Advertisement
ಹೀಗಾಗಿ ಹಳ್ಳಿಗಳಲ್ಲಿ ಜಾಗೃತಿ, ರೋಗ ತಡೆಮತ್ತು ಸೋಂಕು ಕಾಣಿಸಿಕೊಂಡರೆಪ್ರಾಥಮಿಕ ಹಂತದಲ್ಲೇ ಅದನ್ನುನಿವಾರಿಸಬಹುದಾದ ಕ್ರಮಗಳಿಗೆಹೆಚ್ಚು ಆದ್ಯತೆ ದೊರೆಯುತ್ತಿಲ್ಲ.ಈಗಾಗಲೇ ಹಲವು ಹಳ್ಳಿಗಳಲ್ಲಿಸೋಂಕು ವ್ಯಾಪಿಸಿದೆ. ಈ ಪೈಕಿ ಕೆಲಗ್ರಾಮಗಳಲ್ಲಿ ಸರಣಿ ಸಾವುಗಳು, ಸೋಂಕುಬಂದಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಹಾಗೂಶರವೇಗದಲ್ಲಿ ಗ್ರಾಮದ ಅನೇಕರಿಗೆ ಸೋಂಕುಹರಡಿದ ಪ್ರಕರಣಗಳೂ ವರದಿಯಾಗಿವೆ.
Related Articles
Advertisement
ಇನ್ನು ಉಪಚುನಾವಣೆ, ಇತರೆಕಡೆಯಿಂದ ಮರುವಲಸೆ ಬಂದವರು,ಗ್ರಾಮದವರು ನಗರ ಸಂಪರ್ಕಕ್ಕೆ ಬಂದುಇಲ್ಲವೆ ಇನ್ನಾವುದೋ ರೂಪದಲ್ಲಿ ಸೋಂಕುಹೊತ್ತು ತಂದವರಿಂದ ಹಳ್ಳಿಗಳಲ್ಲಿ ಸೋಂಕುಹೆಚ್ಚಳವಾಗಿ ಆಂತಕ ತಂದಿಟ್ಟಿದೆ. ಕೆಲವುಹಳ್ಳಿಗಳಲ್ಲಿ ಒಬ್ಬರು-ಇಬ್ಬರಲ್ಲಿ ಕಾಣಿಸಿಕೊಂಡಿದ್ದ ಸೋಂಕು, ಬೆರಳೆಣಿಕೆಯದಿನಗಳಲ್ಲಿಯೇ 20-30 ಜನರಿಗೆ ವ್ಯಾಪಿಸಿದೆ.ಇನ್ನು ಕೆಲವೆಡೆ ಇಡೀ ಗ್ರಾಮವೇ ಜ್ವರದಿಂದಬಳಲುವ, ಜ್ವರದಿಂದ ಮೃತಪಟ್ಟ ಘಟನೆಗಳುಕೇಳಿ ಬರುತ್ತಿವೆ.
ರೋಗ ಲಕ್ಷಣ ಕಂಡು ಬಂದವರನ್ನುಪ್ರತ್ಯೇಕಿಸಿ ಒಂದೇ ಕಡೆ ಇರಿಸಲು ಗ್ರಾಮಪಂಚಾಯತ್ ಸಮುದಾಯ ಭವನ, ಶಾಲೆ,ಗೋದಾಮುಗಳಲ್ಲಿ ಇರುವ ಸೌಲಭ್ಯಗಳಲ್ಲೇಕ್ವಾರಂಟೈನ್ ಆರಂಭಿಸಬೇಕು. ಭೋಜನಇನ್ನಿತರೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು,ಗ್ರಾಮದಲ್ಲಿರುವ ನರ್ಸ್‌ಗಳ ನೆರವುಪಡೆಯಬೇಕು.
ಅಗತ್ಯ ಬಿದ್ದರೆ ಆರೋಗ್ಯಇಲಾಖೆಗೆ ಮನವಿ ಮಾಡಿ ಹೆಚ್ಚಿನ ವೈದ್ಯರವ್ಯವಸ್ಥೆಗೆ ಮುಂದಾಗಬೇಕು. ಸೋಂಕುತೀವ್ರವಿರುವ, ಉಸಿರಾಟ ತೊಂದರೆ ಇದ್ದವರನ್ನಷ್ಟೇ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ,ಉಳಿದವರಿಗೆ ಗ್ರಾಮದ ಕ್ವಾರಂಟೈನ್‌ಕೇಂದ್ರದಲ್ಲೇ ಚಿಕಿತ್ಸೆ, ಆರೈಕೆ ಕಾರ್ಯಕೈಗೊಳ್ಳಬೇಕಿದೆ. ಇದು ಭವಿಷ್ಯದ ಭಯಾನಕಅಪಾಯ ತಪ್ಪಿಸಲು ಇದು ಉತ್ತಮಕ್ರಮವಾಗಿದೆ.
ಅಮರೇಗೌಡ ಗೋನವಾರ