Advertisement

ಆಕ್ಸಿಜನ್‌ ಕೊರತೆಯಿಂದ ಸಾವು ಆಗದಂತೆ ಎಚ್ಚರವಹಿಸಿ

09:31 PM May 15, 2021 | Team Udayavani |

ಮೈಸೂರು: ಆಕ್ಸಿಜನ್‌, ವೆಂಟಿಲೇಟರ್‌ ಹಾಗೂಐಸಿಯು ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲುಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿಶುಕ್ರವಾರ ನಡೆದ ಕೋವಿಡ್‌-19 ಜಿಲ್ಲಾ ಟಾಸ್‌Rಪೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಸಾಮಾನ್ಯ ಹಾಸಿಗೆಗಳ ಲಭ್ಯತೆ ಸಾಕಷ್ಟುಇದೆ. ಆದರೆ ಆಮ್ಲಜನಕಯುಕ್ತ ಹಾಸಿಗೆಗಳು,ವೆಂಟಿಲೇಟರ್‌ಗಳು ಹಾಗೂ ಐಸಿಯುಗಳಿಗೆ ಬೇಡಿಕೆಹೆಚ್ಚಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂದರು.ಸರ್ಕಾರಿ ಆಸ್ಪತ್ರೆಗಳು ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ನೋಂದಾಯಿತಆಸ್ಪತ್ರೆಗಳಲ್ಲಿ ಬೇಡಿಕೆ ಇರುವ ಆಕ್ಸಿಜನ್‌ ಪ್ರಮಾಣದಬಗ್ಗೆ ಮಾಹಿತಿ ಸಿಗುತ್ತಿದೆ. ಆದರೆ ಎಸ್‌ಎಎಸ್‌ಟಿನಲ್ಲಿ ನೋಂದಾಯಿಸಿಕೊಳ್ಳದ ಆಸ್ಪತ್ರೆಗಳೂ ಸಹ ಕೋವಿಡ್‌ಚಿಕಿತ್ಸೆ ನೀಡುತ್ತಿದ್ದು, ಇದರ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಆಕ್ಸಿಜನ್‌ ಕೊರತೆಯಿಂದ ಸಾವು ಉಂಟಾಗದಂತೆ ಎಚ್ಚರವಹಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ.ಅಧಿಕಾರಿಗಳು ಆಕ್ಸಿಜನ್‌ ಅಗತ್ಯತೆಯ ಬಗ್ಗೆ ಸರಿಯಾದದಾಖಲಾತಿಗಳನ್ನು ಕೊಡಬೇಕು. ಅಗತ್ಯಕ್ಕೆ ತಕ್ಕಂತೆ ಜಿÇÉೆಗೆ ಆಕ್ಸಿಜನ್‌ ತರಲಾಗುವುದು. ಆದರೆಅಧಿಕಾರಿಗಳು ಸರಿಯಾದ ದಾಖಲೆ ಹಾಗೂ ಮಾಹಿತಿಕೊಡದಿದ್ದರೆ ಸರ್ಕಾರದ ಹಂತದಲ್ಲಿ ಹೆಚ್ಚಿನ ಆಕ್ಸಿಜನ್‌ಕೇಳಲು ಕಷ್ಟವಾಗುತ್ತದೆ ಎಂದರು.ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಐಸಿಯುಹಾಸಿಗೆ ಸಾಮಾರ್ಥ್ಯ ಹೆಚ್ಚಿಸಲು ಅವಕಾಶವಿದೆ. ಅದಕ್ಕೆಬೇಕಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂಉಪಕರಣಗಳ ಬಗ್ಗೆ ಜಿಲ್ಲಾ ಟಾಸ್ಕ್ಪೋರ್ಸ್‌ ಸಲಹೆಗಾರರಾಗಿರುವ ಶಾಸಕ ಎಸ್‌.ಎ.ರಾಮದಾಸ್‌ಹಾಗೂ 4 ಜನ ಅಧಿಕಾರಿ ಹಾಗೂ ವೈದ್ಯರ ತಂಡ 2ದಿನಗಳೊಳಗಾಗಿ ವರದಿ ನೀಡಲು ತಿಳಿಸಿದರು.ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, ಔಷಧಖರೀದಿಸಲು ಈಗಿರುವ ಟೆಂಡರ್‌ ಪ್ರಕ್ರಿಯೆಯಿಂದ ವಿಳಂಬವಾಗುತ್ತಿದೆ.

ಈ ವಿಳಂಬವನ್ನು ತಪ್ಪಿಸಲು ಔಷಧಿಯನ್ನು ಖರೀದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರೆ ಸೂಕ್ತ ಎಂದು ಸಲಹೆನೀಡಿದರು.ಸಭೆಯಲ್ಲಿ ಶಾಸಕ ತನ್ವೀರ್‌ , ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜೆ.ಎಲ್‌.ಆರ್‌.ಅಧ್ಯಕ್ಷ ಅಪ್ಪಣ್ಣ,ದೇವರಾಜ ಅರಸು ನಿಗಮದ ಅಧ್ಯಕ್ಷ ರಘು ಕೌಟಿಲ್ಯ,ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂಸಿಇಒ ಎ.ಎಂ.ಯೋಗೀಶ್‌, ಅಪರ ಜಿಲ್ಲಾಧಿಕಾರಿಡಾ.ಬಿ.ಎಸ್‌.ಮಂಜುನಾಥಸ್ವಾಮಿ, ಮುಡಾ ಆಯುಕ್ತಡಾ.ಡಿ.ಬಿ.ನಟೇಶ್‌, ಉಪವಿಭಾಗಾಧಿಕಾರಿಗಳಾದಡಾ.ಎನ್‌.ಸಿ.ವೆಂಕಟರಾಜು, ವೀಣಾ, ಡಿಎಚ್‌ಒಡಾ.ಟಿ.ಅಮರನಾಥ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next