Advertisement

ಹಬ್ಬಗಳ ಸಾಮೂಹಿಕ ಆಚರಣೆಗಿಲ್ಲ ಅವಕಾಶ

04:03 PM Mar 29, 2021 | Team Udayavani |

ಹುನಗುಂದ: ಕೋವಿಡ್‌-19 ಎರಡನೆಯ ಅಲೆಭೀತಿಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತಹೋಳಿ ಹಬ್ಬ, ಗುಡ್‌ ಫ್ತೈಡೇ ಹಾಗೂ ಯುಗಾದಿಹಬ್ಬ ಸಾಮೂಹಿಕ ಆಚರಣೆ ಮತ್ತು ಸಾರ್ವಜನಿಕಸಂತೆ, ಸಭೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್‌ ಜಿ.ಎಂ. ಕುಲಕರ್ಣಿ ಸೂಚನೆ ನೀಡಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿನಡೆದ ಕೋವಿಡ್‌ ನಿಯಂತ್ರಣ ಮತ್ತು ಹೋಳಿಹಬ್ಬ ಆಚರಣೆಯ ಕುರಿತು ನಡೆದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಎರಡನೆಯ ಅಲೆ ವೇಗವಾಗಿ ಹರಡುತ್ತಿದೆ. ಅದಕ್ಕಾಗಿ ಸಾರ್ವಜನಿಕರ ಆರೋಗ್ಯದಹಿತದೃಷ್ಟಿಯಿಂದ ಹಬ್ಬಗಳನ್ನು ಮನೆಯಲ್ಲಿಯೇ ಸರಳವಾಗಿ ಆಚರಣೆ ಮಾಡುವುದರ ಜತೆಗೆಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿಪಾಲಿಸಬೇಕು. ಮಹಾರಾಷ್ಟ್ರದಿಂದ ಬರುವಜನರ ಮೇಲೆ ನಿಗಾ ವಹಿಸುವಂತೆ ಆಶಾಕಾರ್ಯಕರ್ತರು ಮತ್ತು ಗ್ರಾಮ ಲೆಕ್ಕಾ ಧಿಕಾರಿ ಅವರಿಗೆ ಸೂಚಿಸಿದರು.

ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ, ಮುಂದಿನ ಸರ್ಕಾರದ ಆದೇಶದವರೆಗೆ ಕರ್ನಾಟಕಸರ್ಕಾರದ ಕೋವಿಡ್‌-19 ಸಾಂಕ್ರಾಮಿಕರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಹೊರಡಿಸಿದ್ದು ಸಾಮೂಹಿಕವಾಗಿ ಹೊಳಿ ಆಚರಣೆಮತ್ತು ಜನಜಂಗೂಳಿ, ಸಾಮೂಹಿಕ ಜಾತ್ರೆ, ಸಂತೆ,ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಸರ್ಕಾರದ ಅನುಮತಿ ಪಡೆದು ಕೆಲವು ನಿರ್ದಿಷ್ಟ ಜನರನ್ನೊಳಗೊಂಡ ಸಭೆ,ಮದುವೆ ಮಾಡಬಹುದು. ಕೋವಿಡ್‌ ನಿಯಮಸೂಚನೆ ಉಲ್ಲಂಘನೆ ಮಾಡಿದವರ ವಿರುದ್ದವಿಪತ್ತ ನಿರ್ವಹಣಾ ಕಾಯ್ದೆ, ಐಪಿಸಿ ಕಾಯ್ದೆಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಬ್ಯಾಂಕ್‌, ಹೋಟೆಲ್‌, ವ್ಯಾಪಾರದ ಸ್ಥಳಗಳಲ್ಲಿಜನಜಂಗುಳಿ ಇರುವ ಸ್ಥಳಗಳಲ್ಲಿ ಸಾಮಾಜಿಕಅಂತರದ ಬಾಕ್ಸ್‌ ಪಟ್ಟಿಗಳನ್ನು ಹಾಕಬೇಕು.ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತುಸಾಮಾಜಿಕ ಅಂತರ ಕಾಪಾಡಿ ಸ್ಯಾನಿಟೈಸರ್‌ ಉಪಯೋಗಿಸಬೇಕು. ಮಾಸ್ಕ್ ಹಾಕದೇ ಇರುವುವರಿಗೆ ದಂಡ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡಲಾಗುವುದು ಎಂದರು

ಕಂದಾಯ ನೀರಿಕ್ಷಕ ಈಶ್ವರ ಬಾಲಗಾವಿ, ಶಿರಸ್ತೆದಾರ ಸಿ.ಜಿ.ಗೌಡರ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ.ಜಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next