Advertisement

ಐಐಟಿಯನ್ನರ ಕೋಟಿ ಪ್ಯಾಕೇಜ್‌ ಕನಸಿಗೆ ಕೋವಿಡ್ “ಕನ್ನ’

12:34 AM Nov 28, 2020 | sudhir |

ಮುಂಬಯಿ: ಕೊರೊನಾ ಆರ್ಥಿಕ ಬಿಕ್ಕಟ್ಟು, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲಜಿ ಪ್ರತಿಭೆಗಳ ಕ್ಯಾಂಪಸ್‌ ಸೆಲೆಕ್ಷನ್‌ ಕನಸುಗಳನ್ನು ಭಗ್ನಗೊಳಿಸಿದೆ. ಇಷ್ಟು ವರ್ಷ ಕ್ಯಾಂಪಸ್‌ ಸೆಲೆಕ್ಷನ್‌ ಮೂಲಕ ಅಭ್ಯರ್ಥಿಗಳು ಅಮೆರಿದ ದೈತ್ಯ ಕಂಪೆನಿಗಳಿಂದ ಕೋಟಿ ಪ್ಲಸ್‌ ಪ್ಯಾಕೇಜ್‌ ಪಡೆಯುತ್ತಿದ್ದರು. ಈ ಬಾರಿ ಯುಎಸ್‌ ಕಂಪೆನಿಗಳು ಐಐಟಿಯತ್ತ ಮುಖಮಾಡದೇ ನಿರಾಶೆ ಮೂಡಿಸಿವೆ.

Advertisement

ಕಳೆದವರ್ಷ ಐಐಟಿ ಪ್ರತಿಭಾನ್ವಿತರಿಗೆ ಕೋಟಿ ರೂ. ಪ್ಯಾಕೇಜ್‌ ನೀಡಿ ನೇಮಿಸಿಕೊಂಡಿದ್ದ ಅಮೆರಿಕದ ಮೈಕ್ರೋ ಸಾಫ್ಟ್, ಊಬರ್‌ ಮತ್ತು ಸೇಲ್ಸ್‌ಫೋರ್ಸ್‌ಗಳು ಕೊರೊನಾ ಆರ್ಥಿಕ ಹಿಂಜರಿತದ ನೆಪವೊಡ್ಡಿ, ಇನ್ನೂ ಐಐಟಿ ಕ್ಯಾಂಪಸ್‌ಗೆ ಆಗಮಿಸಿಲ್ಲ.

ದೇಶೀ ಸಂಸ್ಥೆಗಳಿಗಷ್ಟೇ ಬೇಡಿಕೆ: ಭಾರತದ ಹಳೇ ಐಐಟಿಗಳಾದ ಖರ ಗುºರ, ಕಾನ್ಪುರ, ರೂಕೀ, ಮದ್ರಾಸ್‌, ಬಾಂಬೆ, ಬಿಎಚ್‌ಯು- ಕ್ಯಾಂಪಸ್‌ಗಳಿಗೆ ಅಮೆರಿಕ ಕಂಪೆನಿಗಳು ಈ ಬಾರಿ ಕಾಲಿಟ್ಟಿಲ್ಲ. ದೇಶೀ ಸಂಸ್ಥೆಗಳಿಂದಷ್ಟೇ ಐಐಟಿ ಪ್ರತಿಭೆಗಳಿಗೆ ಬೇಡಿಕೆ ಹುಟ್ಟಿದೆ. “ಹಲವು ಐಐಟಿ ಪ್ರತಿಭೆಗಳು ದೇಶೀ ಸಂಸ್ಥೆಗಳ ಮೂಲಕ ಕೆಲವುಕಾಲ ತರಬೇತಿ ಪಡೆದು, ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಅಮೇರಿಕದ ದೈತ್ಯ ಸಂಸ್ಥೆಗಳ ಆಫ‌ರ್‌ ಪಡೆಯುವ ಆಲೋಚನೆಯಲ್ಲಿದ್ದಾರೆ’ ಎಂದು ತಿಳಿದುಬಂದಿದೆ.

ಕ್ಯಾಲಿಫೋರ್ನಿಯಾ ಮೂಲದ ಐಟಿ ಸಂಸ್ಥೆ ಕೊಹೆಸಿಟಿ ಮಾತ್ರವೇ ಅಮೆರಿಕದಲ್ಲಿ ಉದ್ಯೋಗ ನೀಡಲು ಮುಂದಾ ಗಿದ್ದು, ಭಾರತದ ಅತ್ಯುನ್ನತ ಐಐಟಿಗಳಲ್ಲಿ ಮುಂದಿನ ಮಂಗಳವಾರದಿಂದ ಅಂತಿಮ ಹಂತದ ಕ್ಯಾಂಪಸ್‌ ಸೆಲೆಕ್ಷನ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next