Advertisement

ಕೋವಿಡ್ ಕರಿನೆರಳಲ್ಲಿ ದೀಪಾವಳಿ ಸಡಗರ

07:14 PM Nov 15, 2020 | Suhan S |

ದೇವನಹಳ್ಳಿ: ಕೋವಿಡ್ ಎಂಬ ಹೆಮ್ಮಾರಿ ಇಡೀಜಗತ್ತನ್ನೇ ಬೆಚ್ಚಿಬೀಳಿಸಿರುವ ಸಂದರ್ಭದಲ್ಲಿ ಕತ್ತಲಿ ನಿಂದ ಬೆಳಕಿನಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಭಾರತೀಯ ಪರಂಪರೆ ಬಹು ದೊಡ್ಡ ಹಬ್ಬ ದೀಪಾವಳಿಯನ್ನು ಜಿಲ್ಲೆಯಾದ್ಯಂತಶ್ರದ್ಧಾಭಕ್ತಿ ಭಾವದಿಂದ ಆಚರಿಸಲಾಯಿತು.

Advertisement

ದೇವಾಲಯಗಳಲ್ಲಿ ಕೋವಿಡ್ ಎಂಬ ಹೆಮ್ಮಾರಿ ಇರುವುದರಿಂದ ಪ್ರತಿಯೊಬ್ಬರೂ ದೇವಾಲಯಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅರ್ಚಕರು ಸೂಚನೆನೀಡುತ್ತಿದ್ದದ್ದು, ಗಮನ ಸೆಳೆಯಿತು.ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿಯೂವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನರಕಚತುದರ್ಶಿ ದಿನದಂದು ಹಲವು ಮನೆತನಗಳಲ್ಲಿ ಪಾರಂಪರಿಕವಾಗಿ ಆಚರಿಸುವ ದೀಪಾವಳಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಲ್ಲಿ ಅಮಾವಾಸ್ಯೆ ಅಂಗವಾಗಿ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು. ರಾಜಸ್ಥಾನ ಮೂಲದ ವರ್ತಕರು ದೀಪಾವಳಿ ಅಮವಾಸ್ಯೆ ದಿನ ಹೊಸಲೆಕ್ಕಪುಸ್ತಕಗಳಿಗೆ ಪೂಜೆ ಮಾಡುವ ಪರಿಪಾಠವಿದ್ದು, ವಿಶೇಷವಾಗಿವರ್ತಕರುಅಂಗಡಿಗಳನ್ನುಅಲಂಕರಿಸಿ, ಲಕ್ಷ್ಮೀ ಪೂಜೆ ಮಾಡಿ, ಸಿಹಿ ಹಂಚಿದರು.

ದೇವನಹಳ್ಳಿ ನಗರದ ವೀರಭದ್ರ ಸ್ವಾಮಿ, ಪರ್ವತೇಶ್ವರ, ನಗರೇಶ್ವರ, ಗಂಗಮ್ಮ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿಗೌರಿ ದೇವಿ ಮತ್ತು ಕೇದಾರೇಶ್ವರ ಸ್ವಾಮಿಯಪ್ರತಿಷ್ಠಾಪನಾ ಕಾರ್ಯಗಳು ಬೆಳಗಿನಿಂದಲೇನಡೆದವು. ಮಹಿಳೆಯರು ಬಿದಿರಿನ ಮರ ಮತ್ತುಬೆಳ್ಳಿಯ ತಟ್ಟೆಯಲ್ಲಿ ಕಜ್ಜಾಯ ಬಾಳೆಹಣ್ಣು, ಇತರೆ ವಸ್ತುಗಳನ್ನು ಇರಿಸಿ ಗೌರಿದೇವಿಗೆ ಸಮರ್ಪಿಸಿದರು.ಹಬ್ಬದಲ್ಲಿ ಕುಟುಂಬಸ್ಥರು ನೋಮಿದ ದಾರವನ್ನುಕೈಗೆ ಕಟ್ಟಿಕೊಂಡಿದ್ದರು. ಮನೆ ಮನೆ ಬೆಳಗುವ ದೀಪದಬೆಳಕು ಎಲ್ಲೆಡೆ ಪಸರಿಸಬೇಕೆಂಬುವುದು ದೀಪಾವಳಿ ಹಬ್ಬದ ಸಂಕೇತವಾಗಿದ್ದು, ಪ್ರತಿ ಮನೆ ಬಾಗಿಲಿನಲ್ಲಿಸಂಜೆ ದೀಪ ಹಚ್ಚಿ ಭಕ್ತಿ ಭಾವದಿಂದ ಆಚರಿಸಲಾಯಿತು. ದೀಪಾವಳಿದಿನದಂತೆ ಲಕ್ಷ್ಮೀ  ಹುಟ್ಟಿದ್ದಾಳೆಂಬಪ್ರತೀತಿ ಇದ್ದು, ಇಂದು ಲಕ್ಷ್ಮೀ ದೇವಿಯನ್ನು ಪೂಜೆ ಮಾಡಿದರೆ, ಲಕ್ಷ್ಮೀ ಕಟಾಕ್ಷ ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಈ ಬಾರಿ ಕೊರೊನಾ ಇರುವುದರಿಂದ ಪಟಾಕಿ ನಿಷೇಧ ಮಾಡಿದ್ದರೂ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೊಳಿಸಿದೆ. ಪಟಾಕಿ ಮಾರಾಟಗಾರರಂತೂ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಹಸಿರು ಪಟಾಕಿ ಯಾವ ಕಂಪನಿಗಳು ತಯಾರಿಸಿದೆ. ಯಾವ ರೀತಿ ಹಸಿರುವ ಪಟಾಕಿ ಇದೆ ಎಂಬುವುದೇ ಜನರಿಗೆ ತಿಳಿದಿಲ್ಲ ಎಂಬುವುದುಪಟಾಕಿಮಾರಾಟಗಾರರಅಭಿಪ್ರಾಯ. ವಿಜಯಪುರಮತ್ತುಬೆಂಗಳೂರು ನಗರದಲ್ಲಿಪಟಾಕಿ ಮಾರಾಟ ಮಾಡಲು ಮಂಜೂರಾತಿ ನೀಡುತ್ತಾರೆ. ಆದರೆ, ದೇವನಹಳ್ಳಿಯಲ್ಲಿ ಯಾವುದೇ ಪರವಾನಗಿ ನೀಡಿಲ್ಲ ಎಂದು ಪಟಾಕಿ ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next