ಧಾರವಾಡ: ಕೋವಿಡ್-19ರ ಎರಡನೇ ಅಲೆ ಉಲ್ಬಣಗೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರಿಂದ ಸಂಭವಿಸಬಹುದಾದ ಅನಾಹುತ ತಡೆಗಟ್ಟಲು ಹಲವು ಕ್ರಮ ಅನುಸರಿಸಲು ಮತ್ತು ಯಾವುದೇ ಸಮಸ್ಯೆ ಉದ್ಭವಿಸಿದರೂ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಜಿಲ್ಲೆಯಲ್ಲಿ ವಿವಿಧ ಕಾರ್ಯಗಳಿಗೆ ನೋಡಲ್ ಅಧಿಕಾರಿಗಳನ್ನು ಮತ್ತು ವಿವಿಧ ತಂಡಗಳಿಗೆ ಸದಸ್ಯರನ್ನು ನೇಮಕ ಮಾಡಿ ಡಿಸಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ: ಕೋವಿಡ್ ಪ್ರಕರಣಗಳನ್ನು 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗಾಗಿ ಸಂಬಂ ಧಿಸಿದ ಕೆಲಸ ಕಾರ್ಯಗಳನ್ನು ಜಿಲ್ಲೆಯ ಎಲ್ಲ ತಾಲೂಕುಗಳ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಸಹಾಯದೊಂದಿಗೆ ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗೂ ಭೂ ದಾಖಲೆಗಳ ಉಪ ನಿರ್ದೇಶಕ ವಿಜಯಕುಮಾರ ಅವರನ್ನು ನೇಮಿಸಲಾಗಿದೆ. ಕೋವಿಡ್-19 ಸಂಪರ್ಕ ಪತ್ತೆ ಹಚ್ಚುವಿಕೆ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್. ಕುಮ್ಮಣ್ಣನ್ನವರ ಮತ್ತು ಪಶುಪಾಲನೆ ಇಲಾಖೆಯ ಮಾದರಿ ಸಮೀಕ್ಷೆ ಯೋಜನೆಯ ಸಹಾಯಕ ನಿರ್ದೇಶಕ ಕಂಟೆಪ್ಪಗೌಡರ ಅವರನ್ನು ನೇಮಿಸಲಾಗಿದೆ.
ಕೋವಿಡ್-19 ಕಂಟ್ರೋಲ್ ರೂಂ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದಕ್ಕಾಗಿ ಉಸ್ತುವಾರಿಗಾಗಿ ಎಸಿ ಡಾ| ಗೋಪಾಲಕೃಷ್ಣ ಬಿ. ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಅವರನ್ನು ನೇಮಿಸಲಾಗಿದೆ. ವೈರಸ್ ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚುವ ತಂಡ: ಹುಡಾ ಆಯುಕ್ತ ಎನ್.ಕುಮ್ಮಣ್ಣನವರ, ಜಿಲ್ಲಾ ಸರ್ವೆàಕ್ಷಣಾಧಿ ಕಾರಿ ಸುಜಾತಾ ಹಸವಿಮಠ (ಸದಸ್ಯ ಕಾರ್ಯದರ್ಶಿ), ಕಿಮ್ಸ್‌ನ ಡಾ|ಲಕ್ಷ್ಮೀಕಾಂತ, ಬಿಸಿಎಂ ಇಲಾಖೆಯ ಡಿಒ ಅಜ್ಜಪ್ಪ ಸೊಗಲದ, ಅಲ್ಪಸಂಖ್ಯಾತರ ಇಲಾಖೆಯ ಡಿಒ ಅಬ್ದುಲ್ ರಷೀದ್ ಮಿರ್ಜನ್ನವರ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಎಂ.ಕೆ. ತಳವಾರ, ಸಹಾಯಕ ಅಂಕಿ ಸಂಖ್ಯೆ ಅ ಧಿಕಾರಿ ಕಂಟೆಪ್ಪಗೌಡರ ಸೇರಿದಂತೆ ಒಟ್ಟು ವಿವಿಧ ಇಲಾಖೆಗಳ 23ಜನ ಅಧಿಕಾರಿ ಮತ್ತು ಸಿಬ್ಬಂದಿ ಈ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಹೋಂ ಕ್ವಾರಂಟೈನ್ ಫಾಲೋಅಪ್ ತಂಡ: ಉಪ ಪೊಲೀಸ್ ಆಯುಕ್ತರು (ಕೋ ಚೇರ್‌ಮನ್), ಡಿವೈಎಸ್‌ಪಿ ಧಾರವಾಡ (ಸದಸ್ಯ ಕಾರ್ಯದರ್ಶಿ), ಪಾಲಿಕೆಯ ಜಂಟಿ ಆಯುಕ್ತ ಅಜೀಜ್ ದೇಸಾಯಿ ಮತ್ತು ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ತಂಡದಲ್ಲಿದ್ದಾರೆ.
