ಮೈಸೂರು: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತಕೈಗೊಂಡಿರುವ ಕೋವಿಡ್ ಮಿತ್ರ ಎಂಬ ಮಾರ್ಗೋಪಾಯವನ್ನು ಕೇಂದ್ರ ಸರ್ಕಾರಕ್ಕೆಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿರೋಹಿಣಿ ಸಿಂಧೂರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಜೊತೆಗಿನ ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣ ಕೈಗೊಂಡಿರುವ ವಿಶೇಷ ಕ್ರಮ,ಮಾರ್ಗೋಪಾಯ ಹಾಗೂ ಹೊಸ ಪ್ರಯತ °ಗಳನ್ನುಕೇಂದ್ರಕ್ಕೆ ಕಳುಹಿಸಿದರೆ, ನಾವು ಅದನ್ನು ಪರಿಶೀಲಿಸಿ ಉತ್ತಮವಾಗಿದ್ದರೆ ಅದನ್ನು ಉಳಿದೆಡೆ ಜಾರಿಮಾಡಲು ಅನುಕೂಲವಾಗುತ್ತದೆ ಎಂದು ಪ್ರಧಾನಮಂತ್ರಿಗಳು ಕೇಳಿದ್ದಾರೆ.
ಹೀಗಾಗಿನಮ್ಮಜಿಲ್ಲೆಯಿಂದಕೋವಿಡ್ ಮಿತ್ರ ಯೋಜನೆಯನ್ನುಕಳುಹಿಸಲಾಗುವುದು ಎಂದು ತಿಳಿಸಿದರು.ಕೋವಿಡ್ ಮಿತ್ರವನ್ನು ಜಿಲ್ಲೆಯ ಎಲ್ಲಾಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರಂಭಿಸಿದ್ದು,ಜಿಲ್ಲೆಯಲ್ಲಿ ಮೇ 1ರಿಂದ ಈವರೆಗೆ 10 ಸಾವಿರಮಂದಿ ಕೋವಿಡ್ ಮಿತ್ರಕ್ಕೆ ಬಂದಿದ್ದಾರೆ. ಇದರಿಂದಸೋಂಕಿತರಿಗೆ ಆರಂಭದಲ್ಲೆ ಅಗತ್ಯ ಚಿಕಿತ್ಸೆ ಕಲ್ಪಿಸಲು ಸಹಕಾರಿಯಾಗಿದೆ.
ಜೊತೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಿಸಿಕೊಂಡು ಗ್ರಾಮೀಣ ಮಟ್ಟದಲ್ಲಿ ಟಾಸ್ಕ್ಫೋರ್ಸ್ ರಚನೆಮಾಡಿಎಲ್ಲಾಮನೆ ಮನೆಗೂಹೋಗಿ ಸೋಂಕಿತರಿಗ ಸಲಹೆ, ಸೂಚನೆ ನೀಡುವಂತೆ ಒಂದು ಹಂತದ ತರಬೇತಿಯನ್ನು ನೀಡಲಾಗಿದೆ. ಈ ಕೆಲಸ ಕಳೆದಹದಿನೈದು ದಿನಗಳಿಂದ ನಡೆಯುತ್ತಿದೆ. ಇದರಿಂದಜನರಲ್ಲಿ ಹೆಚ್ಚು ಅರಿವು ಉಂಟಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಅನಿಸುತ್ತಿದ್ದರೂನಾವು ಎಚ್ಚರ ತಪ್ಪುವಂತಿಲ್ಲ. ಮುಂದಿನ ವಾರದೊಳಗೆ ಸೋಂಕಿನ ಪ್ರಮಾಣ ತಗ್ಗುವ ಸಾಧ್ಯತೆ ಇದೆ ಎಂದು ರೋಹಿಣಿ ಸಿಂಧೂರಿ ವಿಶ್ವಾಸ ವ್ಯಕ್ತಪಡಿಸಿದರು.