Advertisement
ಈ ರೀತಿಯ ಮಾತುಗಳು ಈಗ ಮನೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನಮಗೆ ತೊಂದರೆ ನೀಡಬಾರದೆಂದು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಗೇಮ್ ಆಡಲು ಬಿಟ್ಟುಬಿಡುವ ಪರಿಪಾಟ ಪೋಷಕರದ್ದು, ಮಕ್ಕಳು ಪ್ರತಿದಿನ ವಿಡಿಯೊ ಗೇಮ್ ಆಡುತ್ತಾ ದಿನದೂಡುತ್ತಾರೆ. ಅದರೆ, ಅವರಿಗೆ ಇದರಿಂದ ಕೌಶಲ್ಯ ಅಥವಾ ಮುಂದೆ ಅವರು ಓದಬೇಕಿರುವ, ಕಲಿಯಬೇಕಿರುವ ತರಗತಿಗಳಿಗೆ ಇದು ಅನುಕೂಲವಾಗುತ್ತದೆಯೇ ಎಂದು ತಂದೆ-ತಾಯಿಗಳು ಯೋಚಿಸುವುದೇ ಇಲ್ಲ.
Related Articles
Advertisement
ಬ್ಲಾಕ್ ಪ್ರಿಂಟಿಂಗ್
ಮಕ್ಕಳಲ್ಲಿ ಆರ್ಟ್ ಮತ್ತು ಡಿಸೈನ್ ಕೌಶಲ್ಯವನ್ನುನ ವೃದ್ಧಿಗೊಳಿಸಲು ಬ್ಲಾಕ್ ಪ್ರಿಂಟಿಂಗ್ ಸಮ್ಮರ್ ಕೋರ್ಸ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೊಂದು ಕೌಶಲ್ಯಾಧಾರಿತ ಕಲಿಕೆ. ಇಲ್ಲಿ ಮಕ್ಕಳು ಮಾಧ್ಯಮ, ವರ್ಣಮಯ ಸಾಮಗ್ರಿಗಳು, ವಿವಿಧ ತಂತ್ರಗಳ ಮೂಲಕ ತಮ್ಮ ಆಲೋಚನೆಯನ್ನು ಸಕಾರಗೊಳಿಸಲು ಅನುಕೂಲವಾಗಿದೆ. ಮಕ್ಕಳು ಮುದ್ರಣ ಮಾಡಲು ಉಚಿತ ಕ್ಯಾನ್ವಾಸ್ ನೀಡಲಾಗುತ್ತದೆ. ಈ ಕೋರ್ಸ್ 5 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಅನ್ವಯವಾಗಲಿದೆ. ಒಟ್ಟು ನಾಲ್ಕು ತರಗತಿಗಳಲ್ಲಿ ನಡೆಯುವ ಈ ತರಬೇತಿ ಮೇ 6, 13, 20, 27 ರಂದು ನಡೆಯಲಿದೆ. ಮಾಹಿತಿಗೆ 8861996557 ಸಂಪರ್ಕಿಸಿ.
ಸೌರವ್ಯೂಹದ ಅನ್ವೇಷಣೆ
8, 9, 10ನೇ ತರಗತಿ ಉತ್ತೀರ್ಣರಾದ(12 ವರ್ಷ ಮೇಲ್ಪಟ್ಟ) ವಿದ್ಯಾರ್ಥಿಗಳಿಗಾಗಿಆಯೋಜಿಸಿರುವ ಆನ್ ಲೈನ್ ಕಾರ್ಯಾಗಾರವಾಗಿದ್ದು, ಸೌರವ್ಯೂಹಕ್ಕೆ ಸಂಬಂಧಿಸಿದ ಆಕಾಶಕಾಯಗಳು, ಚಲನೆ, ವಿಶೇಷತೆ ನೆರೆ ಹೊರೆ ದೇಶದೊಂದಿಗೆ ಇತ್ತೀಚೆಗೆ ನಡೆಸಿದ ಆವಿಷ್ಕಾರಗಳ ಬಗೆಗೆ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮವು ಮೇ 8, 9, 15, 16 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ https:// in.bookmyshow.com/bengaluru/events/raellpadamsees-ace-summer-cruise-with-drama/ ET00305916/bookingStep/datetime Êæã. 9320130013 ಸಂಪರ್ಕಿಸಿ.
