ಬೆಂಗಳೂರು: ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ವಾರಾಂತ್ಯದ ಕರ್ಫ್ಯೂ ಅನ್ನು ಜನವರಿ ಅಂತ್ಯದವರೆಗೂ ವಿಸ್ತರಿಸಿದೆ. ಆ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಎಲ್ಲ ಅಂಗಡಿ ಮುಂಗಟ್ಟುಗಳು, ಪಬ್, ಬಾರ್, ರೆಸ್ಟೋರೆಂಟ್‌ಗಳು ಬಂದ್ ಆಗಿವೆ.
ಆದರೆ ಜನರು ಹಸಿವಿನಿಂದ ಬಳಲದೇ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಹೋಟೆಲ್ ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ಕಲ್ಪಿಸಿದೆ. ಆದರೆ ವಾರಾಂತ್ಯದಕರ್ಫ್ಯೂ ವೇಳೆ ಗ್ರಾಹಕರು ಪಾರ್ಸೆಲ್ ಸೇವೆಗೆ ಅಷ್ಟುಒಲವು ತೊರುತ್ತಿಲ್ಲ. ಆ ಹಿನ್ನೆಲೆಯಲ್ಲಿ ವಾರಾಂತ್ಯದಕರ್ಫ್ಯೂನಲ್ಲಿ ಶೇ.25ರಷ್ಟು ಪಾರ್ಸೆಲ್ ವ್ಯಾಪಾರ ನಡೆದಿದೆ. ಶೇ.75ರಷ್ಟು ವ್ಯಾಪಾರ ವಹಿವಾಟಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.
ಕಳೆದ ಲಾಕ್‌ಡೌನ್‌ಗಳಲ್ಲಿ ಸರ್ಕಾರ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅವಕಾಶ ಕಲ್ಪಿಸಿತ್ತು. ಹಲವು ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಕಳೆದ ಬಾರಿಯ ಲಾಕ್‌ಡೌನ್‌ಗಳಲ್ಲಿ ಆದಷ್ಟು ವ್ಯಾಪಾರ ಈಗ ನಡೆಯುತ್ತಿಲ್ಲ. ವಾರಾಂತ್ಯದ ಕರ್ಫ್ಯೂನಲ್ಲಿ ಪಾರ್ಸೆಲ್ ಸೇವೆಗೆ ಜನರು ಒಲವು ತೋರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಶೇ.75ರಷ್ಟು ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದೆ ಸರ್ಕಾರ ಈ ಹಿಂದಿನ ಲಾಕ್‌ಡೌನ್ ವೇಳೆ ಪಾರ್ಸೆಲ್ ಸೇವೆಗೆ ಅವಕಾಶ ಕಲ್ಪಿಸಿತ್ತು. ಆ ವೇಳೆ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ವಿವಿಧ ರೀತಿಯ ಆಹಾರಪದಾರ್ಥಕ್ಕೆ ಆರ್ಡರ್ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ ಎಂಬುದು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಅಳಲು.
ಗ್ರಾಹಕರಲ್ಲಿ ಭಯ ಕಾಡುತ್ತಿದೆ: ವಾರಾಂತ್ಯದ ಕರ್ಫ್ಯೂ ಅಂದ ತಕ್ಷಣ ಜನರು ಭಯ ಪಡುತ್ತಾರೆ. ಮನೆಯಿಂದ ಹೊರಗಡೆ ಹೋಗಲು ಹೆದರುತ್ತಾರೆ. ಹೋಟೆಲ್‌ಗೆ ಪಾರ್ಸೆಲ್ ಸೇವೆ ತರಲು ಬಂದರೂ ಅವರಿಗೆ ಪೊಲೀಸರ ಕಾಟ. ಆ ಹಿನ್ನೆಲೆಯಲ್ಲಿ ಪಾರ್ಸೆಲ್ ಸೇವೆಗೆ ಗ್ರಾಹಕರು ಆಸಕ್ತಿ ತೋರುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ ಹೇಳುತ್ತಾರೆ.ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ಹಲವು ಹೋಟೆಲ್ ಮತ್ತು ದರ್ಶನಿಗಳ ಮಾಲೀಕರು ಬಂದ್ ಮಾಡಿರುತ್ತಾರೆ.
ಹೀಗಾಗಿ ಶೇ.15 ರಿಂದ 20 ರಷ್ಟು ಹೋಟೆಲ್‌ಗಳ ಮಾತ್ರ ತೆರೆದಿರುತ್ತವೆ ಎಂದು ತಿಳಿಸುತ್ತಾರೆ. ವಾರಾಂತ್ಯದ ಕರ್ಫ್ಯೂ ವೇಳೆ ಪಾರ್ಸೆಲ್ ಸೇವೆ ಇರುವ ಬಗ್ಗೆ ಬಹಳಷ್ಟು ಗ್ರಾಹಕರಿಗೆ ಮಾಹಿತಿ ಇಲ್ಲ ಎಂಬುವುದು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀ ಕರು ಹೇಳುತ್ತಾರೆ. ಯುವ ಸಮೂಹಕ್ಕೆ ಮೊಬೈಲ್‌ನಲ್ಲಿ ಪಾರ್ಸೆಲ್ ಸೇವೆ ಬುಕ್ ಮಾಡುವ ಬಗ್ಗೆ ಮಾಹಿತಿ ಇದೆ. ಆದರೆ ಕೆಲವು ಹಿರಿಯರಿಗೆ ಈ ಬಗ್ಗೆ ಪೂರ್ಣ ಪ್ರಮಾಣ ಮಾಹಿತಿಯಿಲ್ಲ. ಆ ಹಿನ್ನೆಲೆಯಲ್ಲಿ ಅವರು ಪಾರ್ಸೆಲ್ ಸೇವೆ ಸೇರಿದಂತೆ ಇನ್ನಿತರ ಸೇವೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.
ಕೋವಿಡ್ ಸೇರಿದಂತೆ ನಾನಾ ಕಾರಣ ಗಳಿಂದಾಗಿ ಗ್ರಾಹಕರು ಪಾರ್ಸೆಲ್ ಸೇವೆಗೆ ಆಸಕ್ತಿ ತೋರುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತಷ್ಟು ಹೋಟೆಲ್‌ಗಳ ಬಾಗಿಲು ಬಂದ್ ಆಗಲಿವೆ. ಹೋಟೆಲ್ ಉದ್ಯಮ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯನ್ನಿರಿಸಬೇಕು.
–ಚಂದ್ರಶೇಖರ್ ಹೆಬ್ಟಾರ್ ,ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ
–ದೇವೇಶ ಸೂರಗುಪ್ಪ