ಮಂಡ್ಯ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಕೊರೊನಾ ಸೋಂಕುಹರಡಿದ ಪರಿಣಾಮ ಹಾಗೂ ಪೂರ್ವ ಮುಂಗಾರು ವಿಳಂಬವಾದಪರಿಣಾಮಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.ಕಳೆದ ಬಾರಿ ಸಾಕಷ್ಟು ಬೆಳೆಗಳನ್ನು ರೈತರು ಬೆಳೆದಿದ್ದರು. ಆದರೆಕೊರೊನಾ ಲಾಕ್‌ಡೌನ್‌ನಿಂದ ರೈತರು ನಷ್ಟ ಅನುಭವಿಸಿದ್ದರು.
ಈ ಬಾರಿ ಅದರ ಪರಿಣಾಮ ಹೆಚ್ಚಾಗಿದೆ. ಜಿಲ್ಲೆಯ ಬಹುತೇಕಗ್ರಾಮಗಳು ಸೀಲ್‌ಡೌನ್ ಆಗುತ್ತಿರುವುದರಿಂದ ಕೃಷಿಚಟುವಟಿಕೆಗಳಿಗೆ ಹಿನ್ನಡೆಯಾಗಲುಕಾರಣವಾಗಿದೆ.ಗ್ರಾಮಗಳು ಕಂಟೋನ್‌ಮೆಂಟ್ ಝೊàನ್: ಮೊದಲಅಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಂಡುಬಂದಿರಲಿಲ್ಲ.
ಆದರೆ ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿಹರಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಹೊರಗೆ ಬರದಂತೆಮಾಡಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಕನಿಷ್ಠ 20 ರಿಂದ 30ಗ್ರಾಮಗಳು ಸೀಲ್‌ಡೌನ್ ಆಗಿದೆ. ಮನೆಯಿಂದ ಯಾರೂಹೊರಬರದಂತೆ ಸೂಚಿಸಲಾಗಿದೆ.
ಪೂರ್ವ ಮುಂಗಾರು ವಿಳಂಬ: ಈ ಬಾರಿಯ ಪೂರ್ವ ಮುಂಗಾರುವಿಳಂಬವಾಗಿದೆ. ಏಪ್ರಿಲ್‌ನಲ್ಲಿ ಶುರುವಾಗುವ ಪೂರ್ವ ಮುಂಗಾರುಮೇನಲ್ಲೂ ಮುಂದುವರಿಯುತ್ತದೆ.ಈಸಂದರ್ಭ ದಲ್ಲಿ ಹುರುಳಿ, ಎಳ್ಳು,ಉದ್ದು, ಹೆಸರು, ಅಲಸಂದೆ, ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳ ಬಿñನೆ ¤ನಡೆಯುತ್ತಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರುವಿಳಂಬವಾಗಿರುವುದರಿಂದ ಬಿತ್ತನೆ ಪ್ರಮಾಣಕಡಿಮೆಯಾಗಿದೆ.
ಶೇ.4.3ರಷ್ಟು ಬಿತ್ತನೆ: ಪೂರ್ವ ಮುಂಗಾರು ಮಳೆಯಾಗದೆ ಬಿತ್ತನೆಗೆಹಿನ್ನಡೆಯಾಗಿದೆ. ಇದುವರೆಗೂ ಕೇವಲ ಶೇ.4.3ರಷ್ಟು ಮಾತ್ರಬಿತ್ತನೆಯಾಗಿದೆ. ಒಟ್ಟು 8,355 ಹೆಕ್ಟೇರ್ ಪ್ರದೇಶದಲ್ಲಿ ಬಿತನೆ ¤ ಯಾಗಿದೆ.ಕಳೆದ ನಾಲ್ಕೈದು ದಿನಗಳಿಂದ ಪೂರ್ವ ಮುಂಗಾರು ಮಳೆಯಾಗುತ್ತಿದು,ªಕೊಂಚ ಬಿತ್ತನೆಕಾರ್ಯ ಚುರುಕುಗೊಳ್ಳುತ್ತಿದೆ.ತಾಲೂಕುವಾರು ಬೆಳೆ ಬಿತ್ತನೆ ವಿವರ: ಜಿಲ್ಲೆಯಲ್ಲಿ ಬಿತ್ತನೆಯಾಗಿರುವಪ್ರದೇಶಗಳ ಪೈಕಿ ತಾಲೂಕುವಾರು ವಿÊರತೆ ಕೆ.ಆರ್.ಪೇಟೆ ಮೊದಲಸ್ಥಾನದಲ್ಲಿದ್ದರೆ, ಮಳೆಯಾಶ್ರಿತ ತಾಲೂಕು ನಾಗಮಂಗಲ 2ನೇ ಸ್ಥಾನದಲ್ಲಿದೆ.ಕೆ.ಆರ್.ಪೇಟೆಯಲ್ಲಿ 6100 ಹೆಕ್ಟೇರ್ ಪ್ರದೇಶ, ನಾಗಮಂಗಲ 1540ಹೆಕ್ಟೇರ್, ಉಳಿದಂತೆ ಮಂಡ್ಯ ತಾಲೂಕಿನಲ್ಲಿ 162 ಹೆಕ್ಟೇರ್, ಮದ್ದೂರು 91ಹೆಕ್ಟೇರ್, ಮಳವಳ್ಳಿ 210 ಹೆಕ್ಟೇರ್, ಶ್ರೀರಂಗಪಟ್ಟಣ 192 ಹೆಕ್ಟೇರ್,ಪಾಂಡವಪುರ60 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆಯಾಗಿದೆ
ಎಚ್.ಶಿವರಾಜು