Advertisement

ಕೋವಿಡ್: ಆತಂಕ, ಭೀತಿ ಬೇಡ

03:07 PM May 05, 2021 | Team Udayavani |

ಮಾಗಡಿ: ಯಾವುದೇ ಕಾರಣಕ್ಕೂ ಕೋವಿಡ್  ಆತಂಕ, ಭಯ ಪಡಬಾರದು. ಭಯ ಮತ್ತುಅನಾವಶ್ಯಕ ಚಿಂತನೆಗಳಿದ್ದರೆ ರೋಗ ಹೆಚ್ಚಾಗುತ್ತದೆ.ಧೈರ್ಯ ಮತ್ತು ಸಕಾರತ್ಮಕ ಚಿಂತನಗಳಿಂದ ಕೊರೊನಾಸೋಂಕಿತರು ಗುಣಮುಖರಾಗಬಹುದು ಎಂದುಪುರಸಭಾ ಸದಸ್ಯ ರಂಗಹನುಮಯ್ಯ ಅಭಿಪ್ರಾಯಪಟ್ಟರು.

Advertisement

ಪಟ್ಟಣದ 4ನೇ ವಾರ್ಡ್‌ನಲ್ಲಿ ಪುರಸಭೆವತಿಯಿಂದ ಸ್ಯಾನಿಟರೈಸ್‌ ಮಾಡಲು ಚಾಲನೆ ನೀಡಿಮಾತನಾಡಿದ ಅವರು, 3 ವರ್ಷದ ಮಗು ಹಾಗೂ100 ವರ್ಷದ ವಯೋವೃದ್ಧೆ ಸಹ ಕೋವಿಡ್‌ ನಿಂದಗೆದ್ದು ಬದುಕಿರುವ ಉದಾಹರಣೆಗಳಿವೆ. ಇದನ್ನುಸೋಂಕಿತರಿಗೆ ಅರಿವು ಮೂಡಿಸಬೇಕು. ಈ ಮೂಲಕ ಆತ್ಮ ವಿಶ್ವಾಸ ತುಂಬಬೇಕು.

ಸೋಂಕಿತರು ಕೋವಿಡ್‌ಕೇಂದ್ರದಲ್ಲಿಯೂ ಉಸಿರಾಟಕ್ಕೆ ಸಂಬಂಧಿಸಿದವ್ಯಾಯಾಮ, ವಾಕಿಂಗ್‌ ಬಹಳ ಮುಖ್ಯವಾಗಿರುತ್ತದೆ.ಸದಾ ಚಟುವಟಿಕೆಯಿಂದ ಇರಬೇಕು, ಬಿಸಿನೀರು,ಕಸಾಯ, ಅಥವಾ ವೈದ್ಯರು ಸೂಚಿಸುವ ಔಷಧ,ಶುದ್ಧ ಸಾತ್ವಿಕ ಆಹಾರ ಸೇವನೆ ಮಾಡುವುದರಿಂದಕೋವಿಡ್‌ನಿಂದ ಬೇಗ ಗುಣಮುಖರಾಗಬಹುದು ಎಂದರು.

ಪುರಸಭೆಯೂ ಸಹ ವಾರ್ಡ್‌ವಾರುಕೋವಿಡ್‌ ಎಚ್ಚರಿಕೆ ಕುರಿತು ಮುಂಜಾಗ್ರತಾ ಕ್ರಮಅನುಸರಿಸುವಂತೆ ಪ್ರಚಾರ ಪಡಿಸುತ್ತಿದೆ. ಸಾಮಾಜಿಕಅಂತರ ಕಾಪಾಡಬೇಕು. ಮಾಸ್ಕ್ ಹಾಕಿಕೊಳ್ಳಬೇಕು.ಸ್ಯಾನಿಟೈಜರ್‌ ಬಳಸುತ್ತಿರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next