Advertisement
ಮಹಾಮಾರಿ ಕೋವಿಡ್ ಕಾಲಿಟ್ಟಂತಹ ಪ್ರಾರಂಭಿಕ ಹಂತದಲ್ಲಿ ಮಾ.27 ರಂದು ದಾವಣಗೆರೆಯಲ್ಲಿ ಪ್ರಥಮ ಪ್ರಕರಣ ಪತ್ತೆಯಾಗಿತ್ತು. ಆ ನಂತರ ಇಬ್ಬರಲ್ಲಿ ಕಾಣಿಸಿಕೊಂಡಿತ್ತು. ಮೂವರು ಗುಣಮುಖರಾದ 32 ದಿನಗಳಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗದೆ ಜಿಲ್ಲೆ ಹಸಿರು ವಲಯದತ್ತ ಸಾಗಿತ್ತು.
Related Articles
Advertisement
ಲಾಕ್‌ಡೌನ್-1 ಮತ್ತು 2ರ ಸಂದರ್ಭದಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್ ಲಾಕ್‌ಡೌನ್ ತೆರವಿನ ನಂತರ ಹರಡುತ್ತಿದೆ. ಅಲ್ಲೆಲ್ಲೋ ಇದ್ದಂತಹ ಕಂಟೇನ್ಮೆಂಟ್‌ಗಳು ಮನೆಯ ಬಾಗಿಲಿಗೆ ಬರುತ್ತಿರುವುದರಿಂದ ಜನರಲ್ಲಿ ಆತಂಕ ಉಂಟು ಮಾಡುತ್ತಿದೆ. ಮುಕ್ತ ವಾತಾವರಣಕ್ಕೆ ಕಡಿವಾಣ ಬೀಳತೊಡಗಿದೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನ 300 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನಾಗಿ ಗುರುತಿಸಲಾಗಿದೆ. 250 ಐಸೋಲೇಷನ್ ಬೆಡ್ ಸಿದ್ಧಪಡಿಸಲಾಗಿದೆ. 19 ಖಾಸಗಿ ಆಸ್ಪತ್ರೆಗಳನ್ನೂ ಚಿಕಿತ್ಸೆಗೆ ಗುರುತಿಸಲಾಗಿದೆ. ಎರಡು ಖಾಸಗಿ, ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಪ್ರಾರಂಭಿಸಲಾಗಿದೆ.
ದಿನಕ್ಕೆ 3 ಸಾವಿರ ಕೊರೊನಾ ಪರೀಕ್ಷೆಯ ಗುರಿ ನೀಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ತಲಾ 10 ಐಸೋಲೇಷನ್ ಬೆಡ್ ಸಿದ್ಧಪಡಿಸಲಾಗಿದೆ. ಹೆಚ್ಚುವರಿಯಾಗಿ 40 ಐಸೋಲೇಷನ್ ಬೆಡ್ ಮಾಡಲು ಕ್ರಮ ವಹಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಕೋವಿಡ್ ಗುಣಲಕ್ಷಣಗಳು ಇಲ್ಲದ ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗೆ 100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಗುರುತಿಸಲಾಗಿದೆ. ದಾವಣಗೆರೆ ನಗರದಲ್ಲಿ ಒಟ್ಟು 300 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಕಾರ್ಯ ನಿರ್ವಹಿಸುತ್ತಿವೆ. ಶೇ.50 ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರದ ಕ್ಲಿನಿಕ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕೋವಿಡ್ ಸೋಂಕು, ಸಾವಿನ ಪ್ರಮಾಣ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ಸೋಂಕಿನ ಅಬ್ಬರತೆ ಹೆಚ್ಚಾಗುತ್ತಲೇ ಹೋಗುತ್ತಿರುವುದೇ ಆತಂಕಪಡುವಂತಾಗಿದೆ.
-ರಾ. ರವಿಬಾಬು