Advertisement

ಕೋವಿಡ್ ಮೂರನೇ ಅಲೆ ಭಯ ಬೇಡ: ಡಾ. ಶಿವಾನಂದ ಬಾಂದೇಕರ್

04:31 PM Nov 18, 2021 | Team Udayavani |

ಪಣಜಿ: ಗೋವಾದಲ್ಲಿ ಕೋವಿಡ್ ಎರಡನೇಯ ಅಲೆಯಿಂದಾಗಿ ಭಯಭೀತರಾಗಿರುವ ಜನತೆ ಮೂರನೇಯ ಅಲೆ ಕುರಿತು ಆತಂಕಕ್ಕೊಳಗಾಗಿದ್ದು, ಮೂರನೇಯ ಅಲೆ ಬರುವ ಸಂಭವ ತೀರಾ ಕಡಿಮೆಯಾಗಿದೆ. ಒಂದು ವೇಳೆ ಬಂದರೂ ಕೂಡ ಸೌಮ್ಯ ಸ್ವಭಾವದ್ದಾಗಿರಲಿದೆ ಎಂದು ಗೋವಾ ವೈದ್ಯಕೀಯ ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ಅಭಿಪ್ರಾಯಪಟ್ಟರು.

Advertisement

ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಮುಖ ವಿಷಯವೆಂದರೆ ಶೇ 65 ರಷ್ಟು ಜನರಿಗೆ ಕೋವಿಡ್ ಪ್ರತಿರೋಧಕ ಶಕ್ತಿ ನಿರ್ಮಾಣವಾಗಿದೆ. ಸೆರೊ ಸೆಂಟಿನಲ್ ಸರ್ವೆಯ ಅನುಸಾರ ಉತ್ತರ ಗೋವಾದಲ್ಲಿ ಶೇ 60 ರಷ್ಟು ಮತ್ತು ದಕ್ಷಿಣ ಗೋವಾದಲ್ಲಿ ಶೇ 70 ರಷ್ಟು ಜನರಲ್ಲಿ ಪ್ರತಿರೋಧಕ ಶಕ್ತಿ ನಿರ್ಮಾಣವಾಗಿದೆ. ಇದರಿಂದಾಗಿ ಒಂದು ವೇಳೆ ಕೋವಿಡ್ ಸೋಂಕು ಮತ್ತೆ ಹರಡಿದರೂ ಕೂಡ ಹೆಚ್ಚಿನ ತೊಂದರೆ ಮಾಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ಗೋವಾದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವೂ ಪ್ರಮುಖ ಭಾಗ: ಸಿಎಂ ಸಾವಂತ್

ಗೋವಾದಲ್ಲಿ ಸದ್ಯ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರೂ ಕೂಡ ಕೋವಿಡ್ ಹರಡುವಿಕೆಯ ಪ್ರಮಾಣ ನಿಯಂತ್ರಣದಲ್ಲಿದೆ. ಗೋವಾದಲ್ಲಿ ಕೋವಿಡ್ ಲಸಿಕೆ ಶೇ 100 ರಷ್ಟು ಜನರು ತೆಗೆದುಕೊಂಡಿದ್ದಾರೆ. ಲಸಿಕೆ ಪಡೆದವರು ಕೋವಿಡ್ ಸೋಂಕನ್ನು ಸಮರ್ಥವಾಗಿ ಎದುರಿಸಬಲ್ಲರು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next