Advertisement

ಲೆಸ್ಬೋಸ್ ದ್ವೀಪದ ನಿರಾಶ್ರಿತರಿಗೆ ಕೋವಿಡ್‌ ಭೀತಿ

02:51 PM May 15, 2020 | sudhir |

ಅಥೆನ್ಸ್‌: ಗ್ರೀಕ್‌ನ ಲೆಸ್ಬೋಸ್‌ ದ್ವೀಪದಲ್ಲಿರುವ ನಿರಾಶ್ರಿತರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿರುವ ಆತಂಕಕ್ಕೆ ಕಾರಣವಾಗಿದೆ. ನಿರಾಶ್ರಿತರ ಶಿಬಿರಗಳಿರುವ ಈ ದ್ವೀಪ ಇಷ್ಟರ ತನಕ ಸುರಕ್ಷಿತ ಎಂದು ಭಾವಿಸಲಾಗಿತ್ತು. ಆದರೆ ಮೋರಿಯ ಕ್ಯಾಂಪಿಗೆ ಬಂದಿರುವ ಇಬ್ಬರು ವಲಸಿಗರಲ್ಲಿ ಸೋಂಕು ದೃಢಪಟ್ಟಿರುವುದರಿಂದ ವಲಸಿಗರೆಲ್ಲ ಗಾಬರಿಯಾಗಿದ್ದಾರೆ.

Advertisement

ವಲಸಿಗರಿಗಾಗಿಯೇ ಇರುವ ದ್ವೀಪವಾಗಿರುವ ಕಾರಣ ಇಲ್ಲಿನ ಆರೋಗ್ಯ ಸೇವೆಯೂ ಅಷ್ಟಕ್ಕಷ್ಟೇ ಇದೆ. ಹಲವು ನಿರಾಶ್ರಿತ ಶಿಬಿರಗಳಲ್ಲಿ 18,000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದು, ಸೋಂಕು ಹರಡಲು ತೊಡಗಿದರೆ ಗ್ರೀಕ್‌ ಮತ್ತೂಮ್ಮೆ ದೊಡ್ಡ ಕಂಟಕವನ್ನು ಎದುರಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಇಲ್ಲಿಂದ ನಿರಾಶ್ರಿತರನ್ನು ತೆರವುಗೊಳಿಸಲು ಗ್ರೀಕ್‌ ಸರಕಾರ ಮುಂದಾಗಿದೆ. ಮೊದಲ ಹಂತದಲ್ಲಿ 2,000 ನಿರಾಶ್ರಿತರನ್ನು ಗ್ರೀಕ್‌ಗೆ ಸಾಗಿಸಲಾಗುವುದು.

ನಿರಾಶ್ರಿತ ಶಿಬಿರಗಳಲ್ಲಿರುವವರಿಗೆ ತಮ್ಮನ್ನು ಸೋಂಕಿ ನಿಂದ ರಕ್ಷಿಸಿಕೊಳ್ಳಲು ಸೀಮಿತ ಸೌಲಭ್ಯಗಳಷ್ಟೇ ಇವೆ. ಗಿಜಿಗುಟ್ಟುತ್ತಿರುವ ಶಿಬಿರಗಳಿಗೆ ಕೋವಿಡ್‌ ಲಗ್ಗೆಯಿಟ್ಟರೆ ಅಲ್ಲಿರುವವರನ್ನು ದೇವರಿಂದಲೂ ರಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಇಂಟರ್‌ನ್ಯಾಶನಲ್‌ ರೆಸ್ಕ್ಯೂ ಕಮಿಟಿಯ ಡಿಮಿಟ್ರ ಕಲೊಗೆರೊಪೊಲೌ.

