Advertisement

ಕೊರೊನಾ: ಭಯ ಬೇಡ, ಇರಲಿ ಎಚ್ಚರ

10:22 PM Mar 18, 2020 | mahesh |

ಮಹಾನಗರ: ಕೊರೊನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿ ಕೆಯು ಜನಸಾಮಾನ್ಯರು, ಪೇಯಿಂಗ್‌ ಗೆಸ್ಟ್‌/ ಹಾಸ್ಟೆಲ್‌ಗ‌ಳು, ಹೊಟೇಲ್‌ಗ‌ಳು, ಪಾರ್ಕ್‌-ಜಿಮ್‌ಗಳು, ವಸತಿ ಸಮು ಚ್ಚಯಗಳ ಅಸೋಸಿಯೇಶನ್‌ಗಳಿಗೆ ಕೆಲವೊಂದು ನಿರ್ದಿಷ್ಟ ಸಲಹೆ ಸೂಚನೆ ಗಳನ್ನು ನೀಡಿದ್ದು, ಅದರ ಪ್ರತಿಗಳನ್ನು ಮೇಯರ್‌ ದಿವಾಕರ್‌ ಅವರು ಬುಧವಾರ ಬಿಡುಗಡೆ ಮಾಡಿದರು.

Advertisement

ಪಾಲಿಕೆಯ ಮಂಗಳಾ ಸಭಾಂಗಣ ದಲ್ಲಿ ಕಾರ್ಪೊರೇಟರ್‌ಗಳಿಗೆ, ಸಿಬಂದಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳು, ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಆಯೋಜಿಸಲಾದ ತರಬೇತಿ ಕಾರ್ಯ ಕ್ರಮದಲ್ಲಿ ಈ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ತರಬೇತಿಯ ಬಳಿಕ ಮೇಯರ್‌ ಅವರ ವಾಹನ ಸಹಿತ ನಗರದ ಸಿಟಿ ಬಸ್‌ಗಳಿಗೆ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಸಾಂಕೇತಿಕವಾಗಿ ಅಂಟಿಸಲಾಯಿತು.

ಮನಪಾದಿಂದ ವಾರ್ಡ್‌ ಮಟ್ಟದಲ್ಲಿ ತಂಡದಿಂದ ಜಾಗೃತಿ
ಪಾಲಿಕೆಯ ವತಿಯಿಂದ ಆಯಾ ವಾರ್ಡ್‌ಗಳ ಸದಸ್ಯರ ನೇತೃತ್ವದಲ್ಲಿ ಪಾಲಿಕೆಯ ಕಾರ್ಯನಿರ್ವಾಹಕ ಎಂಜನಿಯರ್‌, ಆರೋಗ್ಯ- ಕಂದಾಯ ಅಧಿಕಾರಿಗಳನ್ನು ಒಳಗೊಂಡ ತಂಡ ಮಾ. 18ರ ಮಧ್ಯಾಹ್ನದಿಂದ ವಾರ್ಡ್‌ ಮಟ್ಟದಲ್ಲಿ ಮನೆ ಮನೆ ಭೇಟಿ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದು ಮ.ನ.ಪಾ. ಜಂಟಿ ಆಯುಕ್ತ ಡಾ| ಸಂತೋಷ್‌ ಕುಮಾರ್‌ ಮಾಹಿತಿ ನೀಡಿದರು. ಮನಪಾ ವತಿಯಿಂದ ನೀಡಲಾದ ಪ್ರಮುಖ ಸಲಹೆ, ಸೂಚನೆಗಳ ಕುರಿತಂತೆ ಪಾಲಿಕೆ ಆಯುಕ್ತ ಅಜಿತ್‌ ಹೆಗ್ಡೆ ಶಾನಾಡಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಮಕ್ಕಳು – ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ಗಮನ ನೀಡಿ
ಕೊರೊನಾ ಬಗ್ಗೆ ಜಾಗ್ರತೆ ವಹಿಸುವ ಸಂದರ್ಭ ಮನೆಯಲ್ಲಿರುವ ಮಕ್ಕಳು, ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ನಾಗರಿ ಕರಿಗೆ ಸಲಹೆ ನೀಡಿದ್ದಾರೆ.

