ನೆಲಮಂಗಲ: ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನ ಮಾತ್ರ ನಿಯಂತ್ರಣ ಕ್ರಮ ಮರೆತು ಓಡಾಡುವುದಲ್ಲದೆ ಅಧಿಕಾರಿಗಳ ಪರಿಶ್ರಮ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ 1240 ಪಾಸಿಟಿವ್ ಪ್ರಕರಣ ಕಂಡುಬಂದರೆ ತಾಲೂಕಿನಲ್ಲಿ 273 ಕೇಸ್ ಪತ್ತೆಯಾಗಿವೆ. ಪೊಲೀಸ್, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಿಯಂತ್ರಣ ಕ್ರಮದ ಬಗ್ಗೆ ಜಾಗೃತಿ ಮೂಡಿಸಿ ದರು. ಜನರು ನಗರದಲ್ಲಿ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ವ್ಯವಹರಿಸುತಿರುವುದು ಕಂಡುಬಂದಿದೆ.
ದಟ್ಟಣೆ: ಬೆಂಗಳೂರಿಗೆ ಸಮೀಪವಿರುವ ನಗರಸಭೆ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು ಬೈಕ್ ಗಳಲ್ಲಿ 3 ಜನ ಬರುವ ಜತೆ ಹೆಲ್ಮೇಟ್ ಹಾಕುತ್ತಿಲ್ಲ.
ಅರಿವಿಲ್ಲ: ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆಯೇ ವಿನಃ ಬುದ್ಧಿವಂತರ ಸಂಖ್ಯೆ ಹೆಚ್ಚಾ ಗಿಲ್ಲ ಎಂಬಂತೆ ಬ್ಯಾಂಕ್, ದಿನಸಿ ಅಂಗಡಿ, ಆಸ್ಪತ್ರೆ, ಮೆಡಿಕಲ್, ಹೋಟಲ್, ಬಟ್ಟೆ ಅಂಗಡಿ, ಬೀದಿಬದಿ ವ್ಯಾಪಾರ ಗಳಲ್ಲಿ ಸಾಮಾಜಿಕ ಅಂತರದ ಅರಿವಿಲ್ಲದೆ ವಿದ್ಯಾವಂತರು ವರ್ತಿಸುತ್ತಿದ್ದು ಕಾನೂನಿನ ಬಗ್ಗೆ ಅರಿವಿಲ್ಲದಂತಾಗಿದೆ.
ಕೋವಿಡ್ ಪಾಸಿಟಿವ್ ಬಂದಿರುವ ಪ್ರದೇಶಗಳಲ್ಲಿ ಸೀಲ್‌ಡೌನ್ ಮಾಡಿ ಅಧಿಕಾರಿಗಳ ತಂಡ ನೇಮಕ ಮಾಡಿ ಮಾಹಿತಿ ಹಾಗೂ ಸೌಲಭ್ಯ ನೀಡುತ್ತಿದ್ದರೂ ಜನ ಮಾತ್ರ ಅಲ್ಲಿಯೇ ಓಡಾಡುತ್ತಾ ಅಧಿಕಾರಿಗಳ ಪರಿಶ್ರಮ ವ್ಯರ್ಥ ಮಾಡುತ್ತಿದ್ದಾರೆ. ಆರೋಗ್ಯ ಅಧಿಕಾರಿ ಪ್ರತಿಕ್ರಿಯಿಸಿ, ಕೋವಿಡ್ ನಿಯಂತ್ರಣಕ್ಕೆ ನಾವು ಎಷ್ಟೇ ಸೌಲಭ್ಯ, ಚಿಕಿತ್ಸೆ ನೀಡಿದರೂ ಲಾಭವಾಗುವುದು ಮಾತ್ರ ಜನ ಜಾಗೃತರಾದಾಗ. ನಿಯಂತ್ರಣ ಕ್ರಮಗಳ ಪಾಲನೆಯಾದರೇ ಸೋಂಕಿನ ನಿಯಂತ್ರಣ ಬಹಳ ಬೇಗ ಸಾಧ್ಯವಾಗುತ್ತದೆ. ಸಾರ್ವಜನಿಕರ ಜೀವ ಅವರ ಕೈನಲ್ಲಿಯೇ ಇದೆ ಎಂದರು.