ಆನ್‌ಲೈನ್ ಛಾಯಾಗ್ರಹಣ
ಔಟ್ ಬ್ಯಾಕ್ ಎಕ್ಟೀರಿಯನ್ಸ್ ಸಂಸ್ಥೆಯು ಆಯೋಜಿಸುತ್ತಿರುವ ಆನ್ ಲೈನ್ ಫೋಟೋಗ್ರಫಿ ಸಮ್ಮರ್ ವರ್ಕ್ ಶಾಪ್ ನಲ್ಲಿ ಮಕ್ಕಳು ಮನೆಯಲ್ಲೇ ಕುಳಿತು ಫೋಟೋಗ್ರಫಿಯನ್ನು ಕಲಿಯುವಂಥ ಅವಕಾಶಗಳನ್ನು ಒದಗಿಸಲಾಗುತ್ತದೆ. ಛಾಯಾಗ್ರಹಣದ ವಿವಿಧ ತಾಂತ್ರಿಕ ವಿಷಯಗಳು, ಕ್ಯಾಮೆರಾ ಬಳಕೆ, ವಿಶೇಷ ಸಂದರ್ಭಗಳಲ್ಲಿ ಕ್ಯಾಮೆರಾ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳು ಇದರಲ್ಲಿದೆ. 10-16 ವರ್ಷದ ಮಕ್ಕಳಿಗೆ ಈ ಕಾರ್ಯಾಗಾರವನ್ನು ಆಯೋಜಿ ಸಲಾಗಿದ್ದು, ಬ್ಯಾಚ್- ಮೇ 19-23ರ ವರೆಗೆ ನಡೆಯಲಿದೆ. ಇದ ಪೂರ್ಣ ಆನ್ ಲೈನ್ ಮೂಲಕವೇ ನಡೆಯುವ ವರ್ಕ್ ಶಾಪ್ ಆಗಿದ್ದು, https://www.theoutbackexperience.in/ portfolio/virtual&online&kids&photography&w orkshop/ ಮೂಲಕ ನೋಂದಾ ಯಿಸಿ ಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9900147018 ಸಂಪರ್ಕಿಸಿ.
ಡ್ರೋನ್ ಮತ್ತು ಕೋಡಿಂಗ್ ಕಲಿಕೆ
ಕಿಡ್ಡಿಪಿ ಸಂಸ್ಥೆಯು ಮಕ್ಕಳಿಗಾಗಿ ಡ್ರೋನ್ ಮತ್ತು ಕೋಡಿಂಗ್ ಕಲಿಕೆ ಮೂಲಕ ಮಕ್ಕಳ ಮೆದುಳಿನ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಶಿಬಿರವನ್ನು ಆಯೋಜಿಸಿದೆ. ಇದರಲ್ಲಿ ಕೋಡಿಂಗ್ ಕಿಟ್‌ಗಳು, ಡ್ರೋನ್ ನಿರ್ಮಾಣ ಮತ್ತು ಅದರ ನಿಯಂತ್ರಿಸುವ ತರಬೇತಿಗಳನ್ನು ಅಳವಡಿಸಲಾ ಗಿದೆ. ಇದಲ್ಲದೆ ಎಂಜಿನಿಯ ರಿಂಗ್ ಅಂಡ್ ಎರೋ, ರೊಬೋಟಿಕ್, ಎಲೆಕ್ಟಾನಿಕ್ಸ್, ಎಕೆøಷನ್, ಕ್ರಿಯೆಟಿವಿಟಿ ಮತ್ತು ಲಾಗÌಜ್ ತರಬೇತಿಗಳೂ ಇವೆ. 1ರಿಂದ 2 ವಾರಗಳು ನಡೆಯು ಶಿಬಿರದಲ್ಲಿ 9 ವರ್ಷ ಮೇಲ್ಪಟ್ಟ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಮಾರ್ಚ್, ಏಪ್ರಿಲ್‌ನಲ್ಲಿ ಎರಡು ಶಿಬಿರಗಳು ನಡೆದಿವೆ. ಮೇ, ಜೂನ್‌ನಲ್ಲಿಯೂ ಶಿಬಿರಗಳು ನಡೆಯಲಿದ್ದು, ಶುಲ್ಕವನ್ನು ನಿಗದಿ ಮಾಡಲಾಗಿದೆ. ಮಾಹಿತಿಗೆ //bit.ly/kpbb_ summercamps2022,, ಮೊ. 91 9845349742, 91 7406419320 ಸಂಪರ್ಕಿಸಿ.
ಮಕ್ಕಳಿಗಾಗಿ ವೈಜ್ಞಾನಿಕ ಚಿಂತನೆ
ಇಂದಿನ ಮಕ್ಕಳಿಗೆ ವಿಜ್ಞಾನ ಕುತೂಹಲ, ರೋಮಾಂಚನಕಾರಿ ಮತ್ತು ಆಸಕ್ತಿದಾಯಕ ವಿಷಯವಾಗಿದೆ. ವೈಜ್ಞಾನಿಕ ಮನೋ ಧರ್ಮ ಹೆಚ್ಚಿಸುವುದು, ವಿಜ್ಞಾನವು ಹೇಗೆ ಕಾರ್ಯನಿರ್ವ ಹಿಸುತ್ತದೆ ಎಂಬುದರ ಜಾಗೃತಿ, ವಿಮಶಾìತ್ಮಕ ಚಿಂತನೆ, ಆತ್ಮವಿಶ್ವಾಸ ವನ್ನು ಬೆಳೆಸಿ ಪ್ರಶ್ನಾತ್ಮಕ ಪ್ರವೃತಿಯನ್ನು ಜಾಗೃತಗೊಳಿಸುವುದು ಈ ಶಿಬಿರದ ಉದ್ದೇಶ. ಇದರಲ್ಲಿ ಗುಂಪು ಎ ಮತ್ತು ಬಿ ಎಂದು ವಿಂಗಡನೆ ಮಾಡಿದ್ದು ಎ ಗುಂಪಿನಲ್ಲಿ 1-4ನೇ ತರಗತಿ ಮಕ್ಕಳಿಗೆ ಮತ್ತು ಗುಂಪು ಬಿ ನಲ್ಲಿ 5-8ನೇ ತರಗತಿ ಮಕ್ಕಳಿಗೆ ಕಾರ್ಯಾಗಾರ ನಡೆಸಲಾ ಗುವುದು.