Advertisement

ಮಾಸ್ಕ್ (ಮುಖ ಕವಚ) ಎಲ್ಲರೂ ಧರಿಸಬೇಕಾಗಿಲ್ಲ. ನೆಗಡಿ, ಕೆಮ್ಮು ಪೀಡಿತರು ತಮ್ಮ ಸೋಂಕು ಇತರರಿಗೆ ಹರಡದಂತೆ ಇರಲು ಇದನ್ನು ಧರಿಸುವುದು ಸೂಕ್ತ. ಮುಖ ಕವಚವನ್ನು ಒಂದು ಬಾರಿ ಎಂಟು ಗಂಟೆ ಉಪಯೋಗಿಸಿದ ಬಳಿಕ ಮತ್ತೆ ಉಪಯೋಗಿಸಬಾರದು. ಅದಕ್ಕಾಗಿ ಸ್ವತ್ಛವಾದ ಕರವಸ್ತ್ರವನ್ನು ಕೆಮ್ಮುವಾಗ, ಸೀನುವಾಗ ಉಪಯೋಗಿಸಬೇಕು. ಪೌಷ್ಟಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಆಹಾರ ತಯಾರಿಸಿ, ಬಿಸಿಯಾಗಿಯೇ ಸೇವಿಸಬೇಕು. ಜನಜಂಗುಳಿಯಿಂದ ದೂರವಿದ್ದು, ಕುದಿಸಿ ಆರಿಸಿದ ನೀರನ್ನೇ ಕುಡಿಯ ಬೇಕು. ಕೋವಿಡ್‌- 19 (ಕೊರೊನಾ) ವೈರಾಣುವಿನಿಂದ ಸೋಕು ರೋಗ ತಗುಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡಿ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಒಳಗಾಗುತ್ತದೆ.

ಈ ರೋಗ ಸೋಂಕಿದ ವ್ಯಕ್ತಿಯ ಕೆಮ್ಮು ಅಥವಾ ಸೀನಿನಿಂದ ಬರುವ ಹನಿಗಳ ಸಂಪರ್ಕದಿಂದ ಅದು ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಪದೇ ಪದೇ ಸೋಪಿನಿಂದ ಕೈ ತೊಳೆಯುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಈ ರೋಗ ಹರಡುವುದನ್ನು ತಡೆಗಟ್ಟ ಬಹುದು. ಈ ರೋಗದ ಬಗ್ಗೆ ಭಯ ಬೇಡ, ಎಚ್ಚರ ಇರಲಿ ಎಂದರು.
ಜಾತ್ರೆ, ಸಂತೆ, ಮಾರ್ಕೆಟ್‌, ಇತರ ಜನ ದಟ್ಟಣೆ ಇರುವ ಸ್ಥಳಗಳಿಂದ ಸಾಧ್ಯವಾದಷ್ಟು ದೂರ ಇರುವಂತೆ ನೋಡಿಕೊಳ್ಳಬೇಕು.

ಕೊರೊನಾಕ್ಕೆ ಸಂಬಂಧಿಸಿದಂತೆ ಯಾವುದೇ ಚಿಕಿತ್ಸೆ/ ಲಸಿಕೆ ಲಭ್ಯವಿಲ್ಲ. ಆದ್ದರಿಂದ ನಕಲಿ ವೈದ್ಯರಿಂದ ದೂರವಿರಿ.

ವಯೋ ವೃದ್ಧರು, ಎಳೆಯ ಹಸುಳೆಗಳು, ರೋಗ ನಿರೋಧಕ ಶಕ್ತಿ ಕ್ಷೀಣಿಸಿದವರು, ತೀವ್ರ ಮಧು ಮೇಹಿಗಳು, ಕ್ಯಾನ್ಸರ್‌ ಪೀಡಿತರು, ದೀರ್ಘ‌ ಕಾಲದಿಂದ ರೋಗದಿಂದ ಬಳಲುತ್ತಿರುವವರು ಕೊರೊನಾದಿಂದ ಬೇಗನೆ ಗುಣಮುಖರಾಗುವುದು ಕಷ್ಟ.

ವಸತಿ ಸಮುಚ್ಚಯಗಳ ಅಸೋಸಿಯೇಶನ್‌ಗಳಿಗೆ ಸಲಹೆ, ಸೂಚನೆಗಳು
ಹೌಸ್‌ ಕೀಪಿಂಗ್‌ ಸಿಬಂದಿಗೆ ನಿಯತಕಾಲಿಕವಾಗಿ ಕೈ ತೊಳೆಯಲು ಅಗತ್ಯವಾದ ಸೋಪ್‌ ಸ್ಯಾನಿಟೈಝರ್‌ ಮತ್ತು ದ್ರವ ಸೋಪ್‌ ವಿತರಕವನ್ನು ಒದಗಿಸಬೇಕು.

 ಸಾಮಾನ್ಯ ಪ್ರದೇಶದ ನೆಲ, ರೇಲಿಂಗ್‌ ಇತ್ಯಾದಿಯಾಗಿ ಜನರು ಸ್ಪರ್ಶಿಸ ಬಹುದಾದ ಯಾವುದೇ ಮೇಲ್ಮೆ„ಯನ್ನು ಸೋಡಿಯಂ ಹೈಪಿಯೋಕ್ಲೋರೈಟ್‌, ಬ್ಲೀಚಿಂಗ್‌ ಪೌಡರ್‌ ಬಳಸಿ ಸ್ವತ್ಛಗೊಳಿಸುವುದು. ಇಲ್ಲಿ ಅತ್ಯುನ್ನತ ಮಟ್ಟದ ಸ್ವಚ್ಛತೆಯನ್ನು ಕಾಪಾಡಬೇಕು.

