Advertisement
ಹಣದುಬ್ಬರ, ಧುತ್ತೆಂದು ಎರಗಿಬರುವ ಅನಿರೀಕ್ಷಿತ ಖರ್ಚುಗಳು, ಇದ್ದಕ್ಕಿದ್ದಂತೆ ಜೊತೆಯಾಗುವ ರೋಗ ರುಜಿನಗಳು, ಕೋವಿಡ್‌ನಂತಹ ಪರಿಸ್ಥಿತಿ, ಎಂಥ ಸಂದರ್ಭದಲ್ಲೂ ಅತ್ಯಗತ್ಯ ಅನ್ನಿಸುವ ಮಕ್ಕಳ ವಿದ್ಯಾಭ್ಯಾಸ, ವಾಹನ ಖರೀದಿ, ಮಕ್ಕಳ ಮದುವೆ ಮತ್ತು ತಲೆಯ ಮೇಲೊಂದು ಸೂರು… ಇವೆಲ್ಲಾ ಜವಾಬ್ದಾರಿಯನ್ನು ನಿಭಾಯಿಸಲು ಮಿತವ್ಯಯ ಸಾಧಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
- ಅಗತ್ಯವಿರುವ ವಸ್ತುಗಳನ್ನಷ್ಟೇ ಖರೀದಿಸುವುದು. ಉತ್ತಮ ಗುಣಮಟ್ಟದ ವಸ್ತುಗಳು ಕೆಲವೊಮ್ಮೆ ರಿಯಾ ಯಿತಿ ದರದಲ್ಲಿ ಸಿಗುತ್ತವೆ ಅಂಥ ಸಂದರ್ಭದಲ್ಲಿಯೇ ವಸ್ತುಗಳನ್ನು ಖರೀದಿಸಿ ಹಣ ಉಳಿಸುವುದು.
- ಕ್ರೆಡಿಟ್ ಕಾರ್ಡ್‌ನಲ್ಲಿ ವ್ಯವಹಾರ ಮಾಡುವಾಗ ಬಿಲ್ಲಿಂಗ್ ದಿನಾಂಕದ ನಂತರ ಮಾಡಿದರೆ, ಮುಂದಿನ ಬಿಲ್ಲಿಂಗ್ ತಾರೀಖೀನವರೆಗೆ ಸಾಲ ದೊರಕುತ್ತದೆ. ಈ ಸೌಲಭ್ಯವನ್ನು ಚಾಣಾಕ್ಷತನದಿಂದ ಬಳಸಿಕೊಂಡು ಹಣ ಉಳಿಸುವುದು.
- ಇಡೀ ಕುಟುಂಬಕ್ಕೆ ಅರೋಗ್ಯವಿಮೆ ಮಾಡಿಸುವುದು. ಆ ಮೂಲಕ ಮೆಡಿಕಲ್ ಚಿಕಿತ್ಸಾ ವೆಚ್ಚವನ್ನು ಉಳಿಸುವುದು.
- ಐದಕ್ಕಿಂತ ಹೆಚ್ಚು ಬಾರಿ ಎಟಿಎಂನಲ್ಲಿ ಹಣ ಪಡದರೆ ಶುಲ್ಕ ವಿಧಿಸುವುದರಿಂದ, ಎಟಿಎಂ ಬಳಕೆಯನ್ನು ಐದಕ್ಕೆ ಸೀಮಿತಗೊಳಿಸಿಕೊಳ್ಳುವುದು.
- ಯುಟಿಲಿಟಿ ಸೇವೆಗಳಿಗೆ ಬಿಲ್ ಪಾವತಿಸುವಾಗ ಬ್ಯಾಂಕು ಗಳಉಇಖ ಅಥವಾ ಪೇಮೆಂಟ್ ಬ್ಯಾಂಕುಗಳ ನಸೇವೆ ಪಡೆಯುವ ಮೂಲಕ ಹಣ ಉಳಿಸುವುದು.
- ಸಾಲ ಪಡೆಯಬೇಕಾಗಿ ಬಂದಾಗ ಕಡಿಮೆ ಬಡ್ಡಿ ಇರುವ ಸಾಲವನ್ನೇ ಪಡೆಯುವುದು. ಲೇವಾದೇವಿ ಮಾಡುವ ವರಿಂದ ದೂರ ಉಳಿಯುವುದು. ಹಾಗೆಯೇ, ಹೂಡಿಕೆ ಮಾಡುವಾಗ ದೀರ್ಘಾವಧಿಗೆ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ಪಡೆಯುವುದು.