ಬೆಂಗಳೂರು: ಕೋವಿಡ್ ಸೋಂಕಿನ ಮೃತಪಟ್ಟ ತಾಯಿ ಯನ್ನು ನೆನೆದು ಕಣ್ಣೀರಿಡುತ್ತಿದ್ದ ಮಗಳು.ತಾಯಿಯ ಅಂತ್ಯ ಸಂಸ್ಕಾರ ಮಾಡಿ ಎಂದು ಮನವಿ ಮಾಡಿ ದರೂ ಒಪ್ಪದ ಚಿತಾಗಾರದ ಸಿಬ್ಬಂದಿ. ಹೀಗೆ ಮೂರು ದಿನವೂ ತಾಯಿಯ ಮೃತದೇಹವನ್ನು ಚಿತಾಗಾರಕ್ಕೆ ತಂದು ವಾಪಸ್ ಕಳುಹಿಸಿದ ಸಿಬ್ಬಂದಿ.
ತಾಯಿ ಮೃತಪಟ್ಟು ಮೂರು ದಿನವಾದರೂ ಮುಕ್ತಿನೀಡಲಾಗಲಿಲ್ಲ’ ಎಂದು ಗೋಳಾಡಿದ ಮಗಳು. ಇದು.. ಮಂಗಳವಾರ ತನ್ನ ತಾಯಿಯನ್ನು ಕಳೆದುಕೊಂಡ ಮಗಳು ಮೂರು ದಿನವಾದರೂ ಅಮ್ಮನಿಗೆ ಮುಕ್ತಿ ನೀಡಲಾಗದೆ ನಗರದ ಪಣತ್ತೂರು ಚಿತಾಗಾರದ ಬಳಿ ಕಣ್ಣೀರಿಟ್ಟ ಮನಕಲಕುವ ದೃಶ್ಯ. ನಗರದಲ್ಲಿ ಕೊರೊನಾ ಎರಡನೇ ಅಲೆಯಿಂದ ನಿತ್ಯ ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಮೃತದೇಹ ಗಳ ಅಂತ್ಯಸಂಸ್ಕಾರಕ್ಕಾಗಿ ಚಿತಾಗಾರದಲ್ಲಿ ದಿನವಿಡೀ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ನಿತ್ಯ ಊಹಿಸಲು ಅಸಾಧ್ಯವಾದ ಹಲವು ಘನಘೋರಘಟನೆಗಳು ಸಂಭವಿಸುತ್ತಿವೆ.
ಈ ನಡುವೆ ಸೋಂಕಿತ ಮಹಿಳೆ ಮೃತಪಟ್ಟು ಮೂರು ದಿನವಾದರೂ ಶವಸಂಸ್ಕಾರ ನೆರವೇರದೆ ಮತ್ತೆ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದ ಇಂಥಹದ್ದೇ ಒಂದು ಮನಕಲಕುವಘಟನೆ ನಗರದಲ್ಲಿ ನಡೆದಿದೆ. ಕಳೆದ ಮೂರು ದಿನದಿಂದ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ವನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಚಿತಾಗಾರ ಖಾಲಿ ಇಲ್ಲದೇ ಶವಸಂಸ್ಕಾರ ಮಾಡಲಾಗದ ಕಾರಣ ಮಹಿಳೆಯ ದೇಹವನ್ನು ಆಸ್ಪತ್ರೆಗೆ ಹಿಂತಿರುಗಿಸಲಾಗಿದೆ.
ಏ.24ರಂದು ಇಂದಿರಾನಗರದ ಆಸ್ಪತ್ರೆಯಲ್ಲಿ58 ವರ್ಷದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದರು. ಬಳಿಕ, ಖಾಸಗಿ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಕುಟುಂಬಸ್ಥರು ಪಣತ್ತೂರು ಚಿತಾಗಾರಕ್ಕೆತೆಗೆದು ಕೊಂಡು ಹೋಗಿದ್ದರು. ಆದರೆ, ಚಿತಾಗಾರ ಖಾಲಿ ಇಲ್ಲ. ಬಿಬಿಎಂಪಿ ವಾಹನದಲ್ಲಿ ಬರುವ ಮೃತದೇಹ ಗಳನ್ನು ಮಾತ್ರ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ. ಸೋಮವಾರ ರಾತ್ರಿ ಇಡೀ ಚಿತಾಗಾರದಲ್ಲಿಯೇ ಕಾದು ಕುಳಿತಿದ್ದರೂ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೇ ಶವವನ್ನು ಹಿಂತಿರುಗಿಸಿದ್ದಾರೆ.
ಹೀಗಾಗಿ,ಮಗಳು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಐಸಿ ಯುನಲ್ಲಿ ಇಟ್ಟಿದ್ದಾರೆ. ಮಂಗಳವಾರ ಮತ್ತೆ ಅಂತ್ಯ ಸಂಸ್ಕಾರಕ್ಕೆಮೃತ ದೇಹವನ್ನು ತೆಗೆದುಕೊಂಡು ಬಂದಿದ್ದು, ಇಂದೂಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯ ವಾಗುತ್ತಿಲ್ಲ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.
ಮೂರು ದಿನವಾದರೂ ಸಿಗದ ಮುಕ್ತಿ: “ನಮ್ಮ ತಾಯಿಕೊರೊನಾದಿಂದ ಶನಿವಾರ ಸಾವನ್ನಪ್ಪಿದರು. ಬಳಿಕ,ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ಚಿತಾಗಾರಕ್ಕೆ ತಂದೆವು. ಆದರೆ ಸಿಬ್ಬಂದಿ, ಬಿಬಿಎಂಪಿ ವಾಹನದಲ್ಲಿಬಂದರೆ ಮಾತ್ರ ಅಂತ್ಯ ಸಂಸ್ಕಾರ ಮಾಡುತ್ತೇವೆ. ಖಾಸಗಿ ವಾಹನದಲ್ಲಿ ಬಂದರೆ ಅಂತ್ಯಸಂಸ್ಕಾರಮಾಡಲ್ಲ ಎಂದು ವಾಪಸ್ ಕಳುಹಿಸಿದರು. ಮಂಗಳವಾರ ಬೆಳಗ್ಗೆ 6 ಗಂಟೆಗೆ ಬಂದು ಮನವಿ ಮಾಡಿದರೂ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಮೂರು ದಿನವಾದರೂ ತಾಯಿಯ ಶವ ಸಂಸ್ಕಾರ ಮಾಡಲುನಮ್ಮಿಂದ ಸಾಧ್ಯವಾಗಲಿಲ್ಲ’ ಎಂದು ತಾಯಿಯನ್ನುನೆನೆದು ಮಗಳು ಕಣ್ಣೀರಿಟ್ಟರು.