Advertisement

ಕೋವಿಡ್ ನಿಂದ ಶಿಕ್ಷಣಕ್ಕೆ ಕುತ್ತು

05:43 PM Jun 21, 2021 | Team Udayavani |

ಜೀವನ ಎಂದರೆ ಕನಸನ್ನು ನನಸು ಮಾಡುವುದು. ಎಲ್ಲರಿಗೂ ಒಂದಿಲ್ಲೊಂದು ಆಸೆಗಳಿರುತ್ತವೆ. ಅಲ್ಲದೆ ಒಳ್ಳೆ ರೀತಿಯ ಶಿಕ್ಷಣ ಪಡೆದುಕೊಳ್ಳಬೇಕೆಂಬ ಹಂಬಲವಿರುತ್ತದೆ.

Advertisement

ಅದಲ್ಲದೆ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಪಾತ್ರ ಅತೀ ಮಹತ್ವದ್ದು. ಈ ಮಹಾಮಾರಿ ಕೊರೊನಾದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅಲ್ಲೋಲಕಲ್ಲೋಲವಾಗಿದೆ. ಸರಕಾರ ಶಾಲಾ-ಕಾಲೇಜುಗಳು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ಬಂದ್‌ ಮಾಡಿ, ಆನ್‌ಲೈನ್‌ ಮೂಲಕ ಪಾಠ ಮಾಡಲು ಹೇಳಿದೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ಮೊಬೈಲ್‌ ಇಲ್ಲ, ಹಳ್ಳಿಗಳಲ್ಲಿ  ನೆಟ್‌ವರ್ಕ್‌ ಸರಿಯಾಗಿಲ್ಲ.ಜತೆಗೆ ಅಷ್ಟೊಂದು ಪರಿಣಾಮಕಾರಿಯೂ ಇಲ್ಲ. ಬಡತನದಲ್ಲಿ ನೊಂದು-ಬೆಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ತರಬೇತಿ ಪಡೆದು ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಪಟ್ಟಣಕ್ಕೆ ಬಂದು ಮನೆಗೆ ನಿರಾಸೆಯಿಂದ ಮರಳಿದ್ದಾರೆ.

ಈ ಕೋವಿಡ್ ಅಲೆಯಲ್ಲಿ ಎಷ್ಟೋ ವಿದ್ಯಾರ್ಥಿಗಳ ಸರಕಾರಿ ನೌಕರಿ, ಪೊಲೀಸ್‌ ಹಾಗೂ ಇನ್ನಿತರ ಸರಕಾರಿ ಹುದ್ದೆಗಳು ಪಡೆಯುವ ವಯೋಮಿತಿ ಮೀರಿದೆ. ಎಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿಗಳ ಕನಸುಗಳನ್ನು ನುಚ್ಚುನೂರು ಮಾಡಿದೆ. ಆದ್ದರಿಂದ ಸರಕಾರವು ಈ ಹುದ್ದೆಗಳ ವಯೋಮಿತಿಯನ್ನು ಹೆಚ್ಚಿಸಬೇಕಿದೆ. ಕೂಲಿಕಾರ್ಮಿಕರ ಪರದಾಟ, ಬಡವರ ಹಸಿವಿನ ಕೂಗು, ಚಿಕ್ಕ-ಚಿಕ್ಕ ಮಕ್ಕಳ ಹಸಿವಿನ ನರಳಾಟದ ಮಧ್ಯೆ ವಿದ್ಯಾರ್ಥಿಗಳು ಭವಿಷ್ಯದ ಚಿಂತೆಯಲ್ಲಿ ಮೌನಿಯಾಗಿದ್ದಾರೆ. ಸರಕಾರ ಸರಿಯಾದ ಕ್ರಮ ತೆಗೆದುಕೊಂಡು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ.

 

ಮಲ್ಲಿಕಾರ್ಜುನ ಗಾಯಕವಾಡ

Advertisement

ವಿಜಯಅದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next