ಚಿಕ್ಕಮಗಳೂರು: ಕೋವಿಡ್ ಎರಡನೇ ಅಲೆನಿಯಂತ್ರಿಸಲು ಸರ್ಕಾರ 14 ದಿನಗಳ ಕಾಲಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಜನರಬದುಕು ಮತ್ತೆ ಮೂರಾಬಟ್ಟೆಯಾಗಿದೆ.ಕಾರ್ಮಿಕರು, ಬಡವರು, ಆಟೋ, ಟ್ಯಾಕ್ಸಿ,ಬೀದಿಬದಿ ವ್ಯಾಪಾರಿಗಳ ಬದುಕು ಮತ್ತೂಮ್ಮೆಬೀದಿಗೆ ಬಂದು ನಿಂತಿದೆ.
ಜಿಲ್ಲೆಯಲ್ಲಿ ಶೇ.80ರಷ್ಟು ಕೃಷಿ, ಕೂಲಿಕಾರ್ಮಿಕರು, ಸಣ್ಣ ರೈತರು, ಮಧ್ಯಮ ಮತ್ತುಸಣ್ಣ ವ್ಯಾಪಾರಸ್ಥರು ಹೆಚ್ಚಾಗಿದ್ದು, ಕೊರೊನಾಕಫೂÂìದಿಂದ ಎಲ್ಲಾ ಚಟುವಟಿಕೆಗಳುಸ್ಥಗಿತಗೊಂಡಿವೆ. ಬದುಕು ಸಾಗಿಸುವುದುಹೇಗಪ್ಪಾ ಎಂಬ ಚಿಂತೆ ಕಾಡಲಾರಂಭಿಸಿದೆ.ಕೋವಿಡ್ ಮೊದಲ ಅಲೆ ತಡೆಯಲುಕೇಂದ್ರ ಸರ್ಕಾರ ಲಾಕ್‌ಡೌನ್ ವಿ ಧಿಸಿತ್ತು.
ಈಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು,ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸಿಬದುಕಿನ ಬಂಡಿ ನಡೆಸುತ್ತಿದ್ದವರ ಬದುಕುಬೀಗಿಗೆ ಬಂದು ನಿಂತಿತ್ತು. ಲಾಕ್‌ಡೌನ್ ಸರ್ಕಾರತೆಗೆದುಹಾಕಿದ ಬಳಿಕ ಜನರು ನಿಟ್ಟುಸಿರು ಬಿಟ್ಟುಕೊಂಚ ಸುಧಾರಿಸಿಕೊಳ್ಳುವಷ್ಟರಲ್ಲಿ ಎರಡನೇಅಲೆ ತಡೆಗೆ ಕೊರೊನಾ ಕರ್ಫ್ಯೂ ಬರಸಿಡಿಲಿನಂತೆಎರಗಿದೆ.
ಕಳೆದ ವರ್ಷ ಲಾಕ್‌ಡೌನ್‌ನಿಂದಸಾವಿರಾರು ಜನ ಉದ್ಯೋಗ ಕಳೆದುಕೊಂಡುನಂತರ ದಿನಗಳಲ್ಲಿ ಕಾಫಿ ತೋಟ ಸೇರಿದಂತೆಎಲ್ಲೇಲ್ಲೋ ಕೆಸಲ ಮಾಡಿ ಬದುಕುಕಟ್ಟಿಕೊಳ್ಳಲಾರಂಭಿಸಿದ್ದರು. ಬೀದಿಬದಿವ್ಯಪಾರಸ್ಥರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು.ಖಾಸಗಿ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಕರಭವಿಷ್ಯವೇ ಅತಂತ್ರಗೊಂಡಿತ್ತು. ಈಗ ಮತ್ತೇಕಫೂÂìದಿಂದ ಎಲ್ಲಾ ಚಟುವಟಿಕೆಗಳುಸ್ತಬ್ಧವಾಗಿದ್ದು ಬೆಂಕಿಯಿಂದ ಬಾಣಲೆಗೆಹಾಕಿದಂತಾಗಿದೆ.ಜಿಲ್ಲೆಯಲ್ಲಿನ ಬಹುತೇಕರು ಕೂಲಿಕೆಲಸ.ಕಾಫಿ, ಅಡಕೆ, ಹೊಲಗಳಲ್ಲಿ ಕೆಲಸ ಮಾಡಿ ಜೀವನಸಾಗಿಸುವ ಜನರ ಸಂಖ್ಯೆ ಹೆಚ್ಚಿದೆ. 14ದಿನಗಳಕಾಲ ಕರ್ಫ್ಯೂ ವಿ ಧಿಸಿರುವುದರಿಂದ ಕೂಲಿಕೆಲಸಕ್ಕೆ ಹೋಗದಂತಾಗಿದೆ.
ಕೂಲಿಕಾರ್ಮಿಕರುಒಂದೂರಿನಿಂದ ಮತ್ತೂಂದೂರಿಗೆ ಹೋಗಿಕೆಲಸ ಮಾಡಬೇಕಿದೆ. ಆದರೆ ವಾಹನ ಸಂಚಾರಕ್ಕೆನಿಷೇಧವಿರುವುದರಿಂದ ಕೂಲಿ ಕೆಲಸ ಮಾಡಿಹೊಟ್ಟೆ ತುಂಬಿಕೊಳ್ಳದಂತಾಗಿದೆ.ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯವಿವಿಧ ಪಟ್ಟಣ ಪ್ರದೇಶಗಳಲ್ಲಿ ಬೀದಿಬದಿವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಬಡ ವ್ಯಾಪಾರಿಗಳಿಗೆ ಲೆಕ್ಕವಿಲ್ಲ. ಕಳೆದ ಬಾರಿಯಲಾಕ್‌ಡೌನ್‌ನಿಂದಾಗಿ ಬೀದಿಬದಿ ವ್ಯಾಪಾರಿಗಳಬುದುಕು ಅಕ್ಷರಶಃ ಬೀದಿಗೆ ಬಂದಿತ್ತು.ಇತ್ತೀಚೆಗಷ್ಟೇ ಮತ್ತೆ ವ್ಯಾಪಾರ ವಹಿಟಾಟುಆರಂಭಿಸಿದ್ದರು.
ಅಷ್ಟರಲ್ಲೇ ಕೋವಿಡ್ ಎರಡನೇಅಲೆ ಅವರ ಬದುಕನ್ನು ಕಿತ್ತುಕೊಂಡಿದೆ.ಜಿಲ್ಲೆಯ ಕಾಫಿ ತೋಟಗಳಿಗೆ ಜಿಲ್ಲೆ ಹೊರಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಸಾವಿರಾರುಮಂದಿ ಕೆಲಸ ಅರಸಿ ಬರುತ್ತಾರೆ. ತೋಟಗಳಲ್ಲಿನಕೂಲಿಲೈನ್‌ಗಳಲ್ಲಿ ನೆಲೆಸಿ ಕೊರೊನಾ ಕಫೂÂìಘೋಷಣೆ ನಂತರ ಅನೇಕರು ತಮ್ಮತವರೂರಿಗೆ ತೆರಳಿದ್ದಾರೆ. ಕೆಲವರು ಇಲ್ಲೇನೆಲೆಸಿದ್ದು, ಕೋವಿಡ್ ಭಯದ ನಡುವೆ ಒಂದುತೋಟದಿಂದ ಮತ್ತೂಂದು ತೋಟಕ್ಕೆ ತೆರಳಿ ಕೆಲಸಮಾಡುವಂತಾಗಿದೆ.