ಕೋಲಾರ: ಭಾರತದಲ್ಲಿ ಕೋವಿಡ್-19 ಹರಡಿದಪ್ರಾರಂಭದಲ್ಲೇ ಸರಿಯಾದ ರೀತಿಯಲ್ಲಿ ಅರಿಯುವಲ್ಲಿ ಸರ್ಕಾರಗಳು ವಿಫಲವಾಗಿದ್ದರಿಂದಲೇ 2ನೇಅಲೆಯೂ ಅತ್ಯಂತ ತೀವ್ರತೆಯಿಂದ ಕೂಡುವಂತಾಯಿತು ಎಂದು ಸಾಮಾಜಿಕ ಹೋರಾಟಗಾರ ಹಾಗೂವೈದ್ಯ ಡಾ.ಎಚ್.ವಿ. ವಾಸು ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಬೆಂಗಳೂರು ಉತ್ತರವಿವಿ ಕನ್ನಡ ಮತ್ತು ಸಮಾಜ ಕಾರ್ಯ ವಿಭಾಗದವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ”ಕೋವಿಡ್ 2ನೇ ಅಲೆ ಎಚ್ಚರಿಕೆ ಮತ್ತು ಕೋವಿಡ್‌ತಡೆಯಲು ಅನುಸರಿಸಬೇಕಾದ ಕ್ರಮಗಳು’ ಎಂಬಉಪನ್ಯಾಸ ಮತ್ತು ಸಂವಾದದ ವೆಬಿನಾರ್‌ನಲ್ಲಿಮಾತನಾಡಿದರು.2ನೇ ಅಲೆ ತನ್ನ ರೂಪ ಬದಲಿಸಿ ಸಮುದಾಯದೊಳಗೆ ಪ್ರವೇಶಿಸಿದೆ. ಆದರೆ, ಕಾಯಿಲೆ ಯಾರಿಂದಬಂತು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಅದೇ ಮೂಲ ಕಾರಣವೇಇಷ್ಟೊಂದು ಸಮಸ್ಯೆಗೆ ಕಾರಣವಾಗಿದೆ ಎಂದರು.
ಅನೇಕ ಗೊಂದಲ: ದೇಶದಲ್ಲಿ ಮೊದಲನೇ ಅಲೆಬಂದಾಗ 10 ಸಾವಿರ ವೆಂಟಿಲೇಟರ್‌ಗಳಿದ್ದವು 2ನೇಅಲೆ ಬರುವಷ್ಟರಲ್ಲಿ 25 ಸಾವಿರ ವೆಂಟಿಲೇಟರ್‌ಗಳಾದವು. ಕರ್ನಾಟಕದ ಚಿತ್ರಣ ನೋಡಿದರೆ 950ಐಸಿಯು ಬೆಡ್‌ಗಳಿದ್ದು 2ನೇ ಅಲೆ ಬರುವಷ್ಟರಲ್ಲಿಅಷ್ಟೊಂದು ಬದಲಾವಣೆ ಕಾಣಲಿಲ್ಲ. ಮಹಾರಾಷ್ಟ್ರದಲ್ಲಿ ಮೊದಲನೇ ಅಲೆಯಲ್ಲಿಯೇ 1200 ವೆಂಟಿಲೇಟರ್ ಹೆಚ್ಚಿಸಿಕೊಂಡರು. ಎರಡನೇ ಅಲೆಯಲ್ಲಿಪರೀಕ್ಷೆ ಬಗ್ಗೆ ಅನೇಕ ಗೊಂದಲಗಳಿವೆ.
ಟೆಸ್ಟ್‌ನಲ್ಲಿನೆಗೆಟಿವ್ ಬಂದು ಸಿಟಿಸ್ಕ್ಯಾನ್ ನಲ್ಲಿ ಪಾಸಿಟಿವ್‌ಬಂದಿರುವ ಕೇಸು ನೋಡುತ್ತೇವೆ ಎಂದರು.ಶ್ರಮವಹಿಸಿ ಕಾರ್ಯ: ಈ ವೇಳೆ ಸರ್ಕಾರವನ್ನುಸಮಾಜ ದೂಷಿಸದೆ ನಮ್ಮಿಂದ ಏನು ಮಾಡಲುಸಾಧ್ಯ ಎಂಬುದನ್ನು ನಾವೆಲ್ಲರೂ ಅರಿಯಬೇಕು.ಈ ನಿಟ್ಟಿನಲ್ಲಿ ಕರ್ನಾಟಕ ಕೋವಿಡ್ ವಾಲಂಟೀರ್ಸ್‌ಟೀಂ ಕಾರ್ಯಕರ್ತರು ಅಮೆರಿಕ ಮತ್ತು ಬ್ರಿಟನ್ನಿಂದ ಸಹಾಯ ಮಾಡುತ್ತಿದ್ದಾರೆ. ಸರ್ಕಾರದ ಅ ಧಿಕಾ ರಿ ಗಳು ಸಿಬ್ಬಂದಿಗಳು ವರ್ಗ, ಆರೋಗ್ಯಇಲಾಖೆ ಸಿಬ್ಬಂದಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಹೋರಾಡಬೇಕಿದೆ: ವೆಬಿನಾರ್‌ನಲ್ಲಿ ಬೆಂಗಳೂರುಉತ್ತರ ವಿಶ್ವವಿದ್ಯಾಲಯ ಕುಲಪತಿ ಟಿ.ಡಿಕೆಂಪರಾಜು, ಪ್ರಾಸ್ತಾವಿಕವಾಗಿ ಮಾತನಾಡಿ, 2ನೇಅಲೆ ಬಗ್ಗೆ ದೇಶದಲ್ಲಿ ಈಗಾಗಲೇ ಕೋವಿಡ್ ತಡೆಗೆಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ವಿವಿಮಟ್ಟದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಎಲ್ಲರೂವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಕೋವಿಡ್ ಬಗ್ಗೆಭಯ ಬೇಡ. ಭವಿಷ್ಯತ್ತಿನಲ್ಲಿ ಮಹಾಮಾರಿಹಿಮ್ಮೆಟ್ಟಿಸಲು ಒಂದಾಗಿ ಹೋರಾಡಬೇಕಾಗಿದೆಎಂದರುವೆಬಿನಾರ್‌ನಲ್ಲಿ ಕನ್ನಡ ವಿಭಾಗದ ಡಾ.ನೇತ್ರಾವತಿನಿರೂಪಿಸಿ, ಸಮಾಜ ಕಾರ್ಯ ವಿಭಾಗದ ಸಂಯೋಜಕ ಡಾ.ಗುಂಡಪ್ಪ ದೇವಿಕೇರಿ ವಂದಿಸಿದರು.