ದೇವನಹಳ್ಳಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಸೋಂಕಿತರ ಪ್ರಕರಣಗಳು ಶತಕದಂಚಿನಲ್ಲಿ ದಾಖಲಾಗುತ್ತಿದ್ದವು. ಆದರೆ, ಸೋಮವಾರ ಏಕಾಏಕೀ ದ್ವಿಶತಕ ದಾಟಿ ಸೋಂಕಿತರ ಸಂಖ್ಯೆ ಈಗಾಗಲೇ 928ಕ್ಕೆ ತಲುಪಿದೆ.
28 ದಿನ ಹೋಂ ಕ್ವಾರಂಟೈನ್‌ನಲ್ಲಿ 907 ಮಂದಿ ಇದ್ದು 691 ಮಂದಿ ಪೂರ್ಣಗೊಳಿಸಿದ್ದಾರೆ. ಹಾಗೆಯೇ ಆಸ್ಪತ್ರೆ ಮತ್ತಿತರ ಕಡೆ ಕ್ವಾರಂಟೈನ್‌ಗೊಳಪಟ್ಟಿರುವವರ ಸಂಖ್ಯೆ 1052 ಇದ್ದಾರೆ. ಪ್ರಸ್ತುತ ವೀಕ್ಷಣೆಯಲ್ಲಿ 1944 ಮಂದಿಯಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 856 ಸೋಂಕು ದೃಢಪಟ್ಟ ಪ್ರಕರಣಗಳಿದ್ದು, ಅದರಲ್ಲಿ 115 ಪ್ರಕರಣ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದವರಾಗಿದ್ದಾರೆ. ಉಳಿದ 741 ಪ್ರಕರಣ ಜಿಲ್ಲೆಯದ್ದಾಗಿವೆ.
ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ಕಾರಣಕ್ಕೆ ಒಂದು ವಾರದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಲಾಕ್‌ಡೌನ್ ತೆರವಾಗಲಿದೆ. ಈಗಾಗಲೇ ಜಿಲ್ಲಾಡಳಿತ ಭವನ, ಜಿಪಂ ಕಚೇರಿ ಸಿಬ್ಬಂದಿಗೆ ಸೋಂಕು ತಗುಲಿದೆ. ಜಿಲ್ಲಾಧಿಕಾರಿ ಕಚೇರಿ, ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಹಲವಾರು ಸಿಬ್ಬಂದಿ ಬೆಂಗಳೂರಿನಿಂದ ಸಂಚಾರ ನಡೆಸುವುದರಿಂದ ಕೆಲಸ ಕಾರ್ಯಗಳಿಗೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದಾದರೂ ಹೇಗೆ ಎಂಬ ಚಿಂತೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ನಾಲ್ಕು ತಾಲೂಕು ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು.
8 ಮಂದಿ ಸಾವು : ಜು.15ರಂದು 10 ಪ್ರಕರಣ, ಜು.16ಕ್ಕೆ 31, ಜು.17ಕ್ಕೆ 33, ಜು.18ಕ್ಕೆ 94, ಜು.19ಕ್ಕೆ 70, ಜು.20, 208, ಜು.21 95 ಪ್ರಕರಣ ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಇದುವರೆಗೂ 9362 ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ 833 ಮಂದಿಯಲ್ಲಿ ಪಾಸಿಟಿವ್ ಬಂದಿದೆ. ಇನ್ನೂ 1011ಕ್ಕೂ ಅಧಿಕ ಮಂದಿಯ ಫಲಿತಾಂಶ ನಿರೀಕ್ಷಿಸಲಾಗಿದೆ. ಈ 833 ಪ್ರಕರಣಗಳಲ್ಲಿ 319 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 530 ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ. 8 ಮಂದಿ ಸಾವನ್ನಪ್ಪಿದ್ದಾರೆ.
-ಎಸ್.ಮಹೇಶ್