ದ್ವೀಪದಲ್ಲಿ ಕ್ವಾರಂಟೈನ್‌ ಸೌಲಭ್ಯ ಮತ್ತು ಶುಶ್ರೂಷೆಯನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ. ಗ್ರೀಕ್‌ನಿಂದ ತ್ವರಿತವಾಗಿ ವೈದ್ಯರನ್ನು ಮತ್ತು ಸೌಲಭ್ಯಗಳನ್ನು ರವಾನಿ ಸಬೇಕೆಂದು ಡಿಮಿಟ್ರಿ ಆಗ್ರಹಿಸಿದ್ದಾರೆ.

Advertisement

ದ್ವೀಪದಿಂದ ಮಕ್ಕಳನ್ನು ಮತ್ತು ಮಹಿಳೆಯರನ್ನು ಆದ್ಯತೆಯಲ್ಲಿ ತೆರವುಗೊಳಿಸಬೇಕೆಂದು ಕೆಲವು ತಿಂಗಳ ಹಿಂದೆಯೇ ವೈದ್ಯರು ಸಲಹೆ ಮಾಡಿದ್ದರು. ಆದರೆ ಗ್ರೀಕ್‌ ಸರಕಾರ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಲೆಸ್ಬೋಸ್‌ನಂಥ ದ್ವೀಪದಲ್ಲಿ ವೈರಸ್‌ ಹರಡಲು ಹೆಚ್ಚು ಸಮಯ ಬೇಕಿಲ್ಲ. ದ್ವೀಪವಿಡೀ ಜನ ರಿಂದ ತುಂಬಿರುವುದರಿಂದ ಲಾಕ್‌ಡೌನ್‌ನಂಥ ಕ್ರಮ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ. ದ್ವೀಪದ ಜನ ಸಾಂದ್ರತೆಯನ್ನು ಕಡಿಮೆಗೊಳಿಸುವುದೇ ಪರಿಹಾರ.

ಗ್ರೀಕ್‌ ಈಗಾಗಲೇ ಸಾಕಷ್ಟು ವಲಸಿಗರಿಗೆ ಆಶ್ರಯ ಕೊಟ್ಟಿರುವುದರಿಂದ ಇನ್ನಷ್ಟು ಜನರನ್ನು ಸೇರಿಸಿ ಕೊಳ್ಳಲು ನಿರಾಕರಿಸುತ್ತಿದ್ದ, ಇದರ ಬದಲಾಗಿ ಜರ್ಮನಿ, ಬೆಲ್ಜಿಯಂನಂಥ ದೇಶಗಳಿಗೆ ವಲಸಿಗರನ್ನು ಸ್ವೀಕರಿಸಿ ಕೊಳ್ಳಲು ಹೇಳುತ್ತಿದೆ. ಆದರೆ ಯಾವ ದೇಶ ವೂ ಕೋವಿಡ್‌ ಸಂಕಷ್ಟದ ಕಾಲದಲ್ಲಿ ವಲಸಿಗರನ್ನು ಸ್ವೀಕರಿ ಸಲು ಒಪ್ಪುತ್ತಿಲ್ಲ. ಹೀಗಾಗಿ ಅವರು ಜೀನ ದ್ವೀಪದಲ್ಲಿ ಅತಂತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಲೆಸ್ಬೋಸ್‌ ದ್ವೀಪದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವಾರ 5000 ಇದ್ದ ವಲಸಿಗರ ಸಂಖ್ಯೆ ಈ ವರ್ಷದ ಆದಿಯಲ್ಲಿ 20,000ಕ್ಕೇರಿತ್ತು. ಬಳಿಕ 2000 ಜನರನ್ನು ಸ್ಥಳಾಂತರಿಸಲಾಗಿತ್ತು. ಇಲ್ಲಿರುವವರೆಲ್ಲ ವೈರಸ್‌ಗೆ ಸುಲಭ ತುತ್ತಾಗುವರಾಗಿರುವ ಕಾರಣ ಅವರ ಸುರಕ್ಷೆಗೆ ಮೊದಲ ಆದ್ಯತೆ ನೀಡಬೇಕೆಂದಿದ್ದಾರೆ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next