Advertisement

ಕಾರಟಗಿ ಸುತ್ತ ಮುತ್ತ ಕೋವಿಡ್ ಆತಂಕ

10:21 AM Jul 15, 2020 | Suhan S |

ಕಾರಟಗಿ: ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯ ಸುತ್ತಲಿನ ಗ್ರಾಮಗಳಲ್ಲಿ ಕಳೆದ ಹದಿನೈದು ದಿನಗಳಿಂದ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.

Advertisement

ಪಟ್ಟಣದ ನವಲಿ ರಸ್ತೆಯ ಕೆರೆಬಸವೇಶ್ವರ ದೇವಸ್ಥಾನ ಮುಂಭಾಗದ 13ನೇ ವಾರ್ಡಿನ ಮನೆಯಲ್ಲಿ 27 ವರ್ಷದ ವ್ಯಕ್ತಿ, 17ನೇ ವಾರ್ಡಿನ ಜೆಪಿ ನಗರದ 55 ವರ್ಷದ ವ್ಯಕ್ತಿ ಹಾಗೂ ದೇವಿಕ್ಯಾಂಪ್‌ನಲ್ಲಿ ಓರ್ವ ವ್ಯಕ್ತಿಗೆ ಕೋವಿಡ್ ದೃಢಪಟ್ಟಿದ್ದು ಸೋಂಕಿತರನ್ನು ಕೊಪ್ಪಳದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಸೋಂಕಿತರು ವಾಸಿಸುವ ಮನೆ ಸುತ್ತಮುತ್ತಲಿನ 50 ಮೀ. ಪ್ರದೇಶ ಸೀಲ್‌ಡೌನ್‌ ಮಾಡಲಾಗಿದ್ದು, ಪುರಸಭೆ ಸಿಬ್ಬಂದಿ ಸ್ಯಾನಿಟೈಸರ್‌ ಸಿಂಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೋವಿಡ್ ಪತ್ತೆಯಾದ ವಾರ್ಡ್‌ಗಳಲ್ಲಿ ಪುರಸಭೆ ಅಧಿಕಾರಿಗಳು ಸೋಂಕಿತರು ವಾಸಿಸುವ ಪ್ರದೇಶಗಳಲ್ಲಿನ ಜನರಿಗೆ ಕೋವಿಡ್ ಮುಂಜಾಗ್ರತೆ ಬಗ್ಗೆ ತಿಳಿ ಹೇಳಿ ಜಾಗೃತಿ ಮೂಡಿಸಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸುರೇಶ. ಎಚ್‌, ಎಎಸ್‌ಐ ಗಂಗಪ್ಪ, ಸರ್ವೇಯರ್‌ ಹಸೇನ್‌ ಸಾಬ್‌, ಪುರಸಭೆ ಅಧಿಕಾರಿ ರಾಜು, ರಾಘವೇಂದ್ರ, ಅನಂತ, ಚನ್ನಬಸವ ಸ್ವಾಮಿ, ಸುಮಾ ಕಂಚಿ, ಪವನ ಕುಮಾರ, ನಾಗರಾಜ ಇಚನಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next