Advertisement
ಸಾಮಾನ್ಯವಾಗಿ ಮನೆಮಕ್ಕಳು, ಸಂಬಂಧಿಕರು ಒಟ್ಟಿಗೆ ಸೇರಿಕೊಂಡು ಆಚರಿಸುವ ಹಬ್ಬವಾಗಿದ್ದು, ಈ ಬಾರಿ ಒಬ್ಬರನ್ನೊಬ್ಬರು ಭೇಟಿಯಾಗದಂತೆಯೂ ಮಾಡಿದೆ. ಪೇಟೆಯಲ್ಲಿ ಅಂಗಡಿಗಳು ಮುಚ್ಚಿದ್ದರಿಂದ ಹೊಸ ವರ್ಷಕ್ಕೆ ಯಾವುದೇ ವಿಶೇಷ ಖರೀದಿಗಳಿಲ್ಲ. ಜನರು ದೇವಸ್ಥಾನಗಳಿಗೆ ತೆರಳಿ ದರ್ಶನವೂ ಪಡೆಯದಂತಾಗಿದೆ. ಹಾಗಾಗಿ ಜನರು ಮನೆಯಲ್ಲಿ ಸರಳ ಹಬ್ಬ ಆಚರಿಸಿದರು.
ಕರಾವಳಿ ಸಂಪ್ರದಾಯಗಳ ನಾಡು, ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆಯೂ ಒಂದೊಂದು ನಂಬಿಕೆಯಿರುತ್ತದೆ. ಮಲ್ಪೆ ತೊಟ್ಟಂ ಸಮೀಪದ ಕುಮೆಕೆರೆಯಲ್ಲಿ ಪ್ರತಿವರ್ಷ ಸೌರಮಾನ ಯುಗಾದಿಯಂದು ಊರಿ ನವರೆಲ್ಲರೂ ಸೇರಿ ಬಲೆ ಬೀಸಿ ಮೀನು ಹಿಡಿಯುವ ಸಂಪ್ರದಾಯ ಇತ್ತು. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರಗೆ ಬಾರದೇ ಹಲವಾರು ವರ್ಷಗಳ ಸಂಪ್ರದಾಯವನ್ನೆ ಕೈಬಿಟ್ಟಿದ್ದರು.