ರಾಮನಗರ: ಕೋವಿಡ್ ಸೋಂಕು ನಿಯಂತ್ರಣಕ್ಕೆ ಕೇಂದ್ರದಸಹಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದು ಅಪಪ್ರಚಾರಗಳಿಗೆಕಿವಿಗೊಡಬಾರದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿದೇವರಾಜ್ ಮನವಿ ಮಾಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿರುವ ಆಕ್ಸಿಜನ್, ಔಷಧ ಮತ್ತುಬೆಡ್‌ಗಳನ್ನು ಯುಧ್ದೋಪಾದಿಯಲ್ಲಿ ಪೂರೈಸಲಾಗುತ್ತಿದೆ.ಕೋವಿಡ್ ಸೋಂಕು ಮೊದಲನೇ ಅಲೆಯಲ್ಲಿ ಕಾಣಿಸದಿದ್ದಆಕ್ಸಿಜನ್ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ಆದರೂ, ಕೇಂದ್ರಸರ್ಕಾರ ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುತ್ತಿದೆ. ಜಿಲ್ಲೆಯಲ್ಲಿಯೂ ಆಕ್ಸಿಜನ್ ಕೊರತೆಗೆ ಅವಕಾಶವಾಗದಂತೆ ಎಲ್ಲಾಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾಲಿಇಲ್ಲಿರುವ ವ್ಯವಸ್ಥೆ ಮೂಲಕ ಸೋಂಕಿತರಿಗೆ ಕೊರತೆ ಇಲ್ಲದೆಚಿಕಿತ್ಸೆ ದೊರೆಯುತ್ತಿದೆ. ಕೋವಿಡ್ ರೆಫರಲ್ ಆಸ್ಪತ್ರೆ ಜತೆಗೆಜಿಲ್ಲಾಸ್ಪತ್ರೆ ನೂತನ ಕಟ್ಟಡದಲ್ಲಿ 131ಆಕ್ಸಿಜನ್ ಸಹಿತ ಬೆಡ್‌ಸ್ಥಾಪಿಸಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ತಲಾ 10ಕೋವಿಡ್ ಬೆಡ್‌ಗಳಿವೆ.ಕೋವಿಡ್‌ಕೇರ್ ಸೆಂಟರ್ ಸ್ಥಾಪಿಸಲಾಗಿದೆ ಖಾಸಗಿ ಆಸ್ಪತ್ರೆಗಳಾದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ, ರಾಮಕೃಷ್ಣ ಆಸ್ಪತ್ರೆ ಮತ್ತು ದಯಾನಂದಸಾಗರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜಿಲ್ಲೆಯ ಸೋಂಕಿತರಿಗೆ ಚಿಕಿತ್ಸೆ ದೊರೆಯುತ್ತಿದೆ ಎಂದರು.
ಅಪಪ್ರಚಾರ: ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರುದ್ರದೇವರುಮಾತನಾಡಿ,ಕೇಂದ್ರ ಸರ್ಕಾರದ ಪ್ರೋತ್ಸಾಹದಲ್ಲಿಕೋವಿಶೀಲ್ಡ್‌ಮತ್ತು ಕೊವ್ಯಾಕ್ಸಿನ್ ಉತ್ಪಾದಿಸಲಾಗುತ್ತಿದೆ. ಆರಂಭದಲ್ಲಿಕಾಂಗ್ರೆಸ್ಸಿಗರು ಈ ಲಸಿಕೆಗಳಿಂದ ಏನೂ ಉಪಯೋಗವಿಲ್ಲ ಎಂದು ಜರಿದರು.
ಇದೀಗ 2ನೇ ಅಲೆಯಲ್ಲಿ ಸಾವು ನೋವು ಹೆಚ್ಚಾಗಿದ್ದು, ಕಾಂಗ್ರೆಸ್ಸಿಗರ ಅಪಪ್ರಚಾರದಿಂದಲೇ ಕೋವಿಡ್‌ಸೋಂಕು ಹೆಚ್ಚಾಗಿದೆ ಎಂದು ಆರೋಪಿಸಿದರು.ಮಸಿ ಬಳಿಯುವ ಯತ್ನ: ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಚಂದ್ರಶೇಖರರೆಡ್ಡಿ ಮಾತನಾಡಿ, ಪ್ರತಿ ಪಕ್ಷಗಳುಕೊರೊನಾ ಸಮಯದಲ್ಲಿ ಸರ್ಕಾರದ ಜತೆಗೆ ನಿಲ್ಲಬೇಕು.ಆದರೆ ಕಾಂಗ್ರೆಸ್ ಅಪಪ್ರಚಾರದಲ್ಲೇ ತೊಡಗಿದೆ. ರಾಮನಗರಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗಲಿವೆ ಎಂದರು.