Advertisement
ಸಮೀಕ್ಷೆಯನ್ನು 2021ರ ನವೆಂಬರ್‌ನಲ್ಲಿ ನಡೆಸಲಾಗಿತ್ತು. ಇದರ ಪ್ರಕಾರ ಕೊರೊನಾ ಲಾಕ್‌ಡೌನ್ ಅಥವಾ ಮಕ್ಕಳ ಆನ್‌ಲೈನ್ ಕ್ಲಾಸ್ ಅವಧಿಯಲ್ಲಿ ಶೇ. 24ರಷ್ಟು ಮಕ್ಕಳಿಗೆ ಡಿಜಿಟಲ್ ಸಾಧನಗಳು ಸಿಕ್ಕಿರಲಿಲ್ಲ. ಶೇ. 38ರಷ್ಟು ಮಕ್ಕಳು ಮನೆಯಲ್ಲಿ ಕುಳಿತು ಪಾಠ ಕಲಿಯುವುದಕ್ಕೆ ಕಷ್ಟವಾಯಿತು ಎಂದಿದ್ದರೆ, ಶೇ. 80ರಷ್ಟು ಮಕ್ಕಳು ಶಾಲೆಯಲ್ಲೇ ಚೆನ್ನಾಗಿ ಪಾಠ ಕಲಿಯುತ್ತಿದ್ದೆವು ಎಂದಿದ್ದಾರೆ.
Related Articles
Advertisement
ದೇಶದಲ್ಲಿ ಈ ಮಕ್ಕಳು ಭಾಷಾ ವಿಷಯದಲ್ಲಿ ಈ ಬಾರಿ 62 ಅಂಕ ಪಡೆದಿದ್ದಾರೆ. 2017ರಲ್ಲಿ 68 ಅಂಕ ಪಡೆದಿದ್ದರು. ಗಣಿತದಲ್ಲಿ ಆಗ 64 ಪಡೆದಿದ್ದರೆ, ಈಗ 57 ಅಂಕ ಗಳಿಸಿದ್ದಾರೆ.
ಐದನೇ ತರಗತಿ :
ಗಣಿತದಲ್ಲಿ ರಾಷ್ಟ್ರೀಯ ಸರಾಸರಿ 44 ಅಂಕ. 2017ರಲ್ಲಿ 53 ಅಂಕ ಗಳಿಸಿದ್ದರು. ಭಾಷಾ ಲೆಕ್ಕಾಚಾರದಲ್ಲಿ 55 ಅಂಕ ಗಳಿಸಿದ್ದಾರೆ. ಆಗ 58 ಅಂಕವಿತ್ತು.
ಏಳನೇ ತರಗತಿ :
ಗಣಿತದಲ್ಲಿ 36 ಅಂಕ ಪಡೆದಿದ್ದಾರೆ. 2017ರಲ್ಲಿ ಇದು 42 ಇತ್ತು. ಭಾಷೆಯಲ್ಲಿ ಈಗ 53 ಅಂಕ ಗಳಿಸಿದ್ದು, ಆಗ 57 ಇತ್ತು.
ಹತ್ತನೇ ತರಗತಿ :
ಇವರಿಗೆ ಮೊದಲ ಬಾರಿಗೆ ಸರ್ವೇ ನಡೆದಿದೆ. ಗಣಿತದಲ್ಲಿ 32, ವಿಜ್ಞಾನದಲ್ಲಿ 35, ಸಮಾಜ ವಿಜ್ಞಾನದಲ್ಲಿ 37, ಇಂಗ್ಲಿಷ್‌ನಲ್ಲಿ 43 ಮತ್ತು ಆಧುನಿಕ ಭಾರತೀಯ ಭಾಷೆಯಲ್ಲಿ 41 ಅಂಕ ಗಳಿಸಿದ್ದಾರೆ.