Advertisement

ಬಡವರ ಬದುಕು ಕಸಿದ ಲಾಕ್‌ಡೌನ್‌

02:54 PM May 12, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕುತಡೆಗೆ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಜನಜೀವನ ಅಸ್ತವ್ಯಸ್ತಗೊಂಡಿದ್ದು ಕೂಲಿ ಕಾರ್ಮಿಕರು,ಬಡಜನರ ಗೋಳು ಕೇಳುವವರು ಯಾರೂ ಇಲ್ಲವಾಗಿದ್ದಾರೆ.

Advertisement

ಜೀವನ ಸಾಧ್ಯವೇ?: ರಾಜ್ಯದಲ್ಲಿ ಕಳೆದ ವರ್ಷಸೋಂಕು ಅಪ್ಪಳಿಸಿದಾಗ ದಾನಿಗಳು ಮತ್ತು ಸಮಾಜಸೇವಕರು ಹಾಗೂ ವಿವಿಧ ಪಕ್ಷಗಳ ನಾಯಕರುಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ ಆಹಾರಸಾಮಗ್ರಿಗಳನ್ನು ಪೂರೈಕೆ ಮಾಡಿದ್ದರು. ಆದರೆ, ಈಬಾರಿ ಪಡಿತರ ಚೀಟಿಯಲ್ಲಿ ನೀಡುವ 7 ಕೆ.ಜಿ. ಅಕ್ಕಿಮತ್ತು 3 ಕೆ.ಜಿ.ರಾಗಿಯಿಂದ ಜೀವನ ನಡೆಸಲುಸಾಧ್ಯವೇ? ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ಸಾಲ ಮರುಪಾವತಿ ಹೇಗೆ?: ಲಾಕ್‌ಡೌನ್‌ಜಾರಿಗೊಳಿಸಿದ್ದರಿಂದ ಬೆಳಗ್ಗೆ 6 ಗಂಟೆಯಿಂದ 10ಗಂಟೆವರೆಗೆ ವ್ಯಾಪಾರ ಮಾಡಿಕೊಳ್ಳಲು ಅವಕಾಶನೀಡಿದ್ದಾರೆ. ಆದರೆ, ಬೈಕ್‌ನಲ್ಲಿ ಬಂದರೇ ದಂಡಹಾಕುತ್ತಾರೆ ಎಂಬ ಭೀತಿಯಿಂದ ನಾಗರಿಕರುಬರುವುದು ಕಡಿಮೆಯಾಗಿದೆ. ಇದರಿಂದ ಯಾವವ್ಯಾಪಾರವೂ ನಡೆಯುತ್ತಿಲ್ಲ. ಜೀವ ಇದ್ದರೇ ಜೀವನಒಪ್ಪಿಕೊಳ್ಳೋಣ, ಆದರೆ, ಕುಟುಂಬ ನಿರ್ವಹಣೆಹೇಗೆ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವಜನ ಬಾಡಿಗೆ ಪಾವತಿಸುವುದು ಹೇಗೆ.

ವಿದ್ಯುತ್‌ ಬಿಲ್‌ಪಾವತಿ, ಸಾಲ ಮರುಪಾವತಿ ಹೇಗೆ ಸಾಧ್ಯ.ಸರ್ಕಾರವೇ ಇದಕ್ಕೆ ಪರಿಹಾರ ಒದಗಿಸಬೇಕೆಂದುಕೂಲಿ ಕಾರ್ಮಿಕರು-ಬಡವರು ಮನವಿ ಮಾಡಿದ್ದಾರೆ.ಬಯಲುಸೀಮೆ ಪ್ರದೇಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಬರಪೀಡಿತ ಪ್ರದೇಶವೆಂದು ಅಪಖ್ಯಾತಿ ಹೊಂದಿದೆ.ಇಲ್ಲಿ ಯಾವುದೇ ರೀತಿಯ ನೀರಾವರಿ ಸೌಲಭ್ಯವೂಇಲ್ಲ, ಕೇವಲ ಮಳೆ ನೀರನ್ನು ಆಶ್ರಯಿಸಿಕೊಂಡುರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಮಾಡಿ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ರೇಷ್ಮೆದರ ಕುಸಿದಿದೆ ಎಂದು ಬೆಳೆಗಾರರು ಅಸಮಾಧಾನವ್ಯಕ್ತಪಡಿಸಿದ್ದಾರೆ.

ಮತ್ತೂಂದೆಡೆ ಬಂಡವಾಳ ಹೂಡಿಬೆಳೆದಿದ್ದ ಹೂ ಹಣ್ಣು ಮತ್ತು ತರಕಾರಿ ಬೆಳೆಗಳನ್ನುಕೇಳುವವರು ಇಲ್ಲವಾಗಿದ್ದಾರೆ. ಒಟ್ಟಾರೇ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದ್ದು ಸರ್ಕಾರ ರೈತರು, ಕೂಲಿ ಕಾರ್ಮಿಕರುಮತ್ತು ಬಡಜನರ ಕಷ್ಟ ಅರಿತು ವಿಶೇಷ ಪ್ಯಾಕೇಜ್‌ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Advertisement

ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next