ಗುಂಪು ಎ: ಮಕ್ಕಳಿಗೆ ಎಲೆಕ್ಟ್ರಿಕ್ ಸರ್ಕಿಟ್, ಸರಳ ಯಂತ್ರಗಳು, ಗಾಳಿ-ನೀರಿನ ಒತ್ತಡ, ರಾಸಾಯನಿಕ ಕ್ರಿಯೆಗಳ ಕುರಿತು ತಿಳಿಸಲಾಗುತ್ತದೆ.
ಗುಂಪು ಬಿ: ಮಕ್ಕಳಿಗೆ ಬಲಗಳು, ಮಸೂರಗಳು ಮತ್ತು ದೃಗ್ವಿಜ್ಞಾನದ ಸಮತೋಲನ. ರಾಸಾಯನಿಕ ಕ್ರಿಯೆಗಳು, ಲೋಳೆ, ಧಾತುಗಳು ಮತ್ತು ಸಂಯುಕ್ತಗಳು. ನೊರೆ ಉತ್ಪಾದನೆ, ಸ್ಲೆ„ಡ್ ತಯಾರಿಕೆ, ಮೈಕ್ರೋಸ್ಕೋಪಿ ಕುರಿತು ವಿವರಿಸ ಲಾಗುತ್ತದೆ. ಒಟ್ಟಾರೆ 6-14 ವರ್ಷದ ಮಕ್ಕಳಿಗೆ ಆನ್ ಲೈನ್ ಮತ್ತು ಆಫ್ಲೈನ್ ಮೂಲಕ ಕಾರ್ಯಾಗಾರ ನಡೆಸಲಿದ್ದು, ಈಗಾಗಲೇ ಒಂದು ತರಗತಿ ಪ್ರಾರಂಭವಾಗಿ 2ನೇ ಬ್ಯಾಚ್ ಮೇ 7ಕ್ಕೆ ಶುರುವಾಗಲಿದೆ. ಮಾಹಿತಿಗೆ ರಂಜನಾ ಆನಂದ್ 9945275572, 9900084641 ಸಂಪರ್ಕಿಸಿ.
ತಾರಾಲಯದಲ್ಲಿ ವಿವಿಧ ಬೇಸಿಗೆ ಶಿಬಿರ
ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಮಕ್ಕಳಿಗೆ ವಿಜ್ಞಾನ ಕುರಿತು ಆಸಕ್ತಿ ಮೂಡಿಸಲು, ಸೃಜನಾತ್ಮಕ ಕಲಿಕೆಗಾಗಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆ.
- ಮಕ್ಕಳಿಗಾಗಿ ಕಮ್ಮಟ( ಟಿನಿ ಟಾಟ್ಸ್): ಈ ಶಿಬಿರವು ಎಂಟು ವರ್ಷ ಮೇಲ್ಪಟ್ಟ 3,4,5 ನೇ ತರಗತಿ ಓದುತ್ತಿರುವ ಮಕ್ಕಳಿಗಾಗಿ ವಿನ್ಯಾಸಗೊಳಿ ಸ ಲಾಗಿದೆ. ಇದು ಎರಡು ಗಂಟೆಗಳ ಕಾಲದ ಆನ್ ಲೈನ್ ಕಾರ್ಯಕ್ರಮವಾಗಿದ್ದು, ಮೇ 4 ರಂದು ಈ ಕಮ್ಮಟ ನಡೆಯಲಿದೆ. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಮಾಡಬಹುದಾದ ಸರಳ ವಿಜ್ಞಾನ ಪ್ರಯೋಗಗಳ ಬಗ್ಗೆ ತಿಳಿಸಿಕೊಡಲಾಗುವುದು. ಸಾಮಗ್ರಿಗಳ ಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ನೀಡಲಾಗುವುದು. ಪ್ರಯೋಗವನ್ನು ಜತೆಯಲ್ಲೇ ಮಾಡುವ ಅವಕಾಶ ಕಮ್ಮಟದಲ್ಲಿದೆ. ನೋಂದಣಿಗೆ æ https://in.bookmyshow.com/events/ summer&programmes&2021/ET00310321? webview=true ಸಂಪರ್ಕಿಸಿ