ಬೆಂಗಳೂರು: ತಂದೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಐದು ಲಕ್ಷ ರೂ. ಹಣ ಕಟ್ಟಿದ್ದೀನಿ ಸರ್.. ಪತ್ನಿಯಮಾಂಗಲ್ಯ ಅಡ ಇಟ್ಟು ಆಸ್ಪತ್ರೆ ಬಿಲ್ ಕಟ್ಟಿದ್ದೀನಿ.ಆದರೂ, ನಮ್ಮಪ್ಪ ಉಳಿಯಲೇ ಇಲ್ಲ. ಆಸ್ಪತ್ರೆಗೆಸೇರಿಸಿದರೆ ಬಾಡಿನೇ ಸಿಗೋದು ಸರ್..ಚಿಕ್ಕಂದಿನಿಂದ ತನ್ನನ್ನು ಸಾಕಿ ಸಲುಹಿದತಂದೆ ಕೊರೊನಾ ಸೋಂಕಿನಿಂದಮೃತಪಟ್ಟಿದ್ದು, ಪತ್ನಿಯ ಮಾಂಗಲ್ಯ ಅಡವಿಟ್ಟುಚಿಕಿತ್ಸೆ ವೆಚ್ಚ ಭರಿಸಿದರೂ ತಂದೆಯ ಪ್ರಾಣಉಳಿಸಲು ಆಗಲಿಲ್ಲ ಎಂದು ತನ್ನತಂದೆಯನ್ನು ನೆನೆದು ಯಲಹಂಕಚಿತಾಗಾರದ ಮುಂದೆ ಶನಿವಾರ ಕಣ್ಣೀರಿಟ್ಟ ದೃಶ್ಯ.
ನಮ್ಮ ಅಪ್ಪನನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸಿದ್ದೆ. ರ್ಯಾಪಿಡ್‌ಟೆಸ್ಟ್‌ನಲ್ಲಿ ಪಾಸಿಟಿವ್ ಅಂತ ಬಂತು.ಸರ್ಕಾರದ ಟೆಸ್ಟ್‌ಗೆ ಕಳಿಸಿದ ಮೇಲೆ ನಾಲ್ಕುದಿನ ಆದ ಬಳಿಕ ವರದಿ ಬಂತು. ಆಸ್ಪತ್ರೆಗೆಹೋಗುವಾಗ ತಂದೆಯೇ ನಡೆದುಕೊಂಡುಹೋದರು. ತಂದೆಗೆ ಯಾವುದೇ ರೀತಿಯ ಬಿಪಿ,ಶುಗರ್ ಇತ್ಯಾದಿ ಕಾಯಿಲೆಗಳು ಇರಲಿಲ್ಲ. ನಿನ್ನೆಬೆಳಗ್ಗೆಯೂ ಆಸ್ಪತ್ರೆಯಲ್ಲಿ ಚೆನ್ನಾಗಿದ್ರು. ಆದರೆ, ಎರಡು ಗಂಟೆನಂತರ ವೈದ್ಯರು ಕರೆ ಮಾಡಿ ನಿಮ್ಮತಂದೆ ಈಸ್ ನೋ ಮೋರ್ ಎಂದುಹೇಳಿಬಿಟ್ಟರು ಸರ್.. ಎಂದು ಗೋಳಾಡಿದರು.
