಗಡಿಗರು ದಿನದ 24 ಗಂಟೆಯೂ ಪಾಳಿ ಲೆಕ್ಕಾಚಾರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ, ಗುಂಡಿ ತೋಡಿದ ಅನಂತರ ಪಿಪಿಇ ಕಿಟ್‌ ಧರಿಸಿ, ಆ್ಯಂಬುಲೆನ್ಸ್‌ನಲ್ಲಿದ್ದ ಪಾರ್ಥಿವ ಶರೀರಗಳನ್ನು ತಂದು ಗುಂಡಿಯಲ್ಲಿ ಇರಿಸುತ್ತಿದ್ದ ಅವರೀಗ ಪಿಪಿಇ ಕಿಟ್‌ ಧರಿಸದೇ ಈ ಕೆಲಸ ಮಾಡುತ್ತಿದ್ದಾರೆ! ಕೇಳಿದರೆ, “ಇದೆಲ್ಲ ಧೈರ್ಯದಿಂದ ಆಗುವ ಕೆಲಸ. ಹೆದರಿಕೆ ಇದ್ದರೆ ಮಾಡಲು ಆಗುವುದಿಲ್ಲ’ ಎನ್ನುತ್ತಾರೆ ಸಯ್ಯದ್‌.

ರಿಲಯನ್ಸ್‌ನಿಂದ ಎರಡು ಸುಸಜ್ಜಿತ ಆಸ್ಪತ್ರೆ :

ಗುಜರಾತ್‌ನ ಜಾಮ್‌ನಗರದಲ್ಲಿರುವ ಸರಕಾರಿ ದಂತ ವೈದ್ಯ ಆಸ್ಪತ್ರೆಯಲ್ಲಿ 1,000 ಹಾಸಿಗೆ ಸಾಮರ್ಥಯದ ಕೊರೊನಾ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದ್ದು, ಇನ್ನೊಂದು ವಾರದಲ್ಲಿ ಅದು ಕಾರ್ಯಾರಂಭ ಮಾಡಲಿದೆ ಎಂದು ರಿಲಯನ್ಸ್‌ ಫೌಂಡೇಶನ್‌ ತಿಳಿಸಿದೆ.

Advertisement

ಇಡೀ ಆಸ್ಪತ್ರೆಯು ಆಮ್ಲಜನಕ ವಿತರಣೆ ಹಾಗೂ ಎಲ್ಲ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದೆ. ಇದಲ್ಲದೆ, ಫೌಂಡೇಶನ್‌ ವತಿಯಿಂದ ಜಾಮ್‌ನಗರ್‌ನಲ್ಲೇ ಮತ್ತೂಂದು 600 ಹಾಸಿಗೆ ಸಾಮರ್ಥಯದ ಸುಸಜ್ಜಿತ ಕೋವಿಡ್ ಆಸ್ಪತ್ರೆಯನ್ನೂ ನಿರ್ಮಿಸಲಾಗಿದ್ದು ಅದೂ ಸಹ 14 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಫೌಂಡೇಶನ್‌ ತಿಳಿಸಿದೆ. ಈ ಎರಡೂ ಆಸ್ಪತ್ರೆಗಳ ಮೇಲುಸ್ತುವಾರಿಯನ್ನು ಖುದ್ದು ರಿಲಯನ್ಸ್‌ ಮುಖ್ಯಸ್ಥರಾದ ಮುಕೇಶ್‌ ಅಂಬಾನಿ, ಅವರ ಪತ್ನಿ ನೀತೂ ಅಂಬಾನಿಯೇ ವಹಿಸಿದ್ದಾರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next