ಮಣಿಪಾಲ: ವಿಚಿತ್ರ ಕೇಶವಿನ್ಯಾಸಗಳಿಗೆ ಕೀನ್ಯಾದವರು ಯಾವತ್ತೂ ಮುಂದು. ಹಲವರು ತಮ್ಮ ಕೂದಲ ನೆಯ್ಗೆ, ಬಣ್ಣಗಳಿಂದಲೇ ವಿಶೇಷ ಗಮನ ಸೆಳೆಯುತ್ತಾರೆ.
ಈಗ ಕೋವಿಡ್ ವಕ್ಕರಿಸಿದಾಗ ಅದನ್ನೂ ಮಾದರಿಯಾಗಿಟ್ಟುಕೊಂಡು ಕೇಶ ವಿನ್ಯಾಸ ಮಾಡಿ ಜಾಗೃತಿಯ ಕಾರ್ಯವನ್ನೂ ಮಾಡುತ್ತಿದ್ದಾರೆ.
ಕಿಬೆರಾದ ಬಿಡುವಿಲ್ಲದ ರಸ್ತೆಯ ಪಕ್ಕದಲ್ಲಿ ತಾತ್ಕಾಲಿಕ ಸೆಲೂನ್‌ನಲ್ಲಿ 24 ವರ್ಷದ ಕೇಶ ವಿನ್ಯಾಸಕಿ ಶರೋನ್ ರೆಫಾ, ಯುವತಿಯರ ಕೂದಲನ್ನು ಆಂಟೆನಾ ತರಹದ ಸ್ಪೈಕ್‌ಗಳಿಗೆ ಹೆಣೆದು ನೇರವಾಗಿಸುತ್ತಾರೆ. ಇದನ್ನು ‘ಕೋವಿಡ್ ವೈರಸ್ ಕೇಶವಿನ್ಯಾಸ’ ಎಂದು ಕರೆಯಿರಿ ಎನ್ನುತ್ತಾರೆ.
ಇಲ್ಲಿನವರು ಕೋವಿಡ್ ವೈರಸ್ ನಿಜವೆಂಬುದನ್ನು ನಂಬುವುದಿಲ್ಲ, ಅವರಲ್ಲಿ ಜಾಗೃತಿ ಮೂಡಿಸುವುದ್ದಕ್ಕಾಗಿಯೇ ನಾವು ಕೋವಿಡ್ ಕೇಶವಿನ್ಯಾಸದೊಂದಿಗೆ ಬಂದಿದ್ದೇವೆ ಎಂದು ರೆಫಾ ಹೇಳುತ್ತಾರೆ.
ಕೀನ್ಯಾದಲ್ಲಿ ವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರದ ವೇಳೆಗೆ 700ಕ್ಕೆ ತಲುಪಿದೆ. ಇಲ್ಲಿ ಪರೀಕ್ಷಾ ಸಾಮಗ್ರಿಗಳ ವ್ಯಾಪಕ ಕೊರತೆಯೊಂದಿಗೆ, ನೈಜ ಪ್ರಕರಣಗಳ ಪತ್ತೆ ಸರಿಯಾಗಿ ಆಗದಿರಬಹುದು.
‘ಈ ಕೇಶವಿನ್ಯಾಸವು ನನ್ನಂತಹ ಜನರಿಗೆ ಹೆಚ್ಚು ಕೈಗೆಟುಕುವಂತಿದೆ, ಅವರು ಅಲ್ಲಿಗೆ ಹೆಚ್ಚು ದುಬಾರಿ ಕೇಶವಿನ್ಯಾಸವನ್ನು ಪಾವತಿಸಲು ಶಕ್ತರಾಗಿಲ್ಲ, ಆದರೆ ನಮ್ಮ ಮಕ್ಕಳು ಸೊಗಸಾಗಿ ಕಾಣಬೇಕೆಂದು ಯಾವತ್ತೂ ಬಯಸುತ್ತೇನೆ’ ಎಂದು ಹೆತ್ತವರಾದ ಆಂಡಿಯಾ ಹೇಳುತ್ತಾರೆ.