 ವಸತಿ ಸಮುಚ್ಚಯಗಳ ಆವರಣದಲ್ಲಿ ಎಲ್ಲ ರೀತಿಯ ಸಾಮೂಹಿಕ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಜಿಮ್‌, ಈಜುಕೊಳ, ಮನೋರಂಜನಾ ಕ್ಲಬ್‌, ಇತರ ಕ್ರೀಡಾ ಸೌಲಭ್ಯಗಳನ್ನು ನಿರ್ದಿಷ್ಟ ಅವಧಿಗೆ ಮುಚ್ಚಬೇಕು.

ಬೇಸಗೆ ಶಿಬಿರದ ಚಟುವಟಿಕೆಗಳು, ಹೊರಾಂಗಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಲಿಫ್ಟ್ಗಳು, ಮುಚ್ಚಿದ ಸ್ಥಳಗಳು ಸಾಂಕ್ರಾಮಿಕ ರೋಗದ ಮೂಲವಾದ್ದರಿಂದ ನಿಯತವಾಗಿ ಸ್ವಚ್ಛಗೊಳಿಸಬೇಕು.

ಸಮುದಾಯದಲ್ಲಿ ಭೀತಿ, ಸಮಸ್ಯೆಗಳನ್ನು ಉಂಟು ಮಾಡುವ ಯಾವುದೇ ವದಂತಿಗೆ ಕಿವಿ ಗೊಡ ಬಾರದು, ಯಾವುದೇ ರೀತಿಯ ಅಗತ್ಯ ಕ್ರಮಕ್ಕಾಗಿ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವುದು.

ಮನೆ ಸಂಪರ್ಕ ತಡೆಗೆ (ಕೊÌರಂಟೈನ್‌) ಸೂಚಿಸಿದ ಎಲ್ಲ ವ್ಯಕ್ತಿಗಳು ಅವರವರ ಮನೆಯೊಳಗೆ ಇರುವುದನ್ನು ಆರ್‌ಡಬುಲೆಗಳು ಖಾತರಿ ಪಡಿಸಿಕೊಳ್ಳುವುದು, ಸಮುದಾಯ ಸ್ಥಳಗಳ ಸಂಪರ್ಕಕ್ಕೆ ಬಾರದಂತೆ ನಿಗಾ ವಹಿಸುವುದು.