ಹೋಂ ಐಸೋಲೇಶನ್ ತಂಡ: ಜಿಲ್ಲಾ ಆರೋಗ್ಯಾಧಿಕಾರಿ ಡಾ|ಯಶವಂತ ಮದೀನಕರ(ಕೋಚೇರ್ ಮನ್), ಜಿಲ್ಲಾ ಸರ್ವೆàಕ್ಷಣಾಧಿಕಾರಿ ಸುಜಾತಾ ಹಸವಿಮಠ (ಸದಸ್ಯ ಕಾರ್ಯದರ್ಶಿ),ಡಾ| ಸಂಪತ್ ಕುಮಾರ್ ಮತ್ತು ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ಈ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್ ಹೊಂದಿರುವ ವ್ಯಕ್ತಿಗಳ ಶಿμrಂಗ್ ತಂಡ: ಭೂದಾಖಲೆಗಳ ವಿಭಾಗದ ಉಪ ನಿರ್ದೇಶಕ ವಿಜಯಕುಮಾರ್ (ಕೊ ಚೇರ್‌ಮನ್), ಡಾ| ಶಶಿ ಪಾಟೀಲ (ಸದಸ್ಯ ಕಾರ್ಯದರ್ಶಿ), ಆರ್‌ಸಿಎಚ್‌ಒ ಡಾ| ಎಸ್.ಎಂ. ಹೊನಕೇರಿ, ದೀಪಕ್ ಮಡಿವಾಳರ, ಡಾ|ಸುಜಾತಾ ಹಸವಿಮಠ ಮತ್ತು ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಅ ಧಿಕಾರಿಗಳು ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಯೋಗಾಲಯ (ಟೆಸ್ಟಿಂಗ್) ನಿರ್ವಹಣಾ ತಂಡ: ಡಾ|ಪ್ರಮೋದ್ ಸಾಂಬ್ರಾಣಿ (ಕೋ ಚೇರ್‌ಮನ್), ಕಿಮ್ಸ್ ಸಂಸ್ಥೆಯ ಡಾ| ಆಶಾ ಪಾಟೀಲ (ಸದಸ್ಯ ಕಾರ್ಯದರ್ಶಿ), ಡಾ| ಮಹೇಶ್ ಮತ್ತು ಡಾ|ಹರ್ಷಿಕಾ ತಂಡದಲ್ಲಿದ್ದಾರೆ.
ಗುರುತಿಸಲಾದ ಕೋವಿಡ್ ಕೇರ್ ಕೇಂದ್ರಗಳು: ಹುಬ್ಬಳ್ಳಿ ಘಂಟಿಕೇರಿಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ (100 ಸಾಮರ್ಥ್ಯ), ಗೋಕುಲದಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯ (100 ಸಾಮರ್ಥ್ಯ), ಗೋಕುಲ ರಸ್ತೆಯಲ್ಲಿರುವ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಿಲಯ (100 ಸಾಮರ್ಥ್ಯ) ಮತ್ತು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ (100 ಸಾಮರ್ಥ್ಯ) ಗಳನ್ನು ಗುರುತಿಸಲಾಗಿದೆ. ರಚಿಸಿರುವ ಎಲ್ಲ ತಂಡಗಳು ತಮಗೆ ವಹಿಸಿದ ಕಾರ್ಯಗಳನ್ನು ಸಕಾಲದಲ್ಲಿ, ಸಮರ್ಪಕವಾಗಿ ನಿರ್ವಹಿಸಬೇಕು. ಆ ದಿನದ ಚಟುವಟಿಕೆಗಳು ಹಾಗೂ ವರದಿಗಳನ್ನು ಜಿಲ್ಲಾ ಆರೋಗ್ಯ ಅಧಿ ಕಾರಿಗಳಿಗೆ ಸಲ್ಲಿಸಬೇಕು. ತಂಡಗಳಿಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸತಕ್ಕದ್ದು. ಕರ್ತವ್ಯಲೋಪ ಕಂಡು ಬಂದಲ್ಲಿ ಅಂತಹ ಅ ಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ರನ್ವಯ ಶಿಸ್ತಿನ ಕ್ರಮ ಜರುಗಿಸಲಾಗುವುದು ಡಿಸಿ ನಿತೇಶ್ ಪಾಟೀಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.