Advertisement
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆಜಾಗೃತಿ ಮೂಡಿಸಬೇಕು, ಕೊರೊನಾ ಮುಕ್ತಜಿಲ್ಲೆಯಾಗಿಸಲು ಪಂಚಾಯ್ತಿ ವ್ಯಾಪ್ತಿಯಲ್ಲಿ ಆದ್ಯತೆಮೇಲೆ ಕೆಲಸ ಮಾಡಬೇಕು. ಈ ಸೋಂಕು ಪಟ್ಟಣಕ್ಕೆಮಾತ್ರ ಸೀಮಿತವಾಗದೇ ಹಳ್ಳಿಗಳಿಗೂ ವೇಗವಾಗಿವ್ಯಾಪಿಸುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆಎಂದು ಹೇಳಿದರು.
ಕೊರೊನಾ ಪ್ರಕರಣ ಹೆಚ್ಚಾಗಿರುವ ಹಳ್ಳಿಗಳಲ್ಲಿಹೊರಗಡೆ ಎಲ್ಲೂ ಓಡಾಟದ ರೀತಿಯಲ್ಲಿಸಾರ್ವಜನಿಕರನ್ನು ನಿಬಂìಧಿಸಬೇಕು, ಲಾಕ್‌ಡೌನ್‌ಮತ್ತು ಸಿಲ್ ಡೌನ್ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನರೀತಿಯಲ್ಲಿ ನಿಗಾವಹಿಸಬೇಕು ಎಂದು ಸೂಚಿಸಿದರು.ತಾಪಂ ಇಒ ಬಾಬು ಮಾತನಾಡಿ, ತಾಪಂವ್ಯಾಪ್ತಿಯ 36 ಗ್ರಾಪಂನಲ್ಲಿ ಕೊರೊನಾ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ರಚನೆ ಮಾಡಿ ಪ್ರತಿ ಹಳ್ಳಿಗಳಲ್ಲಿಕೊರೊನಾ ತಡೆಗಟ್ಟಲು ಜಾಗೃತಿ ಮೂಡಿಸುವ ಜೊತೆಗೆತುರ್ತು ಕ್ರಮ ಕೈಗೊಳ್ಳಲಾಗಿದೆ. ಹಳ್ಳಿಗಳಲ್ಲಿ ಔಷಧಸಿಂಪಡಿಸುವುದು ಸೋಂಕಿತರು ಮೃತಪಟ್ಟರೆಅಂತ್ಯಕ್ರಿಯೆ ಮಾಡಲು ಪಂಚಾಯ್ತಿಯಿಂದ ವಿಶೇಷವ್ಯವಸ್ಥೆ ಒದಗಿಸಲಾಗಿದೆ ಎಂದು ವಿವರಿಸಿದರು.ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ,ನಗರಸಭೆ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಎನ್.ಎಸ್.ಪ್ರವೀಣ್, ನಗರಸಭೆ ಆಯುಕ್ತ ಶ್ರೀಕಾಂತ್, ಪಿಎಸ್‌ಐಅಣ್ಣಯ್ಯ ಭಾಗವಹಿಸಿದ್ದರು.