ಬೆಂಗಳೂರು: ಕೊರೊನಾ ಸೋಂಕಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಬೆಡ್‌ನಲ್ಲೇ ಮಲಗಿದ್ದ ರೋಗಿಗಳು. ಮತ್ತೂಂಡೆದೆ, ಪಿಪಿಇ ಕಿಟ್ ಧರಿಸಿಸೋಂಕಿತರ ಬಳಿ ಬಂದ ನರ್ಸ್‌ಗಳು. ಸೋಂಕಿತರನ್ನು ನಿಮ್ಮ ಕೈ ಮೇಲೆ ಎತ್ತಿ, ಎರಡು ಕೈಗಳನ್ನು ಮೇಲೆ ಮಾಡಿ ಕೈ ಹೀಗೆ ಮಾಡಿ, ಹಾಗೆ ಮಾಡಿ ಎನ್ನುತ್ತಲೇ ತಾವೂ ನೃತ್ಯ ಮಾಡುತ್ತಿದ್ದ ಕೊರೊನಾ ವಾರಿಯರ್ಸ್ ಗಳು.
ನಗು..ನಗು.. ಎಂಬ ಹಾಡಿಗೆ ತಕ್ಕಂತೆ ನೃತ್ಯಮಾಡುತ್ತಲೇ, ಸೋಂಕಿನ ಭೀತಿಯಲ್ಲಿದ್ದ ರೋಗಿಗಳ ಮುಖದಲ್ಲಿ ನಗು ತರಿಸುತ್ತಿದ್ದರು. ಹೀಗೆ, ನಗರದ ಮಹಾಲಕ್ಷ್ಮೀ ಲೇಔಟ್‌ನ ಖಾಸಗಿ(ಶ್ರೇಯಸ್ ಆಸ್ಪತ್ರೆ) ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್‌ಗಳಾದ ವೈದ್ಯರು ಮತ್ತು ಶುಶ್ರೂಷಕರು(ನರ್ಸ್) ಪಿಪಿಇ ಕಿಟ್ ಧರಿಸಿ ನೃತ್ಯ ಮಾಡಿದ್ದಾರೆ.
ಆಮೂಲಕ ಕೊರೊನಾ ಸೋಂಕಿತರಿಗೆ ಮನರಂಜನೆ ಜೊತೆ, ಆತ್ಮಸ್ಥೆçರ್ಯ ತುಂಬುವ ಕೆಲಸ ಮಾಡಿದ್ದಾರೆ.ನಗರದಲ್ಲಿ ಯಾವ ರೀತಿ ಕೋವಿಡ್ ಸೋಂಕಿತರಸಂಖ್ಯೆ ಹೆಚ್ಚಾಗುತ್ತಿದೆಯೋ, ಅದೇ ರೀತಿಸೋಂಕಿತರು ಮಾನಸಿಕ ಖೀನ °ತೆಗೂಒಳಗಾಗುತ್ತಿದ್ದಾರೆ.
ಕೇವಲ ನಾಲ್ಕು ಗೋಡೆ ಮಧ್ಯೆವಾರಗಟ್ಟಲೇ ಉಳಿಯುವ ಸೋಂಕಿತರಲ್ಲಿಆತ್ಮಸೆ §çರ್ಯ ತುಂಬುವ ಕೆಲಸವನ್ನು ಕೊರೊನಾ ವಾರಿಯರ್ಸ್ ಮಾಡಿರುವುದು ಸಾರ್ವಜನಿಕರಮೆಚ್ಚುಗೆಗೆ ಪಾತ್ರವಾಗಿದೆ.ಸಂಗೀತ ಎನ್ನುವುದು ಮಾನಸಿಕ ಖನ್ನತೆಯನ್ನುದೂರ ಮಾಡುವ ಒಂದು ಔಷಧಿ. ಹೀಗಾಗಿ,ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವಕೆಲಸ ಮಾಡುತ್ತಿದ್ದಾರೆ. ವೈದ್ಯರು, ನರ್ಸ್‌ಗಳುನಗು.. ನಗು.. ಎಂಬ ಸಿನಿಮಾ ಹಾಡಿಗೆ ನೃತ್ಯಮಾಡುವ ಮೂಲಕ ಚಿಕಿತ್ಸೆ ನೀಡುವ ಜೊತೆಜೊತೆಗೆ ಸೋಂಕಿತರಲ್ಲಿ ಹುದುಗಿರುವಖೀನ್ನತೆಯನ್ನು ದೂರ ಮಾಡಿದ್ದಾರೆ.
ಕೊರೊನಾ ಸೋಂಕಿತರಲ್ಲಿ ಕೆಲವರು ಹಾಸಿಗೆಯಲ್ಲೇ ಕುಳಿತು ಹಾಡಿಗೆ ತಕ್ಕಂತೆ ನೃತ್ಯ ಮಾಡಿದರೆ, ಇನ್ನೂ ಕೆಲವು ಸೋಂಕಿತರು ಬೆಡ್‌ನಿಂದ ಕೆಳಗಿಳಿದು ನೃತ್ಯ ಮಾಡಿ ಸಂತೋಷ ಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಲ್ಲಿ ಖನ್ನತೆಹೋಗಲಾಡಿಲು ಈ ಪ್ರಯತ್ನ ಮಾಡಲಾಗಿದೆ. ಇದುಕೇವಲ ಒಂದು ದಿನಕ್ಕೆ ಸೀಮಿತವಾಗದೆ, ನಿತ್ಯ ಕೆಲಸಮಯ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುತ್ತಾ ಸೋಂಕಿತರನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾತಮ್ಮ ಸೇವೆಯಲ್ಲಿ ತೊಡಗಿದ್ದಾರೆ.