Advertisement

ಕೋವಿಡ್ ಪ್ರಭಾವದಿಂದ ಕೋಚಿಮುಲ್‍ಗೆ 20 ಕೋಟಿ ನಷ್ಟ: ಎನ್.ಸಿ.ವೆಂಕಟೇಶ್

10:15 PM Nov 15, 2020 | sudhir |

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಸುಮಾರು 20 ಕೋಟಿ ರೂಗಳ ನಷ್ಟ ಉಂಟಾಗಿದೆ ಆದರೂ ಸಹ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ ಎಂದು ನಲ್ಲಕದ್ರೇನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಹಾಗೂ ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದರು.

Advertisement

ತಾಲೂಕಿನ ನಲ್ಲಕದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಸದಸ್ಯರಿಗೆ ಬೋನಸ್ ಹಣವನ್ನು ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಭಾವದಿಂದ ಕೋಚಿಮುಲ್‍ಗೆ ಸುಮಾರು 20 ಕೋಟಿ ರೂಗಳು ನಷ್ಟ ಸಂಭವಿಸಿದೆ ಕಳೆದ ಎರಡು ತಿಂಗಳಿಂದ ಮಾತ್ರ ಲಾಭ ಬರುತ್ತಿದ್ದು ಹಾಲು ಮಾರಾಟ ಹೆಚ್ಚಾದ ಬಳಿಕ ಹಾಲಿನ ದರವನ್ನು ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದ ಅವರು ಈಗಾಗಲೇ 3 ಸಾವಿರ ಮೆಟ್ರಿಕ್ ಹಾಲಿನ ಪುಡಿ ದಾಸ್ತಾನುವಿದೆ ಆದರೂ ಸಹ ಹಾಲು ಉತ್ಪಾದಕರಿಗೆ ಪ್ರತಿ ವರ್ಷ ಬೋನಸ್ ನೀಡುತ್ತಾ ಬಂದಿದ್ದು ಪ್ರಸಕ್ತ ಸಾಲಿನಲ್ಲಿ ನಲ್ಲಕದ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 4 ಲಕ್ಷ ರೂಗಳ ಲಾಭ ಬಂದಿದ್ದು ಅದರಲ್ಲಿ ಒಂದೂವರೆ ಲಕ್ಷ ರೂಗಳು ಬೋನಸ್ ಹಣವನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ನೀಡಿದ್ದೇವೆ ಎಂದರು.

ಇದನ್ನೂ ಓದಿ :ಭಾರತದ ವಿರುದ್ಧ ಸಾಕ್ಷ್ಯಗಳು ಪಾಕ್‌ನ ಕಟ್ಟುಕತೆ: ಅನುರಾಗ್ ಶ್ರೀವಾಸ್ತವ

ಕೇವಲ 20 ಲೀಟರ್ ಹಾಲಿನಿಂದ ಆರಂಭವಾದ ಡೇರಿ ಇದೀಗ ಪ್ರತಿನಿತ್ಯ ಸುಮಾರು 800 ಲೀಟರ್ ಹಾಲು ಸರಬರಾಜು ಮಾಡುತ್ತಿದ್ದು ಚಿಲ್ಲಿಂಗ್ ಸೇಂಟರ್‍ನಲ್ಲಿ 3 ಸಾವಿರ ಲೀಟರ್ ಹಾಲು ಚಿಲ್ಲಿಂಗ್ ಮಾಡಿ ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತದೆ ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next