ಆಸ್ಪತ್ರೆ ಬಿಲ್ 4.80 ಲಕ್ಷ ರೂ.:ಆಸ್ಪತ್ರೆಗೆ ಹೋದರೆ ಬರೀ, ದುಡ್ಡು ದುಡ್ಡುಅಂತಾರೆ. ಕರೆ ಮಾಡಿ ಒಂದು ದಿನ ಐಸಿಯುಗೆ40, 50 ಸಾವಿರ ರೂ. ಕಟ್ಟಿ ಅಂತಾರೆ.ಐಸಿಯು, ಮೆಡಿಕಲ್, ಲ್ಯಾಬ್ ಎಲ್ಲಾಸೇರಿ 4.80 ಲಕ್ಷ ಹಣ ಕಟ್ಟಿದ್ದೇನೆ. ಆಸ್ಪತ್ರೆಗಳಿಗೆ ಸಂಬಂಧಿಸಿದಅಧಿಕಾರಿಗಳು ಒಂದೊಂದು ಆಸ್ಪತ್ರೆಒಳಗೂ ಹೋಗಬೇಕು. ಒಬ್ಬೊಬ್ಬರೋಗಿಯ ಹತ್ತಿರನೂ ಕೇಳಬೇಕು.ಆಗಲೇ, ಆಸ್ಪತ್ರೆಯವರು ಏನು ಮಾಡ್ತಾರೆ.ಯಾವ ರೀತಿ ಚಿಕಿತ್ಸೆ ಮಾಡ್ತಾರೆ ಎಂದು ಗೊತ್ತಾಗುತ್ತದೆ. ಇಲ್ಲ ಅಂದರೆ, ಎಲ್ಲರೂತಮ್ಮವರನ್ನು ಮರೆಯಬೇಕಾಗುತ್ತದೆ ಸರ್..ಎಂದರು ತಮ್ಮ ಅಳಲು ತೋಡಿಕೊಂಡರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆತಂದೆಯೇ ಕರೆ ಮಾಡಿದ್ದರು. ಮಗನೇಊಟ ಮಾಡಬೇಕು, ಏನಾದರೂತಿನ್ನಬೇಕು ಎಂದು ಮೆಸೇಜ್‌ಮಾಡಿದ್ದರು. ತಂದೆ ಚೆನ್ನಾಗಿಯೇಇದ್ದರು. ಊಟ ಸರಿಯಾಗಿ ಕೊಡ್ತಾಇಲ್ಲ. ವೈದ್ಯರ ಬಳಿ ಮಾತನಾಡುಎಂದು ಅವರೇ ಮೆಸೇಜ್ ಮಾಡಿದ್ದರು.
ಎರಡುಗಂಟೆ ಬಳಿಕ ವೈದ್ಯರಿಗೆ ಕರೆ ಮಾಡಿದಾಗ ನಿಮ್ಮತಂದೆ ಹೃದಯಾಘಾತದಿಂದ ಸಾವನ್ನಪ್ಪಿದರುಎಂದರು ಸರ್ ಎಂದು ಕಣ್ಣೀರಾದರು.ನಿನ್ನೆ ರಾತ್ರಿ 11 ಗಂಟೆಗೆ ತಂದೆ ಮೃತದೇಹತೆಗೆದುಕೊಂಡು ಚಿತಾಗಾರದ ಬಳಿ ಬಂದೆವು.ಆದರೆ, ಬೆಳಗ್ಗೆಯಾದರೂ ಅಂತ್ಯ ಸಂಸ್ಕಾರಮಾಡಲು ಸಾಧ್ಯವಾಗಿಲ್ಲ. ರಾತ್ರಿ ಇಡೀ ಸಿಬ್ಬಂದಿಅಂತ್ಯಸಂಸ್ಕಾರ ಮಾಡಿದ್ದಾರೆ.
ಶನಿವಾರ ಬೆಳಗ್ಗೆಯಿಂದಲೂ ಚಿತಾಗಾರದ ಮುಂದೆ ಆ್ಯಂಬುಲೆನ್ಸ್‌ಸಾಲು ನಿಂತಿವೆ. ಇನ್ನೂ ನಾಲ್ಕು ಮೃತದೇಹದಹನ ಬಳಿಕ, ನಿಮ್ಮಪ್ಪನ ಅಂತ್ಯಸಂಸ್ಕಾರಮಾಡುತ್ತೇವೆ ಎಂದು ಸಿಬ್ಬಂದಿ ತಿಳಿಸಿದ್ದಾರೆಎಂದು ಚಿತಾಗಾರದ ವಾಸ್ತವ ಸ್ಥಿತಿ ಬಿಚ್ಚಿಟ್ಟರು.