ಪೇಯಿಂಗ್‌ ಗೆಸ್ಟ್, ಹಾಸ್ಟೆಲ್ ಗಳಿಗೆ ಸಲಹೆ
1. ಪೇಯಿಂಗ್‌ ಗೆಸ್ಟ್‌ ಅಥವಾ ಹಾಸ್ಟೆಲ್ ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಸಂಸ್ಥೆಗಳು ರಜಾದಿನಗಳನ್ನು ಘೋಷಿಸಿದ್ದರೆ ಮನೆಗೆ ತೆರಳಲು ಸೂಚಿಸುವುದು.
2. ಹಾಸ್ಟೆಲ್ / ಪಿಜಿಯಲ್ಲಿ ಉಳಿಯಲು ನಿರ್ಧರಿಸಿದರೆ, ಸರಕಾರದ ಸಲಹೆಯಂತೆ ವೈಯಕ್ತಿಕ ನೈರ್ಮಲ್ಯ ಕ್ರಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವುದು.
3. ಪೇಯಿಂಗ್‌ ಗೆಸ್ಟ್‌ / ಹಾಸ್ಟೆಲ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಆಯಾ ಸಂಸ್ಥೆಗಳ ಮಾಲಕರ ಕಡ್ಡಾಯ ಜವಾಬ್ದಾರಿಯಾಗಿದೆ. ಒಂದೊಮ್ಮೆ ವ್ಯವಸ್ಥಾಪಕರನ್ನು/ ಸಿಬಂದಿಯನ್ನು ನೇಮಿಸಿದ್ದರೆ ಸ್ವತ್ಛತೆ ಕಾಪಾಡಲು ಅವರಿಗೆ ಕಟ್ಟು ನಿಟ್ಟಾಗಿ ಸೂಚಿಸಬೇಕು.
4 .110 ಚದರ ಅಡಿ ವಾಸಿಸುವ ಕೋಣೆಗಳಲ್ಲಿ (ಅಡುಗೆ, ಶೌಚಾಲಯ / ಸ್ನಾನ ಗೃಹ ಹೊರತುಪಡಿಸಿ), 2ಕ್ಕಿಂತ ಹೆಚ್ಚು ನಿವಾಸಿಗಳಿಗೆ ಅವಕಾಶ ನೀಡಬಾರದು. ಸಾರ್ವಜನಿಕ ಆರೋಗ್ಯ ಮಾನದಂಡಗಳ ಪ್ರಕಾರ ಈ ನಿಯಮ ಪಾಲನೆ ಅಗತ್ಯ.
5. ಈ ಮೇಲಿನ ಕಾರಣವನ್ನು ಉಲ್ಲೇಖೀಸಿ ನಿವಾಸಿಗಳನ್ನು ಬಲವಂತವಾಗಿ ಹೊರಹಾಕುವಂತಿಲ್ಲ. ಒಂದೊಮ್ಮೆ ಹೊರ ಹಾಕಲು ಇಚ್ಛಿಸಿದಲ್ಲಿ ಪರ್ಯಾಯ ವಸತಿ ಸೌಕರ್ಯಗಳನ್ನು ನೋಡಲು ಸೂಕ್ತ ಕಾಲಾವಕಾಶವನ್ನು ನೀಡಬೇಕು.
6. ಸ್ವತ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಪಾಲಿಸದ ಕಾರಣ ಒಂದೊಮ್ಮೆ ಕೊರೊನಾ ವೈರಸ್‌ ಹರಡಲು ಕಾರಣರಾದರೆ ಅಂತಹ ಪೇಯಿಂಗ್‌ ಗೆಸ್ಟ್‌ / ಹಾಸ್ಟೆಲ್‌ಗ‌ಳ ಮಾಲಕರು, ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಹೊಟೇಲ್‌ಗ‌ಳಿಗೆ ಸೂಚನೆ
 ಹೊಟೇಲ್‌ಗ‌ಳಲ್ಲಿ ಗ್ರಾಹಕರಿಗೆ ಕುಡಿಯಲು ಕಡ್ಡಾಯವಾಗಿ ಬಿಸಿ ನೀರು ಒದಗಿಸುವುದು.
 ಹೊಟೇಲ್‌ ಸಿಬಂದಿ ಹ್ಯಾಂಡ್‌ ಗ್ಲೌಸ್‌, ಮಾಸ್ಕ್ ಧರಿಸುವುದು, ವೈಯಕ್ತಿಕ ಶುಚಿತ್ವ ಕಾಪಾಡಿ ಕೊಳ್ಳಬೇಕು.
ಹ್ಯಾಂಡಲ್‌ಗ‌ಳು, ನೆಲ, ಬಿಲ್ಲಿಂಗ್‌ ಟೇಬಲ್‌, ವ್ಯಕ್ತಿಯು ಸ್ಪರ್ಶಿಸಬಹುದಾದ ಯಾವುದೇ ಮೇಲ್ಮೆ„ಯನ್ನು ಸೋಡಿಯಂ ಹೈಪೋಕ್ಲೋರೈಡ್‌, ಬ್ಲೀಚಿಂಗ್‌ ಪೌಡರ್‌ ಅಥವಾ ಇನ್ನಾವುದೇ ಪರಿಣಾಮಕಾರಿ ಸೋಂಕು ನಿವಾರಕದಿಂದ ನಿಯತಕಾಲಿಕವಾಗಿ ಸ್ವತ್ಛ ಗೊಳಿಸುವುದು.
 ಹೆಚ್ಚಿcನ ಜನ ಸಂದಣಿಯನ್ನು ಕಟ್ಟು ನಿಟ್ಟಾಗಿ ನಿಷೇಧಿಸುವುದು.
ವಿವಿಧ ಸ್ಥಳಗಳಲ್ಲಿ ಆಲ್ಕೋಹಾಲ್ ಆಧಾರಿತ ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಉಪಯೋಗಕ್ಕೆ ಲಭ್ಯವಾಗಿಸುವುದು.
ಅನಾರೋಗ್ಯ ಕಾಣಿಸಿಕೊಂಡ ಸಿಬಂದಿಗೆ ರಜೆ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಲಹೆ ನೀಡುವುದು.

ಪಾರ್ಕ್‌ಗಳು, ಜಿಮ್‌ಗಳಿಗೆ ಸೂಚನೆ
 ಎಲ್ಲ ಜಿಮ್‌ಗಳು, ಈಜು ಕೊಳಗಳು ಮತ್ತು ಇತರ ಕ್ರೀಡಾ ಸೌಲಭ್ಯಗಳನ್ನು ಮುಚ್ಚುವುದು.
ಉದ್ಯಾನವನಗಳಲ್ಲಿ ತೆರೆದ ಜಿಮ್‌ ಉಪಕರಣಗಳ ಬಳಕೆಯನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next